ಮಂಗಳೂರು: ಗಾಂಜಾ ವಾಸನೆ ಹೊಂದಿದ ಚಾಕೋಲೇಟ್ಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಪಂಪ್ವೆಲ್ ಸಮೀಪದ ಪಾನ್ ಗೂಡಂಗಡಿಯಲ್ಲಿ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಎಂದು ಗುರುತಿಸಲಾಗಿದೆ. ಆತನಿಂದ 303 ಗ್ರಾಂ ತೂಕದ “ಬಮ್ಚಾರ್ ಮಿನಾರ್” ಎಂಬ ಹೆಸರಿನ, ಮಾದಕ ದ್ರವ್ಯದ ವಾಸನೆ ಹೊಂದಿರುವ ಚಾಕೋಲೇಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಸಂಬಂಧ ಎನ್ಡಿಪಿಎಸ್ ಕಾಯ್ದೆಯಡಿ (ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ) ಕೇಸು ದಾಖಲಿಸಲಾಗಿದೆ. ಬಳಿಕ ಸುಜಿತ್ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ದಾಳಿಗೆ ಮಂಗಳೂರು ಉತ್ತರ ವಿಭಾಗದ ಅಬಕಾರಿ ಉಪ ಅಧೀಕ್ಷಕಿ ಗಾಯತ್ರಿ ಸಿ.ಎಚ್. ನೇತೃತ್ವ ವಹಿಸಿದ್ದರು. ಉಪವಿಭಾಗದ ಉಪನಿರೀಕ್ಷಕ ಸುಧೀರ್ ಕುಮಾರ್ ಪ್ರಕರಣ ದಾಖಲಿಸಿದ್ದು, ನಿರೀಕ್ಷಕಿ ಸುನೀತಾ, ಉಪನಿರೀಕ್ಷಕ ಹರೀಶ್, ಸಿಬ್ಬಂದಿಗಳಾದ ಸಂಧ್ಯಾ, ಚಾಲಕ ಹರೀಶ್ ಹಾಗೂ ಕಾನ್ಸ್ಟೆಬಲ್ ಮಾರುತಿ ಡಿ.ಜೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.






m
