Featured, ಇತರೆ, ಸ್ಥಳೀಯ

ಸುಳ್ಯ : ಹಿರಿಯ ಮುತ್ಸದ್ದಿ ಅಬೂಬಕ್ಕರ್ ಹಾಜಿ ಕುಕ್ಕುತಡಿ (ಪೈಚಾರ್) ನಿಧನ

ಕೊಡುಗೈ ದಾನಿಯಾದ ಇವರು, ಪೈಚಾರು ಕುವ್ವತ್ತುಲ್ ಇಸ್ಲಾಂ ಮದರಸಕ್ಕೆ ಸ್ಥಳವನ್ನು ದಾನವಾಗಿ ನೀಡಿದರು,,

ಸುಳ್ಯ : ಪೈಚಾರ್ ಅಲ್ಪ ಕಾಲದಿಂದ ಅನಾರೋಗ್ಯ ದಿಂದ ಇದ್ದ ಪೈಚಾರ್ ನಿವಾಸಿ ಮೇರು ವ್ಯಕ್ತಿತ್ವದ, ಉದಾತ್ತ ಮನಸ್ಸಿನ, ಪೈಚಾರ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಹಲವಾರು ಕಾಲ ಅಧ್ಯಕ್ಷರಾಗಿ ಸೇವೆಸಲ್ಲಿಸಿ ಮಸೀದಿ ಮತ್ತು ಮದರಸ ಅಭಿವೃದ್ಧಿ ಗೆ ಮೂಲ ಕಾರಣರಾಗಿದ್ದ. ಪೈಚಾರ್ ಅಬೂಬಕ್ಕರ್ ಹಾಜಿ ಕುಕ್ಕುತಡಿ ಇಂದು ನಿಧನರಾದರು, ಅವರಿಗೆ ಸುಮಾರು 89 ವರ್ಷ ಅಗಿತ್ತು ಮುಸ್ಲಿಂ ಸಮುದಾಯದ ಹಿರಿಯ ಚೇತನ ರಾಗಿದ್ದ ಇವರು ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದರು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದರು. ಇವರು ಗಂಡು ಮಕ್ಕಳಾದ ,ಮಹಮ್ಮದ್,ಉಮ್ಮರ್ ಫಾರೂಕ್ ಶರೀಫ್, ಸಾಮಾಜಿಕ ಕಾರ್ಯಕರ್ತ, ಪೈಚಾರ್ ಅಲ್-ಅಮೀನ್ ಯೂತ್ ಸೆಂಟರ್ ಇದರ ಅಧ್ಯಕ್ಷ ರಾದ ಸತ್ತಾರ್ ಪೈಚಾರ್, ಹಾಗೂ ಹೆಣ್ಣು ಮಕ್ಕಳಾದ ಪತಿಮತ್ ಝೌರ,ರೈಹಾನ,ಕದೀಜ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನ ಕ್ಕೆ ಪೈಚಾರು ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿ,ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಸಂತಾಪ ಸೂಚಿಸಿದೆ.

m

Related Posts