Featured, ಇತರೆ, ಸ್ಥಳೀಯ

ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನೀಡುವ 2025ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಕಟ

ಖ್ಯಾತ ಉದ್ಯಮಿ ಮತ್ತು ಲೋಕೋಪಕಾರಿ ಜನಸ್ನೇಹಿ ಮೈಕೆಲ್ ಡಿಸೋಜಾ, ಶಿಕ್ಷಣ ಹರಿಕಾರ ಡಾ ಯೆನೆಪೊಯ ಅಬ್ದುಲ್ಲ ಕುಂಞಿ ಸಹಿತ 10 ಜನರಿಗೆ ಸಂದೇಶ ಪ್ರಶಸ್ತಿ

ಮಂಗಳೂರು

ಸಂಸ್ಕೃತಿ , ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ಅಸಾಧಾರಣ ಸಾಧನೆ ಮಾಡಿದ  ವ್ಯಕ್ತಿಗಳಿಗೆ  ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಮಂಗಳೂರು ಇವರು ನೀಡುವ 2025ನೇ ಸಾಲಿನ ಸಂದೇಶ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಖ್ಯಾತ ಅನಿವಾಸಿ  ಉದ್ಯಮಿ ಮತ್ತು ಲೋಕೋಪಕಾರಿ ಮನುಷ್ಯ ಸ್ನೇಹಿ ಮೈಕೆಲ್ ಡಿಸೋಜಾ, ಶಿಕ್ಷಣ ಹರಿಕಾರ ಡಾ ಯೆನೆಪೊಯ ಅಬ್ದುಲ್ಲ ಕುಂಞಿ ಕಲಾಕಾರ ಜನಪ್ರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸಹಿತ 10 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಂದೇಶ ಸಾಹಿತ್ಯ ಪ್ರಶಸ್ತಿಗೆ ಬಿ.ಆರ್. ಲಕ್ಷ್ಮಣ ರಾವ್ (ಕನ್ನಡ), ಐರಿನ್ ಪಿಂಟೊ (ಕೊಂಕಣಿ) ಹಾಗೂ ಗಣೇಶ್ ಅಮೀನ್ ಸಂಕಮಾರ್ (ತುಳು) ಆಯ್ಕೆಯಾಗಿದ್ದಾರೆ. ಸಂದೇಶ ಕಲಾ ಪ್ರಶಸ್ತಿಗೆ ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ, ಸಂದೇಶ ಮಾಧ್ಯಮ ಪ್ರಶಸ್ತಿಗೆ ಡಿ.ವಿ. ರಾಜಶೇಖರ್, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಗೆ ರೋಶನ್ ಡಿಸೋಜ, ಸಂದೇಶ ಶಿಕ್ಷಣ ಪ್ರಶಸ್ತಿಗೆ ಯೆನೆಪೊಯ ಅಬ್ದುಲ್ಲ ಕುಞ್ಚಿ ಹಾಗೂ ಸಂದೇಶ ವಿಶೇಷ ಪ್ರಶಸ್ತಿಗೆ ಕೆ.ವಿ. ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ವಿಶೇಷವಾಗಿ ಸಂದೇಶ ಗೌರವ ಪ್ರಶಸ್ತಿ ಹಾಗೂ ಸಂದೇಶ ಯುವ ಪ್ರತಿಭಾ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಗೌರವ ಪ್ರಶಸ್ತಿಗೆ ಸಮಾಜ ಸೇವಕ ಮೈಕಲ್ ಡಿಸೋಜ ಹಾಗೂ ಸಂದೇಶ ವಿಶೇಷ ಯುವ ಪ್ರತಿಭಾ ಪ್ರಶಸ್ತಿಗೆ ರೆಮೋನ ಇವೆಟ್ ಪಿರೇರಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ಫಾ. ಸುದೀಪ್ ಪಾಲ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1. ಊರಿಗೆ ಬಂದ ಕಾಡು ಹಂದಿ ಮೂವರ ಮೇಲೆ ದಾಳಿ; ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ!

2. ಆಂಬ್ಯುಲೆನ್ಸ್ ಗೆ ದಾರಿ ಬಿಡದ ಕಾರು ಚಾಲಕ! ಸಮಯಕ್ಕೆ ಆಸ್ಪತ್ರೆಗೆ ತಲುಪದೆ ರೋಗಿ ಮೃತ್ಯು;

3. ಸ್ಕೂಟರ್ ಮತ್ತು ಟೆಂಪೋ ಮಧ್ಯೆ ಭೀಕರ ಅಪಘಾತ:- ಸ್ಕೂಟರ್ ಸವಾರ ಮೃತ್ಯು

4. ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನೀಡುವ 2025ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಕಟ

5. ಹರಿಯಾಣ ಎಂಬಿಬಿಎಸ್ ಸೆಮಿಸ್ಟರ್ ಪರೀಕ್ಷೆಯ ಅವ್ಯವಹಾರ: ಒಂದು ವಿಷಯದಲ್ಲಿ ಉತ್ತೀರ್ಣರಾಗಲು 5 ಲಕ್ಷ ರೂ!?

6. ಪೂಜಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು ಬೆಂಬಲಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ!!

7. 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ- ದೆಹಲಿಯಲ್ಲಿ ಕಾಂಗ್ರೆಸ್ ಭರವಸೆ!!

8. ಇಂಟರ್ನೆಟ್ ಬಳಸುವ ಭಾರತೀಯರ ಸಂಖ್ಯೆ 90 ಕೋಟಿ ದಾಟಿದೆ: IAMAI ವರದಿ:

8. ಎಟಿಎಂ ತುಂಬಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ: 93 ಲಕ್ಷ ಲೂಟಿ; ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ

9. ಇಬ್ರಾಹಿಂ ರೆಂಗೇಲ್‌ ರಿಯಾದ್ ನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್

10. ಮೈ ಬಣ್ಣದ ತಾರತಮ್ಯ ಹಾಗೂ ಇಂಗ್ಲೀಷ್ ಮಾತನಾಡಲು ಬರಲ್ಲ ಎಂಬ ಕಾರಣಕ್ಕೆ ಕಿರುಕುಳ – ವಿಚ್ಚೇದನಕ್ಕೆ ಒತ್ತಾಯ!; ನೇಣಿಗೆ ಕೊರಳೊಡ್ಡಿದ ಶಹನಾ ಮಮ್ತಾಜ್!

m

Related Posts