Featured, ಇತರೆ, ಸ್ಥಳೀಯ

ಸುಳ್ಯ : ಜಯಪ್ರಕಾಶ್ ರೈ ಯವರ ಹುಟ್ಟು ಹಬ್ಬ ವಾಲಿಬಾಲ್ ಶಿಬಿರಾರ್ಥಿ ಗಳೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಣೆ

“ಕ್ರೀಡಾ ಮನೋಭಾವವನ್ನು ಬದುಕಿನಲ್ಲಿ ಅಳವಡಿಸಿ ಇತರರಿಗೆ ಸ್ಪೂರ್ತಿಯಾದ ಜೆ.ಪಿ. ರೈ : ಕೆ. ಎಂ. ಮುಸ್ತಫ”

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್  ಅಸೋಸಿಯೇಟ್ ಸೆಕ್ರೆಟರಿ ಯಾಗಿರುವ ಸುಳ್ಯದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರ ದಲ್ಲಿ ಕಳೆದ ಹಲವು ದಶಕಗಳಿಂದ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಎನ್. ಜಯಪ್ರಕಾಶ್ ರೈ ಯವರಿಗೆ  70 ರ ಹುಟ್ಟು ಹಬ್ಬದ ಸಂಭ್ರಮ

ಇದೇ ಸಂದರ್ಭದಲ್ಲಿ ಜೆ. ಪಿ. ಯವರ ನೇತೃತ್ವದಲ್ಲಿ  ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಆಶ್ರಯ ದಲ್ಲಿ ಸುಳ್ಯದಲ್ಲಿ  ನಡೆಯುತ್ತಿರುವ ವಾಲಿಬಾಲ್ ತರಬೇತಿ  ಶಿಬಿರ ದಲ್ಲಿ ಹಿತೈಷಿ ಗಳ ಕೋರಿಕೆಯಂತೆ ವಾಲಿಬಾಲ್ ಶಿಬಿರಾರ್ಥಿ ಗಳೊಂದಿಗೆ ಜಯಪ್ರಕಾಶ್ ರೈ ಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ ಎಂ. ಮುಸ್ತಫ
ಕ್ರೀಡೆ ಯ ಮೂಲಕ ಸುಳ್ಯವನ್ನು ದೇಶಕ್ಕೆ ಪರಿಚಯಿಸಿದ ಜೆ. ಪಿ. ಯವರು ಕ್ರೀಡಾ ಸ್ಫೂರ್ತಿ ಯ ಮೂಲಕ ಸಮಾಜ ದ ಎಲ್ಲರನ್ನು ಒಗ್ಗೂಡಿಸಿ ದವರು ಎಂದರು

ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್. ಸಂಶುದ್ದೀನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರಮೇಲು, ಪದಾಧಿಕಾರಿಗಳಾದ ಕೆ. ಬಿ. ಇಬ್ರಾಹಿಂ, ಜಯಪ್ರಕಾಶ್ ಕುಡೆಕಲ್ಲು, ಶಾಫಿ ಕುತ್ತಾಮೊಟ್ಟೆ, ಭವಾನಿ ಶಂಕರ ಕಲ್ಮಡ್ಕ, ರಾಜು ಪಂಡಿತ್,ನಿತಿನ್ ಗೂನಡ್ಕ ನ್ಯಾಷನಲ್ ಕೋಚ್ ಮನೋಜ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು, ಕೆಪಿಸಿಸಿ ಮಾನವ ಹಕ್ಕುಗಳ ವಿಭಾಗ ಕಾರ್ಯದರ್ಶಿ ಮೂಸ ಪೈoಬಚ್ಚಾಲ್, ಎಸ್ ಸಿಕ್ಸ್ ಟ್ರಸ್ಟ್ ಅಧ್ಯಕ್ಷ ನವೀನ್ ಅಂಕರ್, ಶಿವಕುಮಾರ್ ಕಂಡಡ್ಕ, ಶುಭಕರ್ ನಾಯಕ್, ಮೊದಲಾದವರು ಉಪಸ್ಥಿತರಿದ್ದರು ಗೋಕುಲ್ ದಾಸ್ ಸ್ವಾಗತಿಸಿ ವಂದಿಸಿದರು
m

Related Posts