ಸುಳ್ಯ ತಾಲೂಕಿನಲ್ಲಿ ನಿಲ್ಲದ ಕಾಡಾನೆ ದಾಳಿ : ಕೃಷಿಕರಲ್ಲಿ ಬೇಳೆ ನಷ್ಟದ ಆತಂಕ !?
ಸುಳ್ಯ : ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಇಂದು ಬೆಳಗ್ಗಿನ ಜಾವ ಕೃಷಿಕ ಅರಂಬೂರು ಅಬ್ದುಲ್ ರಹೆಮಾನ್ ರವರ ತೋಟಕ್ಕೆ ನುಗ್ಗಿದ ಕಾಡನೆಯ ಗುಂಪು ಕೃಷಿ ನಾಶ ಮಾಡಿದ್ದಲ್ಲದೆ ನೀರಾವರಿಯ ಪೈಪುಗಳನ್ನು ಒಡೆದು ಹಾಕಿ ನಷ್ಟ ಉಂಟು ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ ಸುಳ್ಯ ತಾಲೂಕಿನಲ್ಲಿ ಕಾಡನೆ ದಾಳಿ ನಿರಂತರವಾಗಿ ಹೆಚ್ಚುತ್ತಿದ್ದು ಕೃಷಿಕರಲ್ಲಿ ಬೇಳೆ ನಷ್ಟದ ಆತಂಕ ಕಾಡುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಮಾತ್ರ ಸುಧಾರಣೆ ಕ್ರಮ ಭರವಸೆ ಕಂಡುಬರುತ್ತದೆ ಹೊರತು ವಾಸ್ತವದಲ್ಲಿ ಪ್ರಾಯೋಗಿಕ ಕ್ರಮ ಆಗುತ್ತಿಲ್ಲವೆಂದು ಕೃಷಿಕರಲ್ಲಿ ಬೇಸರ ಮತ್ತು ಬೇಳೆ ನಷ್ಟದ ಆತಂಕ ಎದುತಾಗುತ್ತಿದೆ





m

