Featured, ಅಂಕಣ, ಸ್ಥಳೀಯ

ಕಲ್ಲಿಕೋಟೆಯ ಜಾಮಿ‌ಅ ಮರ್ಕಝ್‌ನಲ್ಲಿ ‘ಸಾಹಿತ್ಯ ಸಾಂಗತ್ಯ’ ಕಾರ್ಯಕ್ರಮ

ಕೇರಳದ ಕಲ್ಲಿಕೋಟೆಯಲ್ಲಿ ಕಾರ್ಯಾಚರಿಸುತ್ತಿರುವ ಜಾಮಿ‌ಅ ಮರ್ಕಝ್ ವಿದ್ಯಾಸಂಸ್ಥೆಯಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳ ಒಕ್ಕೂಟದ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮವು ಜೂನ್ 22 ಸೋಮವಾರ ರಾತ್ರಿ ಕೆ.ಎಸ್.ಒ. ಅಧ್ಯಕ್ಷರಾದ ಹಾಫಿಳ್ ಜಾಝಿಲ್ ರಹ್ಮಾನರ ಅಧ್ಯಕ್ಷತೆಯಲ್ಲಿ ಕಾಮಿಲ್ ಇಜ್ತಿಮಾ ಸಭಾಂಗಣದಲ್ಲಿ ರಾತ್ರಿ ಹತ್ತು ಗಂಟೆಗೆ ನಡೆಯಿತು. ಸಂಸ್ಥೆಯ ಮುದರ್ರಿಸ್ ಸಯ್ಯಿದ್ ಜಝೀಲ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಬಳಿಕ ‘ಪರ್ಶಿಯನ್ ಸೂಫಿ ಕಾವ್ಯಗಳು’ ಬಗ್ಗೆ ಮಾತನಾಡಿದ ಕವಿ ಹಾಗೂ ಅನುವಾದಕರಾದ ಪುನೀತ್ ಅಪ್ಪು ಭಾರತದಲ್ಲಿ ಪರ್ಷಿಯನ್ ಸಾಹಿತ್ಯದ ಉಗಮ ಹಾಗೂ ಬೆಳವಣಿಗೆಯ ಬಗ್ಗೆ ಮಾತನಾಡಿದರು. ಜೊತೆಗೆ ಉಪನ್ಯಾಸದಲ್ಲಿ ಇಬ್ನ್ ಅರಬಿ, ಹಲ್ಲಾಜ್, ರಾಬಿಯತುಲ್ ಅದವಿಯಾ ಮುಂತಾದ ಸೂಫಿಗಳ ಬದುಕಿಗೆ ಬೆಳಕು ಚೆಲ್ಲಿದರು.

ರಝಾ ಕಾವ್ಯ ಲೋಕ ಎಂಬ ವಿಷಯದಲ್ಲಿ ಮಾತನಾಡಿದ ಸೂಫಿ ಚಿಂತಕ ಡಾ. ಸಿ.ಎಂ. ಹನೀಫ್ ಅಮ್ಜದಿ ಅವರು ಉರ್ದು ಸಾಹಿತ್ಯದ ಗಝಲ್, ಮಸ್ನವಿಯ ಬಗ್ಗೆ ಮಾತನಾಡಿ ಉರ್ದು ಸಾಹಿತ್ಯ ಸೌಂದರ್ಯವನ್ನು ಸೊಗಸಾಗಿ ವಿವರಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜನಪ್ರಿಯ ಕಥೆಗಾರ ಮುನವ್ವರ್ ಜೋಗಿಬೆಟ್ಟು, ಪತ್ರಕರ್ತ ಸಿನಾನ್ ಇಂದಬೆಟ್ಟು ಹಾಗೂ ಯುವ ಕವಿ ಯಂಶ ಬೇಂಗಿಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶ್ರಫ್ ನಾವೂರು ಸ್ವಾಗತಿಸಿದರು. ಹಾಫಿಳ್ ಸುಹೈಲ್ ಮಾಣಿ ಬುಡೋಳಿ ನಿರೂಪಿಸಿ, ವಂದಿಸಿದರು.

m

Related Posts