Featured, ಇತರೆ, ಸ್ಥಳೀಯ

ಸುಳ್ಯ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಜನ್ಮದಿನಾಚರಣೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸುರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆಯವರು ಅಧ್ಯಕ್ಷತೆವಹಿಸಿ ಮಾತನಾಡಿ ದಿ. ರಾಜೀವ್ ಗಾಂಧಿ ಯವರ ಆದರ್ಶ ಮತ್ತು ದೂರದೃಷ್ಟಿಯ ಆಡಳಿತವನ್ನು ಇಂದು ನಾವು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ದೇಶದಲ್ಲಿ ಇಂದು ನಾವು ವೈಜ್ಞಾನಿಕವಾಗಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕಾದರೆ ಅದು ದಿ. ರಾಜೀವ್ ಗಾಂಧಿಯವರ  ಆಡಳಿತ ಮತ್ತು ದೂರದೃಷ್ಟಿಯ ಯೋಜನೆಗಳಿಂದ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಿ ಕೆ ಹಮೀದ್ ಮಾತನಾಡಿ ರಾಜೀವ್ ಗಾಂಧಿ ಮತ್ತು ದಿ. ದೇವರಾಜು ಅರಸು ರವರು ನಮ್ಮ ನಾಡು ಕಂಡ ಧೀಮಂತ ವ್ಯಕ್ತಿತ್ವ. ಅವರು ನಮಗೆಲ್ಲರಿಗೂ ಆದರ್ಶಪ್ರಾಯರು. ಹಾಗೂ ಅವರುಗಳ ಜನ್ಮ ದಿನಾಚರಣೆಯನ್ನು ಆಚರಿಸುವ ಮೂಲಕ ನೆನೆಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಆರ್ ಕೆ ಮೊಹಮ್ಮದ್ ಮಾತನಾಡಿ ದಿ.ರಾಜೀವ್ ಗಾಂಧಿ ಯವರು ದೇಶಕ್ಕಾಗಿ ಬಲಿದಾನ ಹೊಂದಿದವರು. ಅವರು ದೇಶದ ಅಭಿವೃದ್ಧಿ ಮತ್ತು ಜನತೆಯ ಅಶೋತ್ತರ ಗಳಿಗಾಗಿ ಹಂಬಲಿಸಿದವರು. ತಮ್ಮ ಆಡಳಿಅವಧಿಯಲ್ಲಿ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ತಂದಿದ್ದರು. ಯುವಕರನ್ನು ರಾಜಕೀಯ ಕ್ಷೇತ್ರಕ್ಕೆ ಒಳಪಡಿಸಲು 18 ವರ್ಷಕ್ಕೆ ಮತದಾನದ ಹಕ್ಕನ್ನು ನೀಡಿದವರು. ದಿ. ದೇವರಾಜ್ ಅರಸು ರವರು ಸಹ ಒಬ್ಬ ಮೇಧಾವಿಯಾಗಿ, ಧೀಮಂತ ನಾಯಕರಾಗಿ ಒಬ್ಬ ಮುಖ್ಯಮಂತ್ರಿ ಯಾಗಿ ಹಿಂದುಳಿದ ವರ್ಗದವರ ಏಳಿಗೆ ಗಾಗಿ ದುಡಿದವರು. ಭೂ ಮಸೂದೆಯನ್ನು ರಾಜ್ಯದಲ್ಲಿ ಪಾರದರ್ಶಕವಾಗಿ ಅನುಷ್ಠಾನ ಗೊಳಿಸಿ ಬಡವರ ಅಭಿವೃದ್ದಿಗೆ ಶ್ರಮಿಸಿದವರು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ಅಂಬೇಕಲ್ಲು ಮಾತನಾಡಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ರವರನ್ನು ಪ್ರತಿಯೊಬ್ಬ ನಾಗರೀಕನು ನೆನಪಿಸಿಕೊಳ್ಳಬೇಕಿದೆ. ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಇವತ್ತು ಕಡಬ ಪಟ್ಟಣ ಪಂಚಾಯತ್ ಪ್ರಥಮ ಚುನಾವಣೆ ಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿರುವುದು ಇಬ್ಬರು ಧೀಮಂತ ನಾಯಕರಿಗೆ ಕೊಟ್ಟ ಗೌರವವಾಗಿದೆ. ಎಂದು ಈ ಸಂದರ್ಭದಲ್ಲಿ ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ,  ಶುಭಹಾರೈಸಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತ, ಶರೀಪ್ ಕಂಠಿ, ರಾಜು ಪಂಡಿತ್, ಕಾಯರ್ತೋಡಿ ದೇವಸ್ಥಾನ ಸದಸ್ಯ ಜತ್ತಪ್ಪ ರೈ, ಎಸ್ ಸಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಅಬ್ಬಾಸ್ ಅಡ್ಕ, ರಕ್ಷಿತ್ ದೊಡ್ಡಡ್ಕ, ಮಂಜುನಾಥ್ ಮಡ್ತಿಲ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್ ಕೆ ಹನೀಫ್,  ಕೇಶವ ಮೊರಂಗಲ್ಲು, ಕೊರಗಪ್ಪ ಕೊಯಿಲ, ಗಂಗಾಧರ ಮೇನಾಲ ಉಪಸ್ಥಿತರಿದ್ದರು. ದ. ಕ ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ  ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎನ್ ಎಸ್ ಯು ಐ ಅಧ್ಯಕ್ಷ ಧನುಷ್ ಕುಕ್ಕೇಟಿ ವಂದಿಸಿದರು.

m

Related Posts