ದಕ್ಷಿಣ ಭಾರತದ ಅತ್ಯುನ್ನತು ಸಮನ್ವಯ ಶಿಕ್ಷಣ ಸಂಸ್ಥೆ ಜಾಮಿಯ ಸಅದಿಯ್ಯ ಇದರ ಶರೀಅತ್ ಕಾಲೇಜು ಹಳೆ ವಿದ್ಯಾರ್ಥಿ ಸಂಘಟನೆ ಎಂ.ಯು.ಎಸ್. ಸುಳ್ಯ ಝೋನ್ ಸಮಿತಿ ವತಿಯಿಂದ ಸಂಪೂರ್ಣ ಸಅದಿ ಸಂಗಮ ಹಾಗು ಮಹಾತ್ಮಾರ ಅನುಸ್ಮರಣಾ ಕಾರ್ಯಕ್ರಮವು ಆಗಸ್ಟ್ 13 ಗುರುವಾರದಂದು, ಸಂಘದ ಅಧ್ಯಕ್ಷರಾದ ಸಯ್ಯಿದ್ ತ್ವಾಹಿರ್ ಸಅದಿ ಯುವರ ಅಧ್ಯಕ್ಷತೆಯಲ್ಲಿ ಸುಳ್ಯ ಅನ್ಸಾರ್ ಭವನದಲ್ಲಿ ನಡೆಯಿತು.

ಮೇನಾಲ ಅಬ್ದುಲ್ಲಾಹಿ ಸಅದಿ ಯುವರ ಉದ್ಘಾಟನೆಯೊಂದಿಗೆ ಚಾಲನೆಗೊಂಡ ಸಮಾರಂಭದಲ್ಲಿ ಎಂ.ಯು.ಎಸ್. ಕೇಂದ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಅನುಸ್ಮರಣಾ ಭಾಷಣ ಮಾಡಿದರು. ಕೇಂದ್ರ ಸಮಿತಿ ಕಾರ್ಯದರ್ಶಿ ಚಿಯ್ಯೂರು ಅಬ್ದುಲ್ಲ ಸಅದಿ ಸಂಘಟನೆಯ ಕಾರ್ಯವೈಖರಿ, ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಅದೀಸ್ ನಾಯಕರಾದ ಹನೀಫ್ ಸ ಅದಿ ಪಂಜಿಕ್ಕಲ್ಲು, ಜಿ.ಎಸ್.ಸಅದಿ ಇರುಂಬಳ್ಳ, ಅಶ್ರಫ್ ಸಅದಿ ಅಡ್ಕ, ಮುನೀರ್ ಅಹ್ಮದ್ ಸಅದಿ ಪೈಚಾರ್ ಸಹಿತ ತಾಲೂಕಿನ ಸಅದಿಗಳು ಭಾಗವಹಿಸಿದರು.
ಸಭೆಗೆ ಪ್ರಧಾನ ಕಾರ್ಯದರ್ಶಿ ರಿಯಾನ್ ಸಅದಿ ಬೆಳ್ಳಾರೆ ಸ್ವಾಗತಿಸಿ ಜೊ.ಕಾರ್ಯದರ್ಶಿ ನೌಫಲ್ ಸಅದಿ ಧನ್ಯವಾದವಿತ್ತರು.
