ಸುಳ್ಯದ ಎಲ್ಲಾ ಕ್ಷೇತ್ರದ ಸಾಧಕರಲ್ಲಿ ಜೇಸಿಸ್ ಪಾತ್ರ ಗಮನಾರ್ಹ ವಾದದ್ದು :ದಿನೇಶ್ ಮಡಪ್ಪಾಡಿ
ಸಹಕಾರ ಮಹಾ ಮಂಡಳ ರಾಜ್ಯ ನಿರ್ದೇಶಕರಾಗಿ ಆಯ್ಕೆ ಯಾದ ದ.ಕ ಮತ್ತು ಉಡುಪಿ ಜಿಲ್ಲಾ ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರ್, ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ರಾಗಿ ಕರ್ನಾಟಕ ಸರ್ಕಾರ ದಿಂದ ನೇಮಕ ಗೊಂಡ ಕೆ. ಎಂ. ಮುಸ್ತಫ, 2024 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗೋಕುಲ್ ದಾಸ್ ರವರಿಗೆ ಸುಳ್ಯ ಪಯಶ್ವಿನಿ ಸೀನಿಯರ್ ಜೇಸಿಸ್ ವತಿಯಿಂದ ಸನ್ಮಾನಿಸಲಾಯಿತು
ಅಧ್ಯಕ್ಷತೆ ಯನ್ನು ಸುಳ್ಯ ಘಟಕದ ಅಧ್ಯಕ್ಷ ಚಂದ್ರ ಶೇಖರ್ ನಂಜೆ ವಹಿಸಿದ್ದರು ಅಭಿನಂದನಾ ಭಾಷಣ ಮಾಡಿದ ದಿನೇಶ್ ಮಡಪ್ಪಾಡಿ ಮಾತನಾಡಿ ಸುಳ್ಯ ಎಲ್ಲಾ ಕ್ಷೇತ್ರದ ಬೆಳವಣಿಗೆಯಲ್ಲಿ ಜೇಸಿ ಯ ಹೆಜ್ಜೆ ಗುರುತುಗಳಿವೆ, ವ್ಯಕ್ತಿತ್ವ ವಿಕಸನ, ನಾಯಕತ್ವ ತರಬೇತಿ ಯ ಫಲಿತಾoಶ ಈ ಮೂವರು ಸಾಧಕರ ಮೂಲಕ ಸಾಕಾರ ಗೊಂಡಿದೆ ಎಂದರು
ಈ ಸಂದರ್ಭದಲ್ಲಿ ಜೇಸಿ ಸ್ಥಾಪಕಾಧ್ಯಕ್ಷ ಧನoಜಯ ಮದುವೆಗೆದ್ದೆ, ಜೇಸಿ ಪೂರ್ವಾಧಕ್ಷರುಗಳಾದ ಕೆ. ಆರ್. ಗಂಗಾಧರ್, ಸೀತಾರಾಒ ಕೇವಳ, ಸೀನಿಯರ್ ಜೇಸಿಸ್ ಕಾರ್ಯದರ್ಶಿ ಎ. ಕೆ. ಮೋಹನ್, ಖಜಾoಚಿ ಅಶೋಕ್ ಚೂoತಾರು, ದೊಡ್ಡಣ್ಣ ಬರಮೇಲು, ದೇವಿಪ್ರಸಾದ್ ಕುದ್ಪಾಜೆ, ನಿಕಟ ಪೂರ್ವ ಅಧ್ಯಕ್ಷ ಪಿ. ಎಸ್. ಗಂಗಾಧರ್, ಚಂದ್ರಶೇಖರ ಪೆರಾಲು,ದಿನೇಶ್ ಅಂಬಕಲ್ಲು, ಎಸ್. ಆರ್ ಸೂರಯ್ಯ, ಮೊದಲಾದವರು ಉಪಸ್ಥಿತರಿದ್ದರು





m
