Featured, ಇತರೆ, ಸ್ಥಳೀಯ

ಚರಿತ್ರೆ ಪ್ರಸಿದ್ಧ ಜಾಲ್ಸೂರು ಅಡ್ಕಾರ್ ಮಖಾಂ ಉರೂಸ್ ನಾಳೆಯಿಂದ ಆರಂಭ

ಏಪ್ರಿಲ್ 12 ರಿಂದ 14ರ ವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಆಧ್ಯಾತ್ಮಿಕತೆಯ ಸುಂದರ ಸಂಗಮಕ್ಕೆ ಸಾಕ್ಷಿಯಾಗಲಿದೆ ಅಡ್ಕಾರ್

ಸುಳ್ಯ: ಪಯಸ್ವಿನಿ ನದಿ ಕಿನಾರೆಯಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಔಲಿಯಾಗಳ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ಏಪ್ರಿಲ್ 12 ರಿಂದ ಆರಂಭಗೊಂಡು ಏಪ್ರಿಲ್ 14ರ ವರೆಗೆ 3 ದಿನಗಳ ಕಾಲ ನಡೆಯಲಿದೆ.

2025 ಏಪ್ರಿಲ್ 12 ಶನಿವಾರ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿ.ಪಿ ಅಬ್ದುಲ್ಲಾ ಕುಂಞಿ (ಅಧ್ಯಕ್ಷರು MJM ಜಾಲ್ಲೂರು) ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 04-30ಕ್ಕೆ  ಉರೂಸ್ ಕಮಿಟಿ ಅಧ್ಯಕ್ಷ ಅಬ್ಬಾಸ್‌ ಹಾಜಿ ಕದಿಕಡ್ಕ ಜಾಲ್ಸೂರು ಇವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಯ್ಯದ್ ಕುಂಞಕೋಯ ತಂಙಳ್ ಸಅದಿ ಸುಳ್ಯ ದುವಾಃ ನೇತೃತ್ವದ ವಹಿಸಲಿದ್ದಾರೆ  MJM ಜಾಲ್ಸೂರು ಇದರ ಖತೀಬರಾದ ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನು ಇವರು ಉರೂಸ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಹಾಗೂ ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ ಉಸ್ತಾದ್ ಮುಖ್ಯಪ್ರಭಾಷಣ ಮಾಡಲಿದ್ದಾರೆ.

ನಾಳೆ ಮುಖ್ಯಪ್ರಭಾಷಣ ಗೈಯಲಿದ್ದಾರೆ : ಮುಸ್ತಫಾ ಸಖಾಫಿ ತೆನ್ನಲ

ಎಪ್ರಿಲ್ 13 ಆದಿತ್ಯ ವಾರ

ಏ.13, ಎರಡನೇ ದಿನ ಬಹು. ಸಯ್ಯದ್ ಝೈನುಲ್ ಅಬಿದೀನ್ ತಂಙಳ್ అಲ್ ಬಖಾರಿ, ಎಣ್ಮೂರು ಇವರ ನೇತೃತ್ವದಲ್ಲಿ ದ್ಸಿಕ್ರ್  ದುಃಆ ಮಜ್ಲಿಸ್ ನಡೆಯಲಿದೆ. ಇದೇ ದಿನ  ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಇವರಿಂದ ದಾರ್ಮಿಕ ಪ್ರಭಾಷಣ ನಡೆಯಲಿದೆ.

ಎಪ್ರಿಲ್ 14 ಸೋಮವಾರ

ಏಪ್ರಿಲ್ 14, ಸಮರೋಪ ಸಮರಾಂಭ ನಡೆಯಲಿದ್ದು ಸಂಜೆ ಅಸರ್ ನಮಾಝ್ ಬಳಿಕ  ಖುದ್ವತ್ತುಸಾದಾತ್ ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಇವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಲಿದೆ.

m

 

 

Related Posts