Featured, ಅಂಕಣ, ಸ್ಥಳೀಯ

ಗಣರಾಜೋತ್ಸವ ದಿನಾಚರಣೆ : ಪಾಲಿಬೆಟ್ಟದಲ್ಲಿ ಗ್ರಾಂಡ್ ಅಸ್ಸೆಂಬ್ಲಿ

ಸುನ್ನಿ ಬಾಲ ಸಂಘ (ರಿ) ಎಸ್.ಬಿ.ಎಸ್ ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಮದ್ರಸಾ ಆಶ್ರಯದಲ್ಲಿ ಜನವರಿ 26 ಗಣರಾಜೋತ್ಸವ ದಿನಾಚರಣೆಯು ಧ್ವಜಾರೋಹಣ, ರಾಷ್ಟ್ರಗೀತೆ, ದೇಶಭಕ್ತಿ ಗೀತೆ, ಸಂದೇಶ ಭಾಷಣದೊಂದಿಗೆ ಗ್ರಾಂಡ್ ಅಸ್ಸೆಂಬ್ಲಿಯಾಗಿ ಸಂಭ್ರಮದಿಂದ ಆಚರಿಸಲಾಯಿತು. ಪಾಲಿಬೆಟ್ಟ ಮುಹ್ಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರಾದ ಪಿ.ಕೆ ಇಸ್ಮಾಯೀಲ್ ಹಾಜಿ ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದರು.

ಮದ್ರಸಾ ವಿದ್ಯಾರ್ಥಿಗಳಾದ ನಿಹಾನ್, ಝಯಾನ್, ಝಿದಾನ್ ಹಾಗೂ ಶೆಝಿನ್ ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆ ಆಲಾಪಿಸಿದರು. ಪಾಲಿಬೆಟ್ಟ ಜುಮಾ ಮಸ್ಜಿದ್ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶಮೀರ್ ಮುನ್ನ, ಉಪಾಧ್ಯಕ್ಷ ಝೈನುದ್ದೀನ್ ಎಂ, ಖಜಾಂಜಿ ಮುಸ್ತಫಾ ಟಿ.ಕೆ, ಕಾರ್ಯದರ್ಶಿ ಫಝಲ್ ಸಿ.ಎಂ ಸಮಿತಿ ಸದಸ್ಯರಾದ ಬಶೀರ್ ಎಂ.ಎ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪಾಲಿಬೆಟ್ಟ ಮಹಲ್ಲ್ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಹಾರಿಸ್ ಹಾಜಿ ಮತ್ತು ಅಬೂಬಕರ್ ಇಂಡಿಯನ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪಾಲಿಬೆಟ್ಟ ಮುಹಿಮ್ಮಾತ್ತುದ್ದೀನ್ ಮದ್ರಸಾದ 130ರಷ್ಟು ವಿದ್ಯಾರ್ಥಿಗಳು ಅಸ್ಸೆಂಬ್ಲಿಯಲ್ಲಿ ಭಾಗಿಯಾದರು. ಮದ್ರಸಾ ಸದರ್ ಮುಅಲ್ಲಿಂ ಸಬಾಹ್ ಸಖಾಫಿ ಅಲ್ ಹಿಮಮಿ‌ ಗಣರಾಜ್ಯೋತ್ಸವ ಸಂದೇಶ ಭಾಷಣಗೈದರು. ಮಹಲ್ಲ್ ಸಮಿತಿ ಕಾರ್ಯದರ್ಶಿ ಶಮೀರ್ ಎ.ಹೆಚ್ ಆಶಂಸಾ ಮಾತುಗಳನ್ನಾಡಿದರು. ಮದ್ರಸಾ ಅಧ್ಯಾಪಕರಾದ ಅಬ್ದುರ್ರಹ್ಮಾನ್ ಫಾಝಿಲಿ, ಅಲಿ ಮುಸ್ಲಿಯಾರ್ ಉಪಸ್ಥಿತರಿದ್ದರು. ಪಾಲಿಬೆಟ್ಟ ಮಹಿಮ್ಮಾತ್ತುದ್ದೀನ್ ಮದ್ರಸಾ ಅಧ್ಯಾಪಕರಾದ ಜಲಾಲ್ ನಿಝಾಮಿ ಸ್ವಾಗತಿಸಿ ವಂದಿಸಿದರು.

m

Related Posts