Featured, ಅಂಕಣ, ಸ್ಥಳೀಯ

ಅರಂಬೂರು: ಹಿರಿಯ ಮುತ್ಸದಿ ಹಾಜಿ ಅಬ್ದುಲ್ ರಹಿಮಾನ್ ನಿಧನ

ಸುಳ್ಯ : ಅರಂಬೂರಿನ ಹಿರಿಯ ಮುತ್ಸದ್ದಿ, ಹಿರಿಯ ವರ್ತಕ ಹಾಗೂ ಬದರ್ ಜುಮ್ಮಾ ಮಸೀದಿ ಅರಂಬೂರು ಇದರ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಹಾಜಿ ಅಬ್ದುಲ್ ರಹಿಮಾನ್ ಅರಂಬೂರು ರವರು ಆ. 29 ಶುಕ್ರವಾರ ರಾತ್ರಿ ಅಲ್ಪಕಾಲದ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಹಾಜಿ ಅಬ್ದುಲ್ ರಹಿಮಾನ್ ರವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಜನಾನುರಾಗಿ ಸದಾ ಸೇವಾ ಮನೋಭಾವನೆ ಹೊಂದಿದ್ದ ವ್ಯಕ್ತಿಯಾಗಿದ್ದರು. ಇವರು ಮಕ್ಕಳಾದ, ಮೊಹಿದ್ದೀನ್ ಅರಂಬೂರು, ಬಶೀರ್ ಅರಂಬೂರು, ಖಲಂದರ್ ಅರಂಬೂರು, ಅಬ್ದುಲ್ ಕುಂಞ ಅರಂಬೂರು, ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ..

ಜನಾಝ ನಮಾಝ್ :ಅರಂಬೂರು ಮಸೀದಿ : 12:15 ಕ್ಕೆ, ಗಾಂಧಿನಗರ ಸುಳ್ಯ ಮಸೀದಿ ‌: 01:00 ಲುಹ್ರ್ ನಮಾಝ್ ಬಳಿಕ

m

Related Posts