Featured, ಇತರೆ, ಸ್ಥಳೀಯ

ಎಂಐಜೆಜಿಸಿ ಪೆರಾಜೆ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ

ಅಶ್ರಫ್ ಬಿಳಿಯಾರ್ ಅಧ್ಯಕ್ಷರಾಗಿ ಆಯ್ಕೆ – ಝಾಹಿರ್ ಪೆರಾಜೆ, ನಿಝಾರ್ ಬಿಳಿಯಾರ್‌ಗೆ ಪ್ರಮುಖ ಹೊಣೆಗಾರಿಕೆ

ಪೆರಾಜೆ ಮುನವಿರುಲ್ ಇಸ್ಲಾಂ ಜಮಾಅತ್ ಗಲ್ಸ್ ಕಮಿಟಿಯ ವಾರ್ಷಿಕ ಮಹಾಸಭೆಯು ಮೇ 30ರಂದು ಆನ್ಲೈನ್ ನಲ್ಲಿ  ವರ್ಚುವಲ್ ಮೂಲಕ ಮೇ 30 ರಂದು ನಡೆಯಿತು.
ಸಮಿತಿಯ ಅಧ್ಯಕ್ಷ ಅಶ್ರಫ್ ಬಿಳಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಶಂಸುದ್ದೀನ್ ಮುಸ್ಲಿಯಾರ್ ದುವಾ ನೆರವೇರಿಸಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಝಾಹಿರ್ ಪೆರಾಜೆ ವಾರ್ಷಿಕ ವರದಿಯನ್ನುಮಂಡಿಸಿದರೆ, ಖಜಾಂಜಿ ನಿಝಾರ್ ಬಿಳಿಯಾರ್ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು. ಅಧ್ಯಕ್ಷ ಅಶ್ರಫ್‌ ಬಿಳಿಯಾರ್ ಅವರು ಅಧ್ಯಕ್ಷೀಯ ಭಾಷಣ ಮಾಡಿ ಸಂಘಟನೆಯ ಕಾರ್ಯಚಟುವಟಿಕೆಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು.
ಬಳಿಕ ಸಂಘಟನೆಯ ಅಭಿವೃದ್ಧಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ನೂತನ ಕಾರ್ಯಕಾರಿ ಸಮಿತಿ ಸದಸ್ಯರು

ಬಳಿಕ ನೂತನ ಸಮಿತಿಯ ರಚನೆ ನಡೆದು 2026-27ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಹಮೀದ್ ಎಂ.ಐ. ಅವರನ್ನು ಗೌರವಾಧ್ಯಕ್ಷರಾಗಿ, ಅಶ್ರಫ್ ಬಿಳಿಯಾ‌ರ್ ಅವರನ್ನು ಅಧ್ಯಕ್ಷರಾಗಿ, ಹಮೀದ್ ಪಿ.ಬಿ. ಹಾಗೂ ಹುಝಫಾ ಅವರನ್ನು ಉಪಾಧ್ಯಕ್ಷರಾಗಿ, ಝಾಹಿರ್ ಪೆರಾಜೆ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಉಬೈಸ್ ಅವರನ್ನು ಜೊತೆ ಕಾರ್ಯದರ್ಶಿಯಾಗಿ ಹಾಗೂ ನಿಝಾರ್ ಬಿಳಿಯಾರ್ ಅವರನ್ನು ಕೋಶಾಧಿಕಾರಿ ಯಾಗಿ ಆಯ್ಕೆ ಮಾಡಲಾಯಿತು.

ಇದೇ ವೇಳೆ ಶಂಸುದ್ದೀನ್ ಮುಸ್ಲಿಯಾರ್ ಅವರನ್ನು ಗೌರವ ಸಲಹೆಗಾರರಾಗಿ, ಶಫೀಕ್ ಹಾಗೂ ಖಾದರ್ ಮದೀನಾ ಅವರನ್ನು ವೆಲ್ವೇರ್ ಸಂಯೋಜಕರಾಗಿ ಮತ್ತು ತಾಹಿರ್ ಅಹದ್‌ ಅವರನ್ನು ಮೀಡಿಯಾ ಇನ್‌ಚಾರ್ಜ್ ಆಗಿ ನೇಮಕಗೊಳಿಸಲಾಯಿತು.
ಹುಝೈಫಾ ರವರು ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಝಾಹಿರ್ ಪೆರಾಜೆ ಧನ್ಯವಾದ ಅರ್ಪಿಸಿದರು.
m

Related Posts