Featured, ಇತರೆ, ಸ್ಥಳೀಯ

ಸುಳ್ಯ ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದ ಮೃತದೇಹದ ಗುರುತು ಪತ್ತೆ!!?

ಮೃತ ದೇಹವನ್ನು ನದಿಯಿಂದ ಮೇಲಕ್ಕೆ ಎತ್ತಿದ ಸುಳ್ಯ ಆಂಬುಲೆನ್ಸ್ ಮಾಲಕ ಚಾಲಕ ಸಂಘದ ಸದಸ್ಯರು

 

ಸುಳ್ಯ : ಫೆಬ್ರವರಿ 16 ರಂದು ಸುಳ್ಯದ ಪಯಸ್ವಿನಿ ನದಿ ಹರಿಯುವ ಅಂಗಡಿಮಠ ಗೋಳಿಮೂಲೆ ನದಿಯಲ್ಲಿ ಸ್ಥಳೀಯರಾದ ಪುಷ್ಪಲತಾ ಎಂಬುವವರಿಗೆ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಕಂಡುಬಂದಿತ್ತು ಕೂಡಲೇ ಅವರು ಸುಳ್ಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಸುಳ್ಯ ಪೋಲೀಸರು ಬಂದು ಮೃತದೇಹದ ಪರಿಶೀಲನೆ ನಡೆಸಿದಾಗ ಮೃತ ದೇಹದಲ್ಲಿ ಸಿಕ್ಕಿದ ದಾಖಲೆ ಅನುಸಾರವಾಗಿ ಮೃತ ದೇಹದ ಗುರುತನ್ನು ಹಚ್ಚಲು ಸಾಧ್ಯ ವಾಯಿತ್ತು. ಮೃತ ವ್ಯಕ್ತಿಯನ್ನು ಪಿರಿಯಾಪಟ್ಟಣ ದ ಅಜಿತ್ (24) ಎಂಬುವವರದ್ದು ಎಂದು ಗುರುತಿಸಲಾಗಿದೆ, ಈತ ಸುಳ್ಯದ ಖಾಸಗಿ ಹೊಟೆಲ್ ಒಂದರಲ್ಲಿ ಕೆಲಸಕ್ಕೆ ಇದ್ದು 15 ದಿನದ ಮೊದಲು ರೂ ಸಾವಿರ ಪಡೆದು ಹೋಗಿದ್ದ ಎನ್ನಲಾಗಿದೆ. ಇದೀಗ ಮೃತದೇಹ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಇದ್ದು ಮೃತ ಅಜಿತ್ ನ ಸಂಬಂಧಿಕರು ಸುಳ್ಯ ಕ್ಕೆ ಆಗಮಿಸುತ್ತಿದ್ದಾರೆ

 

ಆಪತ್ ಕಾಲದಲ್ಲಿ ಆಪತ್ಬಾಂಧವ ರಾಗುವ  ಸುಳ್ಯ ತಾಲೂಕು ಆಂಬುಲೆನ್ಸ್ ಮಾಲಕ ಚಾಲಕ ಸಂಘದ ಸದಸ್ಯರು

ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದ ಅಜಿತ್ ಅವರ ಮೃತದೇಹವನ್ನು ನದಿಯಿಂದ ಮೇಲಕ್ಕೆ ಎತ್ತಿ ಸುಳ್ಯ ಸರಕಾರಿ ಆಸ್ಪತ್ರೆಗೆ  ಸುಳ್ಯ ತಾಲೂಕು ಆಂಬುಲೆನ್ಸ್ ಮಾಲಕ ಚಾಲಕ ಸಂಘದ ಸದಸ್ಯರಾದ ರಫೀಕ್ ಲೈಫ್ ಲೇರ್ ಆಂಬುಲೆನ್ಸ್,ರಫೀಕ್ ಬಿ ಯಮ್, ಸಿದ್ದೀಕ್ ಎಸ್ ಐ ಜಟ್ಟಿಪಳ್ಳ, ಸಿದ್ದೀಕ್ ಗೂನಡ್ಕ, ಸಾಗಿಸಿದರು ಇವರಿಗೆ ಲತೀಫ್ ಜೌಹರಿ ಮೆನಾಲ ಮತ್ತು ಕಬೀರ್ ಪೆರಾಜೆ ಸಹಕರಿಸಿದರು  ಆಪತ್ ಕಾಲದಲ್ಲಿ ಆಪತ್ಬಾಂಧವ ರಾಗುವ  ಸುಳ್ಯ ತಾಲೂಕು ಆಂಬುಲೆನ್ಸ್ ಮಾಲಕ ಚಾಲಕ ಸಂಘದ ಸದಸ್ಯರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ

m

 

 

Related Posts