ಪಾಣೆಮಂಗಳೂರು ಅಕ್ಕರಂಗಡಿಯ ಕೇಂದ್ರ ಜುಮಾ ಮಸೀದಿಯ ಅಧೀನದಲ್ಲಿರುವ ನೆಹರುನಗರದ ಬದ್ರಿಯಾ ಜುಮಾ ಮಸೀದಿಯ ಮದ್ರಸ ಉಸ್ತಾದರ ವಾಸ್ತವ್ಯದ ನೂತನ ಕಟ್ಟಡ ಹಾಗೂ ಮರ್‌ಹೂಂ ನಸೀಮಾ ಬಾನು ಸ್ಮರಣಾರ್ಥ ನಿರ್ಮಿಸಲಾದ ಮಹಿಳಾ ಯಾತ್ರಿಕರ ನಮಾಝಿನ ಕೊಠಡಿಯನ್ನು ಶುಕ್ರವಾರದಂದು ಸಯ್ಯಿದ್ ಶಮೀಂ ತಂಙಳ್ ಕುಂಬೋಳ್ ಉದ್ಘಾಟಿಸಿದರು.

ಅದೇ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ ಕಚೇರಿ ಕೊಠಡಿಯನ್ನು ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅಧ್ಯಾಪಕರ ವಾಸ್ತವ್ಯದ ಕೊಠಡಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದಾವುದ್ ಇಸ್ಮಾಯಿಲ್ ಪೈಝಿ, ಝುಬೇರ್ ದಾರಿಮಿ, ಎನ್.ಎಚ್. ಆದಂ ಫೈಝಿ, ಪಿ.ಜೆ. ಅಬ್ದುಲ್ ಹಮೀದ್ ನಝರ್, ಬಿ.ವೈ. ಅಬ್ದುಲ್ ಗಪೂರ್, ಮೊಹಮ್ಮದ್ ನಿಯಾಝ್, ನೌಶಾದ್ ಎ.ಕೆ., ಇಮ್ಮಿಯಾಝ್ ಮಂಗಳೂರು, ಅಬ್ದುಲ್ ಹಮೀದ್, ಹನೀಫ್ ಮುಸ್ಲಿಯರ್, ರಶೀದ್ ಹನಿಫೀ, ಹಾಜಿ ಸೈಫುದ್ದೀನ್ ಮೊಹಮ್ಮದ್, ಪಿ.ಎಸ್. ಅಬ್ದುಲ್ ಹಮೀದ್, ಎಚ್.ಎಚ್. ಅಫೀಝ್, ಪಿ.ಎಂ. ಇಕ್ಬಾಲ್, ಪಿ.ಎಸ್. ಅಹಮದ್ ಬಶೀರ್, ಅಬ್ದುಲ್ ಹಮೀದ್ ಬಾವುಂಞಿ, ರಿಯಾಝ್ ನೆಹರುನಗರ, ಹಸನ್ ಹಾಜಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ತಸ್ಲೀಮ್ ಆರೀಫ್ ಸ್ವಾಗತಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿ, ಅಬ್ದುಲ್ ರಹಿಮಾನ್ ಪಿ.ಜೆ. ವಂದಿಸಿದರು.




m

