Featured, ಇತರೆ, ಸ್ಥಳೀಯ

FIFA World Cup 2026 : ವಿಲಿಯಮ್ಸ್‌ನ ಮ್ಯಾಜಿಕ್ ಪಾಸ್ – ಟೊರೇಸ್‌ನ ಗೆಲುವಿನ ಗೋಲು! : ಅರ್ಜೆಂಟೀನಾವನ್ನು ಮಣಿಸಿ ಸ್ಪೇನ್ ವಿಶ್ವ ಚಾಂಪಿಯನ್!

ಫೈನಲ್ ಪಂದ್ಯಾಟದ ಎರಡು ತಂಡಗಳ ಆಟದ ಸ್ಥಿತಿ  ಕೆಂಪು ಸ್ಪೇನ್ ತಿಳಿ ನೀಲಿ ಅರ್ಜೆಂಟೀನಾ

ವಿಲಿಯಮ್ಸ್ ಅವರ ಸೃಜನಾತ್ಮಕ ಆಟ ಮತ್ತು ಟೊರೇಸ್ ಅವರ ನಿರ್ಣಾಯಕ ಗೋಲು ಫೈನಲ್ ಪಂದ್ಯದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿತು 

ನ್ಯೂಜೆರ್ಸಿ, ಜು.20: ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್, 16 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಹೆಚ್ಚುವರಿ ವೇಳೆಯಲ್ಲಿ ಫೆರ್ರಾನ್ ಟೊರೇಸ್ ದಾಖಲಿಸಿದ ಏಕೈಕ ಗೋಲು ಸ್ಪೇನ್‌ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿತು.

ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯ ಆರಂಭದಿಂದಲೇ ಸ್ಪೇನ್ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಲಮಿನ್ ಯಮಾಲ್, ನಿಕೊ ವಿಲಿಯಮ್ಸ್ ಹಾಗೂ ರೋಡ್ರಿ ನೇತೃತ್ವದ ಮಧ್ಯಭಾಗ ಅರ್ಜೆಂಟೀನಾದ ಮೇಲೆ ನಿರಂತರ ಒತ್ತಡ ಹೇರಿತು. ಆದರೆ ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಸ್ ಹಲವು ಅದ್ಭುತ ಸೇವ್‌ಗಳನ್ನು ಮಾಡಿ ಮೊದಲಾರ್ಧವನ್ನು ಗೋಲುರಹಿತವಾಗಿರಿಸಿದರು.
ದ್ವಿತೀಯಾರ್ಧದಲ್ಲೂ ಸ್ಪೇನ್ ದಾಳಿಯನ್ನು ಮುಂದುವರಿಸಿದರೆ, ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಪ್ರತಿದಾಳಿಗೆ ಪ್ರಯತ್ನಿಸಿತು. ಆದರೆ ಸ್ಪೇನ್‌ನ ಸಂಘಟಿತ ರಕ್ಷಣೆಯ ಮುಂದೆ ಅರ್ಜೆಂಟೀನಾಗೆ ಸ್ಪಷ್ಟ ಅವಕಾಶಗಳು ಸಿಗಲಿಲ್ಲ. ಪಂದ್ಯದ ಅಂತಿಮ ಹಂತದಲ್ಲಿ ಎನ್ಜೊ ಫೆರ್ನಾಂಡೀಸ್ ಕೆಂಪು ಕಾರ್ಡ್ ಪಡೆದ ಕಾರಣ ಅರ್ಜೆಂಟೀನಾ 10 ಆಟಗಾರರೊಂದಿಗೆ ಆಡಬೇಕಾಯಿತು.
ಹೆಚ್ಚುವರಿ ವೇಳೆಯ 106ನೇ ನಿಮಿಷದಲ್ಲಿ ನಿಕೊ ವಿಲಿಯಮ್ಸ್ ನೀಡಿದ ನಿಖರ ಪಾಸ್ ಅನ್ನು ಫೆರ್ರಾನ್ ಟೊರೇಸ್ ಗೋಲಾಗಿ ಪರಿವರ್ತಿಸಿ ಸ್ಪೇನ್‌ಗೆ ಅಮೂಲ್ಯ ಮುನ್ನಡೆ ತಂದುಕೊಟ್ಟರು. ಉಳಿದ ಸಮಯದಲ್ಲಿ ಸ್ಪೇನ್ ರಕ್ಷಣಾತ್ಮಕ ಆಟವಾಡಿ ಮುನ್ನಡೆಯನ್ನು ಕಾಯ್ದುಕೊಂಡು ಅಂತಿಮ ಸಿಟಿಯೊಂದಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು.
ಈ ಗೆಲುವಿನೊಂದಿಗೆ ಸ್ಪೇನ್ ತನ್ನ ಎರಡನೇ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, 2010ರ ಬಳಿಕ ಮತ್ತೆ ಫುಟ್ಬಾಲ್ ವಿಶ್ವದ ಅಗ್ರಸ್ಥಾನಕ್ಕೇರಿದೆ. ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಇದು ನಿರಾಸೆಯ ಸೋಲಾಗಿದ್ದು, ಲಿಯೋನೆಲ್ ಮೆಸ್ಸಿಯ ವಿಶ್ವಕಪ್ ವೃತ್ತಿಜೀವನದ ಕೊನೆಯ ಪಂದ್ಯವಾಗುವ ಸಾಧ್ಯತೆಯೂ ಚರ್ಚೆಗೆ ಕಾರಣವಾಗಿದೆ

ಫೌಲ್‌ಗಳ ಸರದಾರ ಅರ್ಜೆಂಟೀನಾದ ಫರ್ನಾಂಡೀಸ್‌ಗೆ ಕೆಂಪು ಕಾರ್ಡ್..?

ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಅರ್ಜೆಂಟೀನಾದ ಮಿಡ್‌ಫೀಲ್ಡರ್ ಎನ್‌ಜೊ ಫರ್ನಾಂಡೀಸ್ ಪಂದ್ಯದ ವೇಳೆ ಪದೇಪದೇ ಕಠಿಣ ಫೌಲ್‌ಗಳನ್ನು ಎಸಗಿದ ಹಿನ್ನೆಲೆಯಲ್ಲಿ ರೆಫರಿ ಅವರಿಗೆ ಕೆಂಪು ಕಾರ್ಡ್ ತೋರಿಸಿ ಮೈದಾನದಿಂದ ಹೊರ ಕಳುಹಿಸಿದರು. ಈ ಬೆಳವಣಿಗೆಯಿಂದ ಅರ್ಜೆಂಟೀನಾ ಹತ್ತು ಆಟಗಾರರೊಂದಿಗೆ ಪಂದ್ಯವನ್ನು ಮುಂದುವರಿಸಬೇಕಾಯಿತು. ಪಂದ್ಯದ ಮೇಲೆ ಈ ನಿರ್ಧಾರ ಮಹತ್ವದ ಪರಿಣಾಮ ಬೀರಿತು

10 ಗೋಲುಗಳೊಂದಿಗೆ ಗೋಲ್ಡನ್ ಬೂಟ್ ಗೆದ್ದ ಕೈಲಿಯನ್ ಎಂಬಾಪ್ಪೆ

ಗೋಲ್ಡನ್ ಬೂಟ್ ಪ್ರಶಸ್ತಿ ಫ್ರಾನ್ಸ್‌ನ ಸ್ಟಾರ್ ಫಾರ್ವರ್ಡ್ ಕೈಲಿಯನ್ ಎಂಬಾಪ್ಪೆ ಅವರಿಗೆ ಸಂದಿದೆ. ಅವರು ಟೂರ್ನಿಯಲ್ಲಿ ಒಟ್ಟು 10 ಗೋಲುಗಳನ್ನು ದಾಖಲಿಸಿ ಅಗ್ರ ಗೋಲ್ ಸ್ಕೋರರ್ ಆಗಿ ಹೊರಹೊಮ್ಮಿದರು. ಆದರೆ ಈ ಬಾರಿ ಲಿಯೋನೆಲ್ ಮೆಸ್ಸಿಗೆ ಅವರ ದಾಖಲೆಯನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ.

ರೋಡ್ರಿಗೆ ಗೋಲ್ಡನ್ ಬಾಲ್ ಪ್ರಶಸ್ತಿ; ವಿಶ್ವಕಪ್‌ನ ಅತ್ಯುತ್ತಮ ಆಟಗಾರನಾಗಿ ಮೆರಗು

ಸ್ಪೇನ್‌ನ ಮಿಡ್‌ಫೀಲ್ಡರ್ ರೋಡ್ರಿ 2026ರ ಫಿಫಾ ವಿಶ್ವಕಪ್‌ನ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೂರ್ನಿಯುದ್ದಕ್ಕೂ ಸ್ಥಿರ ಹಾಗೂ ಅದ್ಭುತ ಪ್ರದರ್ಶನ ನೀಡಿದ ರೋಡ್ರಿ, ಸ್ಪೇನ್‌ನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಅತ್ಯುತ್ತಮ ಆಟಗಾರ ಎಂಬ ಗೌರವಕ್ಕೆ ಭಾಜನರಾದರು.

ಪೌ ಕ್ಯೂಬಾರ್ಸಿಗೆ ಯುವ ಆಟಗಾರ ಪ್ರಶಸ್ತಿ; ಉನೈ ಸೈಮನ್‌ಗೆ ಗೋಲ್ಡನ್ ಗ್ಲೋವ್

ಸ್ಪೇನ್‌ನ ಯುವ ಸೆಂಟರ್-ಬ್ಯಾಕ್ ಪೌ ಕ್ಯೂಬಾರ್ಸಿ 2026ರ ಫಿಫಾ ವಿಶ್ವಕಪ್‌ನ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ, ಟೂರ್ನಿಯುದ್ದಕ್ಕೂ ಅತ್ಯುತ್ತಮ ಗೋಲ್‌ಕೀಪಿಂಗ್ ಪ್ರದರ್ಶನ ನೀಡಿದ ಸ್ಪೇನ್‌ನ ಉನೈ ಸೈಮನ್ ಪ್ರತಿಷ್ಠಿತ ಗೋಲ್ಡನ್ ಗ್ಲೋವ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
m

Related Posts