ರಹ್ಮಾನಿಯಾ ಜುಮಾ ಮಸ್ಜಿದ್ ಹಾಗೂ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಇದರ ಅಧೀನದ ರಹ್ಮಾನಿಯಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ರಹ್ಮಾನಿಯಾ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಪ್ರಧಾನ ಕಾರ್ಯದರ್ಶಿ ಹಾಗೂ ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಜೆ ಹೆಚ್ ಅಬೂಬಕ್ಕರ್ ಸಿದ್ದೀಕ್ ಧ್ವಜಾರೋಹಣ ನೆರವೇರಿಸಿದರು. ನೂರುಲ್ ಹುದಾ ಅರ್ರಿಫಾಇಯ್ಯಾ ಮದ್ರಸ ಸದರ್ ಉಸ್ತಾದರಾದ ರಹೀಂ ಹನೀಫಿ ಗಣರಾಜ್ಯೋತ್ಸವ ಸಂದೇಶ ಸಾರಿದರು. ರಹ್ಮಾನಿಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮುಸ್ತಫ ಕಾಜೂರು, ಮುಖ್ಯೋಪಾಧ್ಯಾಯಿನಿ ಸಂಶಾದ್, ಮದ್ರಸ ಉಸ್ತಾದರುಗಳಾದ ಹಾರಿಸ್ ಲತೀಫಿ, ರಫೀಕ್ ಮದನಿ ಹಾಗೂ ರಾಹ ಪಬ್ಲಿಕ್ ಸ್ಕೂಲ್ ನ ಶಿಕ್ಷಕರು, ಉಪಸ್ಥಿತರಿದ್ದರು. ರಹ್ಮಾನಿಯಾ ಪ್ರೌಢಶಾಲೆ, ರಾಹ ಪಬ್ಲಿಕ್ ಸ್ಕೂಲ್ ಹಾಗೂ ದಅವಾ ದರ್ಸ್ ವಿದ್ಯಾರ್ಥಿಗಳು ಭಾಗವಹಿಸಿದರು. ಶಿಕ್ಷಕರಾದ ಸಾದಿಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಾಬಿರ್ ಹಿಮಮಿ ಸಖಾಫಿ ವಂದಿಸಿದರು.






m
