ಸುಳ್ಯ : ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷದ ಮುಸ್ಲಿಂ ಮುಖಂಡರು ತಮ್ಮ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಪರ್ವ ಮುಂದುವರಿಸಿದ್ದಾರೆ. ಅದೇ ಭಾಗವಾಗಿ ಸುಳ್ಯದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ,ಹಲವಾರು ಧಾರ್ಮಿಕ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಮುಂಚೂಣಿ ಯಲ್ಲಿ ಗುರುತಿಸಿ ಕೊಂಡಿರುವ ಯುವ ನಾಯಕ. ಸುಳ್ಯ ಕನಕಮಜಲು ಸುಣ್ಣಮೂಲೆಯ, ಇಕ್ಬಾಲ್ ಸುಣ್ಣಮೂಲೆ ಯವರು. ಕಳೆದ ಎರಡು ದಿನಗಳ ಹಿಂದೆ ಕೋಮು ವೈಷಮ್ಯಗಳಿಂದ ಹತ್ಯೆಗೀಡಾದ ಬಂಟ್ವಾಳದ ಅಬ್ದುಲ್ ರಹ್ಮಾನ್ ಸೇರಿದಂತೆ ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಸರಣಿ ಕೋಮು ಹತ್ಯೆಗಳನ್ನು ಮಟ್ಟ ಹಾಕಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಸುಳ್ಯ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ




m

