Featured, ಇತರೆ, ಸ್ಥಳೀಯ

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ (ರಿ.) ಗಾಂಧಿನಗರ 3 ದಿನಗಳ ಧಾರ್ಮಿಕ ಮತ ಪ್ರವಚನ ಪರಂಪರೆಗೆ ಪ್ರೌಢ ಸಮಾಪ್ತಿ

ಯುವ ಸಮೂಹವೇ ನಾಶಕಾರಿಗಳಾಗದಿರಿ, ಸಮಸ್ಯೆಗಳನ್ನು ಉಂಟು ಮಾಡುವವರಾಗದಿರಿ ಮದುವೆ ಸಂಭ್ರಮದಲ್ಲಿನ ಆಡಂಬರ, ಅತಿರೇಕದ ವರ್ತನೆಗಳಿಂದ ದೂರವಿರಿ; ಪೇರೋಡ್ ಉಸ್ತಾದ್

ಸುಳ್ಯ, ಗಾಂಧಿನಗರ ಜ.28: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಧಾರ್ಮಿಕ ಮತ ಪ್ರಭಾಷ ಕಾರ್ಯಕ್ರಮ ಜ.28 ರಂದು ಸಮಾಪನಗೊಂಡಿತು.

ಸೈಯದ್ ಕುಂಞಿಕೋಯ ತಂಙಳ್ ಸಹದಿ ದುವಾಃ ನೆರವೇರಿಸಿ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು‌. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್ ಸಭಾ ಅಧ್ಯಕ್ಷತೆಯನ್ನು  ವಹಿಸಿದರು.

ನಾವು ಪ್ರಭಾಷಣಗಾರರ ಶೈಲಿ ,ರೂಪಗಳನ್ನು ನೋಡಿ ಬೆಲೆ ಕಲ್ಪಿಸುವುದನ್ನು ಬಿಟ್ಟು ಅವರು ಹೇಳಿಕೊಟ್ಟ ವಿಚಾರಗಳನ್ನು ಮೈಗೂಡಿಸಿಕೊಳ್ಳಿ: ಸಿರಾಜುದ್ದೀನ್ ಸಖಾಫಿ

ಸ್ವಾಗತ ಪ್ರಭಾಷಣ ಮಾಡಿ ಮಾತನಾಡಿದ   ಉಸ್ತಾದ್ ಸಿರಾಜುದ್ದೀನ್ ಸಖಾಫಿ “ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಸಂಸ್ಥೆಯು ಹಲವಾರು ವರ್ಷಗಳಿಂದ ಪ್ರಭಾಷಣಗಾರರನ್ನು ಕರೆಸಿ ದೀನಿ ಆದರ್ಶಗಳನ್ನು ಸಾರುತ್ತಿದೆ. ಇದರ ಸದುಪಯೋಗಪಡಿಸಬೇಕಿದೆ. ನಾವು ಪ್ರಭಾಷಣಗಾರರ ಭಾಷಣ ಶೈಲಿ ಹಾಗೂ ರೂಪಗಳನ್ನು ಮಾತ್ರ ನೋಡಿಕೊಂಡು ಬೆಲೆ ಕಲ್ಪಿಸುವುದಲ್ಲ ಬದಲಾಗಿ ಅವರನ್ನು ಕಲಿಸಿಕೊಡುವ ಧರ್ಮ ಆಚಾರ ವಿಚಾರಗಳನ್ನು ತಮ್ಮ ಬದುಕಿಗೆ ಅಳವಡಿಸಿಕೊಳ್ಳಬೇಕಾದಂತಹ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರವಾದಿ ವಚನ ಹದೀಸ್ ಉಲ್ಲೇಖಿಸಿ ಮಾತನಾಡಿ “ನೀನು ಒಂದು ಯಾತ್ರಿಕನಂತೆ ಜೀವಸಬೇಕು ಯಾತ್ರೆ ಮುಗಿಯುವ ಒಳಗಾಗಿ ಪುಣ್ಯಕರ್ಮಗಳನ್ನ ಮಾಡಬೇಕು, ಈ ಜೀವನದ ಯಾತ್ರೆಯು ಕೊನೆಗೊಳ್ಳಲಿದೆ, ಹಲವು ಪುಣ್ಯವೇರಿದ ದಿನಗಳು ಈಗಾಲೆ ಕಳೆದು ಹೋಗಿದೆ ಇನ್ನುಳಿದ ದಿನಗಳನ್ನಾದರು ಪುಣ್ಯ ಕಾರ್ಯಗಳನ್ನು ಮಾತ್ರ ಮಾಡಿ ಅಲ್ಲಾಹನಿಗೆ ಹತ್ತಿರವಾಗಲು ಪ್ರಯತ್ನಿಸಬೇಕು ಎಂದರು.

1968 ರಿಂದ ಇಲ್ಲಿಯವರೆಗೆ ಸಮುದಾಯ ಸೇವೆಯೊಂದಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿ ಕಾರ್ಯಾಚರಿಸಿಕೊಂಡು ಬರುತ್ತಿರುವ ಸಂಸ್ಥೆ AMA: ಅಶ್ರಫ್ ಕಾಮಿಲ್ ಸಖಾಫಿ

ಖತೀಬರಾದ ಅಲ್ಹಾಜ್ ಅಶ್ರಫ್ ಖಾಮಿಲ್ ಸಖಾಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ  “600 ಕ್ಕೂ ಅಧಿಕ ಮನೆಗಳಿರುವ ಬೃಹತ್ ಮಹಲ್ ಸುಳ್ಯ  ಗಾಂಧಿನಗರ  ಜಮಾಅತ್ ಆಗಿದೆ‌. ಬಹಳ  ಹಿಂದಿನಿಂದಲೂ ಪರಿಶುದ್ಧ ಇಸ್ಲಾಮಿನ ಯಶಸ್ಸು ಎತ್ತಿ ಹಿಡಿಯುವಲ್ಲಿ ಮತ್ತು ಇಸ್ಲಾಮಿನ ಆದರ್ಶಳನ್ನು ಪಾಲಿಸುವುದು ಮತ್ತು ಗೌರವಿಸುವದರಲ್ಲಿ ಬಹಳ ಮುಂಚೂಣಿಯಲ್ಲಿರುವ ಹಾಗೂ ವಿಜ್ಞಾನದ ಕಡೆಗೆ ಅತ್ಯಂತ ಪ್ರಾಮುಖ್ಯತೆ ಕಲ್ಪಿಸುತ್ತ ಬಂದಿರುವ ಪ್ರದೇಶವಾಗಿದೆ ಗಾಂಧಿನಗರ, ದೀರ್ಘಕಾಲದ 40 ದಿನಗಳ ಕಾಲ ಪ್ರಭಾಷಣ ಪರಂಪರೆಗಳು ನಡೆದುಕೊಂಡು ಬಂದಿದ್ದ ಪ್ರದೇಶವಾಗಿದೆ ಇದು. ಈ ಒಂದು ಬೃಹತ್ ಜಮಾಅತ್ ಅಧೀನದಲ್ಲಿ 1968 ರಿಂದ ಸಾಮಾಜಿಕ ಸೇವೆಯೊಂದಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿ ಕಾರ್ಯಾಚರಿಸಿಕೊಂಡು ಬರುತ್ತಿರುವ ಒಂದು ಒಂದು ಸಂಘಟನೆ ಅನ್ಯಾರುಲ್ ಮುಸ್ಲಿಮೀನ್ ಅಸೋಸಿಯೇಷನ್. ವಿವಿಧ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸೇವೆಗಳೊಂದಿಗೆ ಮುನ್ನುಗಿ ಬರುತ್ತಿದೆ ಎಂದು ಹೇಳಿ ಗಾಂಧಿನಗರ  ಜಮಾಅತ್ ಹಾಗೂ ಅಧೀನ ಸಂಘ ಸಂಸ್ಥೆಗಳ ಬಗ್ಗೆ ಪರಿಚಯ ಮಾಡಿಕೊಟ್ಟರು.

ಯುವ ಸಮೂಹವೇ ನಾಶಕಾರಿಗಳಾಗದಿರಿ, ಸಮಸ್ಯೆಗಳನ್ನು ಉಂಟು ಮಾಡುವವರಾಗದಿರಿ ಮದುವೆ ಸಂಭ್ರಮದಲ್ಲಿನ ಆಡಂಬರ, ಅತಿರೇಕದ ವರ್ತನೆಗಳಿಂದ ದೂರವಿರಿ; ಪೇರೋಡ್ ಉಸ್ತಾದ್

ಕುರ್ ಆನ್ ಸೂಕ್ತ ಉಲ್ಲೇಖಿಸಿ ಪ್ರಭಾಷಣ ಆರಂಭಿಸಿದ ಪೆರೋಡ್ ಅಬ್ದಲ್ ರಹ್ಮಾನ್ ಸಖಾಫಿ ಉಸ್ತಾದ್ ಮಾತನಾಡಿ “ಖಚಿತವಾದ ಮರಣ ಸಮೀಪಿಸುವವರೆಗೂ ಅಲ್ಲಾಹನಿಗೆ ಪ್ರಾರ್ಥನೆಗಳನ್ನು ಸಲ್ಲಿಸಿ”  ಎಂದರು. ಅಧಿಕಾರಗಳು, ಇನ್ನಿತರ ಕೆಲಸಗಳನ್ನು ನಿವರ್ವಹಿಸಿ ನಿಯಂತ್ರಿಸುವವರು  ಒಂದು ನಿಮಿತ್ತ ಮಾತ್ರ! ಆದರೆ ಸಂಪೂರ್ಣ ನಿಯಂತ್ರಣ ಸೃಷ್ಟಿಕರ್ತನಾದ ಅಲ್ಲಾಹನದ್ದಾಗಿದೆ, ಎಲ್ಲಾ ಒಳಿತು ಕೆಡುಕುಗಳು ಅಲ್ಲಾಹನಿಂದಲೇ ಎಂದು ವಿಶ್ವಾಸ ಇಟ್ಟ ಮುಸಲ್ಮಾನರಾಗಿದ್ದೇವೆ ನಾವುಗಳು ಎಂದರು.
ಕೆಲವರು ಅಮೇರಿಕಾ ಇಡೀ ಜಗತ್ತನ್ನೆ ನಿಯಂತ್ರಣ ಮಾಡುತ್ತಿದ್ದಾರೆ ಎನ್ನುತ್ತಾರೆ, ಆದರೆ ಇದು ಅಮೇರಿಕಾದ ನಿಯಂತ್ರಣ ಎಂದಲ್ಲ ಹಾಗೆ ಅಮೇರಿಕಾ ಇಡೀ ಜಗತ್ತನ್ನೇ ನಿಯಂತ್ರಿಸುತ್ತಿದ್ದರೆ ಅಲ್ಲಿ ಆ ಪರಿಯಾಗಿ ಬೆಂಕಿ ಹತ್ತಿ ಉರಿಯುತ್ತಿರಲಿಲ್ಲ! ಈ ಒಂದು ಘಟನೆಯಲ್ಲಿಯೇ ಎಲ್ಲರೂ ಬಯಪಟ್ಟಿದ್ದಾರೆ. ಇದರಿಂದ ತಿಳಿದುಕೊಳ್ಳಬೇಕು ಎಲ್ಲಾ ನಿಯಂತ್ರಣಗಳು ಸೃಷ್ಟಿ ಕರ್ತನಾದ ಅಲ್ಲಾಹನಿಂದವಾಗಿದೆ, ಉಳಿದಂತೆ ಯಾರೆ ರಾಜನಾದರೂ ಮಂತ್ರಿಯಾದರೂ ಪ್ರಧಾನಿಯಾದರೂ ಯಾವುದೇ ಅಧ್ಯಕ್ಷನಾದರೂ ಎಲ್ಲರೂ ಒಂದು ನಿಮಿತ್ತ ಮಾತ್ರ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ನಡೆಯುವ ಅನಾಚಾರಗಳ ಬಗ್ಗೆ ಮಾತನಾಡಿ “ವಿವಾಹ ಕಾರ್ಯಗಳನ್ನು ಎಚ್ಚರಿಕೆಯಿಂದ ನಡೆಸಬೇಕು, ವಧು ವರರಿಗೂ ಅವರ ಪೋಷಕರಿಗೂ ಇಚ್ಛೆ ಇಲ್ಲದಿದ್ದರೂ ಕೂಡ ಕೆಲವೊಂದು ಸ್ನೇಹಿತರ ಗುಂಪು ಅನಧಿಕೃತ ಚಟುವಟಿಕೆಗಳಲ್ಲಿ ಏರ್ಪಾಟಿದ್ದಾರೆ, ವಿವಾಹ ನಡೆಯುವ ಮನೆಗೆ ಪೋಲಿಸ್ ಬಂದು ಕೇಸು ದಾಖಲಿಸುವ ಪರಿಸ್ಥಿತಿ ಉಂಟುಮಾಡಿ ಕುಟುಂಬ ಹಾಗೂ ಇಡೀ ಸಮುದಾಯಕ್ಕೆ ಧಕ್ಕೆಯಾಗುವಂತೆ ಮಾಡದಿರಿ ಎಂದು ಕರೆ ನೀಡಿದರು.
ತಂದೆ ತಾಯಿಯರ ಪ್ರೀತಿಯನ್ನು ಗಳಿಸುವವರಾಗಬೇಕು, ಅವರಿಗೆ ನೀಡಬೇಕಾದ ಪ್ರಾಶಸ್ತ್ಯ ಮತ್ತು ಪರಿಗಣನೆ ನೀಡಬೇಕು‌, ತಂದೆ ತಾಯಿಯ ಆಶಿರ್ವಾದ ಇದ್ದರೆ ಮಾತ್ರವಾಗಿದೆ ಅಲ್ಲಾಹನ ಆಶಿರ್ವಾದ ದೊರೆಯುವುದು ಎಂದರು. ಈ ವಿಚಾರವಾಗಿ ಯುವಕರೇ ನಾವು ನಾಶಕಾರಿಗಳಾಗಬಾರದು, ನಾವು ಸಮಸ್ಯೆಗಳನ್ನು ಉಂಟು ಮಾಡುವವರಾಗಬಾರದು, ಒಂದು ವಿವಾಹ ಸಂಭ್ರಮ ನಡೆಯುವಾಗ ಅತಿರೇಕದ ಚಟುಗಳಲ್ಲಿ ಏರ್ಪಟ್ಟು ಪೋಲಿಸರ ಆಗಮನ ಅಗತ್ಯತೆ ಬರುವಂತೆ ಮಾಡಬೇಡಿ, ನಾವು ಸೂಕ್ಷ್ಮ ಮತ್ತು ಪ್ರಬುದ್ದರಾಗಬೇಕು ಎಂದರು.
ಯುವಕರ ಬಗ್ಗೆ ಮಾತನಾಡಿ, ಅಹಂಕಾರದಿಂದ ವರ್ತಿಸುವವರಾಗದಿರಿ, ವಿನಯ ಉಳ್ಳವರಾಗಿ ಅನಾವಶ್ಯಕ ವಿಷಯಗಳಿಂದ ದೂರವಿರಿ ಇಸ್ಲಾಮಿನ ಆದರ್ಶಗಳಿಗೆ ಚ್ಯುತಿ ಬಾರದಂತೆ ಯೌವ್ವನವನ್ನು ಸೂಕ್ಷ್ಮವಾಗಿ ಕಳೆಯಬೇಕು ಎಂದರು.
ಕಬರ್ ಝಿಯಾರತ್ ಬಗ್ಗೆ ಮಾತನಾಡಿದ ಉಸ್ತಾದರು, ಹದೀಸ್ ಒಂದನ್ನು ಉಲ್ಲೇಖಿಸಿ ಮಾತನಾಡಿದ ಉಸ್ತಾದರು ಅಧಿಕವಾಗಿ ಕಬರ್ ಝಿಯಾರತ್ (ಸಂದರ್ಶನ) ಮಾಡುವ ಸ್ತ್ರೀಯರನ್ನು ಅಲ್ಲಾಹು ಶಪಿಸಿದ್ದಾನೆ ಎಂಬ ಹದೀಸ್ (ಪ್ರವಾದಿ ವಚನ) ಇದೆ. ಈ ವಚನದ ಬಗ್ಗೆ ಪಂಡಿತರ ಮದ್ಯೆ ಚರ್ಚೆಗಳು ಇದೆ. ಆದರೂ ಇಸ್ಮಾಮಿನ ಇಮಾಂ ಗಳ ತೀರ್ಮಾನದಲ್ಲಿ ಅಂಭಿಯಾಗಳು, ಔಲಿಯಾಗಳ ಖಬರ್ ಝಿಯಾರತ್ ಸ್ತ್ರೀ ಪುರುಷರಿಗೆ ಸುನ್ನತ್ತಾಗಿದೆ. ತಂದೆಯ ಖಬರ್ , ತಾಯಿಯ ಖಬರ್ ಝಿಯಾರತ್ ಪತಿಯ ಖಬರ್ ಝಿಯಾರತ್ ಮಾಡುವುದು ಸ್ತ್ರೀಯರಿಗೆ ಸುನ್ನತ್ ಇಲ್ಲ! ಹರಾಂ ( ನಿಷಿದ್ದ ) ಎಂಬುದರ ಬಗ್ಗೆ ಹೇಳಿರುವ ಇಮಾಮಾರುಗಳು ಇದ್ದಾರೆ, ಕರಾಅತ್( ಮಾಡದೇ ಇರುವುದು ಉತ್ತಮ ಎಂಬ ಅಭಿಪ್ರಾಯ ಹೇಳಿದ ಇಮಾಮರು ಇದ್ದಾರೆ ಎಂದರು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ಸ್ಮರಣಿಕೆ ನೀಡಲಾಯಿತು. ಸಭಾ ಕಾರ್ಯಕ್ರಮ ಆರಂಭಕ್ಕು ಮೊದಲು ಬುರ್ದಾ ಆಲಾಪನೆ ಮಾಡಿದ ಅನ್ಯಾರಿಯ ದರ್ಸ್ ವಿಧ್ಯಾರ್ಥಿಗಳಿಗೆ ಹಾಗೂ ಗಾಂಧಿನಗರ ದರ್ಸ್ ವಿಧ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮೂರು ದಿನಗಳು ಧಪ್ ಪ್ರದರ್ಶನ ನೀಡಿದ ದುಲ್ ಫುಕಾರ್ ದಫ್ ಅಸೋಸಿಯೇಷನ್ ಇದರ ವಿಧ್ಯಾರ್ಥಿಗಳಿಗೆ ಸ್ಮರಣಿಕೆ ನೀಡಲಾಯಿತು. ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಪ್ರಶಸ್ತಿ ವಿಜೇತರಾದ ವಿಧ್ಯಾರ್ಥಿಗಳಿಗೆ( ಹಂಝತ್ತುಲ್ ಕರ್ರಾರ್, ಮುಹಮ್ಮದ್ ಲಾಝಿಮ್ , ಮುಹಮ್ಮದ್ ಆಶಿಕ್, ಮುಹಮ್ಮದ್ ಇಶಾಮ್, ಮುಹಮ್ಮದ್ ತಂಝೀಮ್,ಶಮ್ಮಾಸ್ ಅಬ್ದುಲ್ಲ, ಅಬ್ದುಲ್ ರಹ್ಮಾನ್ ಅಲಿ, ಶಾಝ್ ಝಮೀರ್, ಉಝೈರ್ ಅಬ್ಬಾಸ್) ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಹಾಫಿಲ್ ಶೌಖತ್ತಲಿ ಉಸ್ತಾದ್, ಹಾಮಿದ್ ಹಿಮಮಿ ಉಸ್ತಾದ್, ಹಾಜಿ ಹಮೀದ್ ಬೀಜಕೊಚ್ಚಿ, ಹಾಜಿ ಮುಸ್ತಫಾ ಜನತಾ,ಕೆ ಬಿ ಮಜೀದ್, ಇಸ್ಮಾಯಿಲ್ ಐ,ಲತೀಫ್ ಎಮ್ ಕೆ,ಅಬ್ಬೂಬಕ್ಕರ್ ಎಸ್ ಪಿ,ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕೆ ಎಂ ಎಸ್, ಲತೀಫ್ ಹರ್ಲಡ್ಕ, ಮಜೀದ್ ಜನತಾ,ಶರೀಫ್ ಕಂಠಿ, ಉಮ್ಮರ್ ಕೆ.ಎಸ್, ಸಿದ್ದೀಕ್ ಕೊಕ್ಕೋ, ಇನ್ನಿತರ ಹಲವಾರು ಉಲಮಾ ಉಮಾರ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

m

Related Posts