ಇತರೆ, ಸ್ಥಳೀಯ

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ನಡುವೆ ಮೂಡದ ಒಮ್ಮತ : ಹದಿನೈದು ವರ್ಷಗಳ ನಂತರ ಸುಳ್ಯ ಅಲ್ಪಸಂಖ್ಯಾತರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ

ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘ ನಿ,ಸುಳ್ಯ ಇದರ ಆಡಳಿತ ಮಂಡಳಿಗೆ ಸುಮಾರು ಹದಿನೈದು ವರ್ಷ ಕಳೆದ ನಂತರ ಚುನಾವಣೆ ನಡಯುತ್ತಿದೆ. ಇದು ಸಂಘದ ಅಭಿವೃದ್ಧಿಗೆ ಉತ್ತಮ ಬೆಳವಣಿಗೆ.
ಹಲವಾರು ವರ್ಷಗಳಿಂದ ಸಂಘಕ್ಕೆ ಪ್ರಜಾಸತ್ತಾತ್ಮಕ ವಾಗಿ ಚುನಾವಣೆ ನಡೆಯದೆ ಆಡಳಿತ ಮಂಡಳಿಯ ಒಳಗೆ ಇರುವ ಸದಸ್ಯರ ನಡುವೆ ಒಮ್ಮತದ ತೀರ್ಮಾನಕ್ಕೆ ಬಂದು ಒಂದೋ ಎರಡೋ ಹೊಸ ಮುಖಗಳಿಗೆ ಅವಕಾಶ ನೀಡಿ ಏಕಪಕ್ಷೀಯವಾಗಿ ತಿರ್ಮಾವಾಗಿ ಆಡಳಿತ ಮಂಡಳಿ ರಚನೆ ಆಗುತಾಬರುತ್ತಿದೆ. ಈ ನಿರ್ಧಾರ ಸಂಘವನ್ನು ಬೆಳೆಸಲು ಮತ್ತು ಬೆಳೆಯಲು ಕಾರಣರಾಗುವ ಸದಸ್ಯರ ಹಕ್ಕನ್ನು ಮತ್ತು ಸದಸ್ಯರಿಗೆ ಸಹಕಾರಿ ಸಂಘಗಳ ಮಹತ್ವವನ್ನು ತಿಳಿಯಪಡಿಸುವ  ಕಾರ್ಯದಿಂದ ವಂಚಿತರನ್ನಾಗಿಸುತ್ತದೆ ಮಾತ್ರವಲ್ಲ ಒಮ್ಮತದ ಆಡಳಿತ ಮಂಡಳಿ ಕಾಲ ಕ್ರಮೇಣ ಸರ್ವಾಧಿಕಾರ ದತ್ತ ಬಾಹುಗಳು ಚಲಿಸತೊಡಗಬಹುದು. ಇದು ಪ್ರಜಾಸತ್ತಾತ್ಮಕ ಹಿತಾಸಕ್ತಿಗೆ ಮಾರಕ, ಮಾತ್ರವಲ್ಲ ಸರಕಾರದ ಅಧೀನದಲ್ಲಿ ಇರುವ ಸಹಕಾರಿ ಸಂಘಗಳು, ಪೂರಕವಾದ ಅಭಿವೃದ್ಧಿಯ ವಿಚಾರಧಾರೆ ಯಿಂದ ಆಗಿರಬೇಕು ಪ್ರಜಾಸತ್ತಾತ್ಮಕ ರೀತಿಯಲ್ಲಿ ಮುದುವರಿಯಬೇಕು :   ಸಂ.ಈವಾರ್ತೆ

ಸುಳ್ಯ : ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಬೆಳ್ಳಾರೆ ಮತ್ತು ಈಶ್ವರಮಂಗಲದಲ್ಲಿ ಶಾಖೆಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಹದಿನೈದು ವರ್ಷಗಳ ನಂತರ ನಿರ್ದೇಶಕ ಸ್ಥಾನಕ್ಕೆ ನವೆಂಬರ್ ಎರಡರಂದು ಚುನಾವಣೆ ನಡೆಯಲಿದೆ.! ಸಂಘದ ಆಡಳಿತ ಮಂಡಳಿ ಚುನಾವಣೆಗೆ ಒಟ್ಟು 20 ಮಂದಿ ಸದಸ್ಯರು ನಾಮಪತ್ರಗಳನ್ನು ಸಲ್ಲಿಸಿದ್ದರು. ನಾಮ ಪತ್ರ ಪರಿಶೀಲನೆ ವೇಳೆಯಲ್ಲಿ 20 ಮಂದಿ ಸದಸ್ಯರ ನಾಮಪತ್ರ ಮಾನ್ಯವಾಗಿತ್ತು, ನಾಮಪತ್ರ ಕೊನೆಯ ದಿನವಾದ ನಿನ್ನೆ ಅಕ್ಟೋಬರ್ 27 ರಂದು ನಾಲ್ಕು ಮಂದಿ ಉಮೇದುವಾರಿಕೆಯಿಂದ ಹಿಂದೆ ಸರಿದರು ಅಂತಿಮವಾಗಿ ಚುನಾವಣಾ ಕಣ ಸಿದ್ದವಾಗಿದ್ದು ಹದಿಮೂರು ನಿರ್ದೇಶಕ ಸ್ಥಾನದಲ್ಲಿ ಈಗಾಗಲೇ ಎರಡು ಸ್ಥಾನ ಅವಿರೋಧವಾಗಿ ಅಯ್ಕೆ ಯಾಗಿದ್ದು ಇನ್ನೂ ಹನ್ನೊಂದು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ

ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಾ ಕಣದಲ್ಲಿ ಇರುವ  ಉಮೇದುವಾರರು

ಅಬ್ದುಲ್ ರಹಿಮಾನ್,ಮಹಮ್ಮದ್ ಅನ್ಸಾರ್,ಮಹಮ್ಮದ್ ರಫೀಕ್ ಸಿ. ಎಂ, ಕೆ ಬಿ ಇಬ್ರಾಹಿಮ್, ಎಸ್ ಎಮ್ ಬಾಪು ಸಾಹೀಬ್, ಮಹಮ್ಮದ್ ರೀಯಾಜ್ ಕೆ ಯು, ಮಹಮ್ಮದ್ ಶರೀಫ್ ಎಮ್ ಕೆ, ಮಹಮ್ಮದ್ ಹನೀಫ್ ಎಸ್ ಕೆ, ಮುಹಿಯದ್ದೀನ್ ಹಾಜಿ ಕೆ ಎಮ್, ಹಸೈನಾರ್ ಎ ಕೆ

ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸುವ ಉಮೇದುವಾರರು

ಅಪೋಲಿನ್ ಡಿ ಸೋಜಾ, ಅಮೀನಾ ಎಸ್,ಜೂಲಿಯಾನ ಕ್ರಾಸ್ತ, ಸಾಜಿದಾ ಜಿ. ಎ

ಸ್ಪರ್ಧಾ ಕಣದಿಂದ ಹಿಂದೆ ಸರಿದ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ.!!?

ಚುನಾವಣೆಯಲ್ಲಿ ಸ್ಪರ್ಧಿಸಲು ನಾಮ ಪತ್ರ ಸಲ್ಲಿಸಿ ನಾಮಪತ್ರ ಹಿಂತೆಗೆಯುವ ದಿನ ದಂದು ಕೆಲವು ಕಾರಣಗಳಿಂದ ನಾಮ ಪತ್ರ ಹಿಂದೆಗೆಯಲು ಸಾಧ್ಯವಾಗದೇ ಸ್ಪರ್ಧಿ ಮಹಮ್ಮದ್ ಶರೀಫ್ ಎಂ.ಕೆ, ಸ್ಪರ್ಧಾ ಕಣದಿಂದ ಸ್ವಯಂ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಲಭ್ಯವಾಗಿದೆ !

3600 ನೋಂದಣಿ ಸದಸ್ಯರು : ಮತದಾನಕ್ಕೆ ಅರ್ಹ 254 ಸದಸ್ಯರು ಮಾತ್ರ ..!!

ಸಂಘದಲ್ಲಿ 3600 ಸದಸ್ಯರು ಇದ್ದು ಮತದಾನದ ಹಕ್ಕು ಪಡೆದ ಸದಸ್ಯರು ಕೇವಲ 254 ಮಂದಿ ಮಾತ್ರ. ಈ ಬಗ್ಗೆ ಈ ವಾರ್ತೆ ಸಂಬಂಧ ಪಟ್ಟವರಲ್ಲಿ ವಿಚಾರಿಸಿದಾಗ ಹಲವು ಸದಸ್ಯರು ಸಹಕಾರಿ ಕಾನೂನಿನಂತೆ 10 ಸಾವಿರಕ್ಕಿಂತ ಹೆಚ್ಚು ವ್ಯವಹಾರ ಮಾಡದವರು. ಸಂಸ್ಥೆಯಿಂದ ಸಾಲ ಪಡೆದು ಸರಿಯಾಗಿ ಕಂತು ಪಾವತಿಸಲು ಸಾಧ್ಯವಾಗದೇ ಸುಸ್ತಿಯಲ್ಲಿ ಇರುವವರು, 100 ನೀಡಿ ಸದಸ್ಯರು ಆದವರು, ಇನ್ನೂ ಕೆಲವು ನಿಬಂಧನೆ ಇರುವ ಕಾರಣದಿಂದ ಹಲವರಿಗೆ ಮತದಾನದ ಹಕ್ಕು ಮತ್ತು ಸ್ಪರ್ಧೆ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂಬ ಮಾಹಿತಿ ನೀಡಿದರು

ನನಗೆ ಮತದಾನದ ಹಕ್ಕನ್ನು ನಿರಕರಿಸಿದ್ದಾರೆ : ಓರ್ವ ಸದಸ್ಯನ ಅಳಲು.!?

ನಾನು ಸಂಸ್ಥೆಯಲ್ಲಿ ಸದಸ್ಯ ನಾಗಿದ್ದು ನನಗೆ ನನಗೆ ಮತದಾನದ ಹಕ್ಕನ್ನು ನಿರಕರಿಸಿದ್ದಾರೆ. ಈ ವಿಚಾರವಾಗಿ ಸಂಸ್ಥೆಯಲ್ಲಿ ವಿಚಾರಿಸಿದ್ದಾಗ. ನೀವು 100 ರೂಪಾಯಿ ಕೊಟ್ಟು ಸದಸ್ಯರಾಗಿದ್ದಿರಾ ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು 500 ರೂ ಸದಸ್ಯತನವನ್ನು ಪಡೆಯಬೇಕು ಎಂದರು ? ನಾನು ಅವರಲ್ಲಿ ಏಕೆ‌ ಆ ಸಮಯದಲ್ಲಿ ನನಗೆ ಮಾಹಿತಿ ನೀಡಲಿಲ್ಲ ಎಂದು ಕೇಳಿದಾಗ ಅವರಿಂದ ಉತ್ತರವಿಲ್ಲ. ಈ ರೀತಿಯಲ್ಲಿ ಹಲವಾರು ಸದಸ್ಯರ ಮತದಾನದ ಹಕ್ಕು ಕಳೆದುಹೋಗಿರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ

ಅಭಿವೃದ್ಧಿ ಪಥದಲ್ಲಿ ಮುಂದುವರಿಯುತ್ತಿರುವ ಸಂಸ್ಥೆ…..

ಅಲ್ಪ ಸಂಖ್ಯಾತರು ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮತ್ತು ವಾಣಿಜ್ಯ ಮತ್ತು ವಿವಿಧ ರೀತಿಯಲ್ಲಿ ಸ್ವಾವಲಂಬಿ ಯಾಗಲು ಸುಮಾರು 25 ವರ್ಷಗಳ ಹಿಂದೆ ಟಿ ಎಮ್ ಶಹೀದ್, ಬಾಪೂ ಸಾಹೀಬ್,ಕೆ ಎಮ್ ಮುಸ್ತಾಫ, ಬೀರಾಮೊಹಿದ್ದೀನ್ ಮೊದಲಾದ ಮುಸ್ಲಿಂ ಸಮುದಾಯದ ಮುಖಂಡರು ಸಂಸ್ಥೆ ಸ್ಥಾಪಿಸಿದರು, ಸಂಸ್ಥೆಯ ಸದಸ್ಯರಿಗೆ ವಿವಿಧ ರೀತಿಯ ಸಾಲ ಯೋಜನೆಗಳು, ಇನ್ನಿತರ ಸಹಕಾರಿ, ಸವಲತ್ತುಗಳನ್ನು ಸಂಸ್ಥೆಯ ವತಿಯಿಂದ ಸಂಸ್ಥೆಯ ಸದಸ್ಯರಿಗೆ ಲಭ್ಯವಾಗಿ ಬಹಳ ಪ್ರಯೋಜನಕಾರಿ ಯಾಗಿ ಸಂಸ್ಥೆ ಬೆಳೆಯುತ್ತ ಬಂತು ಇದೀಗ ಸಂಸ್ಥೆ ಹಾಲಿ ಅಧ್ಯಕ್ಷರಾದ ಇಕ್ಬಾಲ್ ಎಲೆಮಲೆ ಮತ್ತು ಅವರ ತಂಡ ಗಣನೀಯ ವಾಗಿ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಸಂಸ್ಥೆಯನ್ನು ಕೊಂಡೊಯ್ದಿದ್ದಾರೆ ಹಲವಾರು ಅಭಿವೃದ್ಧಿಯ ಬದಲಾವಣೆವನ್ನು ತಂದಿದ್ದಾರೆ ಮಾತ್ರವಲ್ಲ ಬೆಳ್ಳಾರೆ ಮತ್ತು ಈಶ್ವರಮಂಗಲ ದಲ್ಲಿ ಶಾಖೆ ಆರಂಭಿಸಿದ್ದಾರೆ ಆದರೆ ಒಂದು ದೊಡ್ಡ ಕೊರತೆ. ಏನೆಂದರೆ ಅಭಿವೃದ್ಧಿಯ ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದು!!.. ಮುಂದಿನ ದಿನಗಳಲ್ಲಿ ಇದು ಸಾಕಾರ ಆಗಬಹುದು ಈ ಸಂಸ್ಥೆಯಲ್ಲಿ ಟಿ ಎಮ್ ಶಹೀದ್, ಸಂಶುದ್ದೀನ್ ಎಸ್, ಮಹಮ್ಮದ್ (Rk) ಇಸ್ಮಾಯಿಲ್ ಪಪ್ಪಿನಂಗಡಿ ಮೊದಲಾದವರು ಅಧ್ಯಕ್ಷರಾಗಿ ಸೇವೆಸಲ್ಲಿಸಿ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಸಾಗಲು ಕಾರಣಕರ್ತರಾಗಿದ್ದಾರೆ

Related Posts