Featured, ಇತರೆ, ಸ್ಥಳೀಯ

ಸ್ಕೂಟರ್ ಮತ್ತು ಟೆಂಪೋ ಮಧ್ಯೆ ಭೀಕರ ಅಪಘಾತ:- ಸ್ಕೂಟರ್ ಸವಾರ ಮೃತ್ಯು

ಕೊಣಾಜೆ: ದ್ವಿಚಕ್ರ ವಾಹನ ಮತ್ತು ಏಸ್ ಟೆಂಪೊ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಯುವಕ ಮೃತಪಟ್ಟ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪದವು ಬಳಿ ಇಂದು ಬೆಳಗ್ಗೆ 10:30ರ ಸುಮಾರಿಗೆ ಸಂಭವಿಸಿದೆ. ಮೃತರನ್ನು ಕೊಣಾಜೆ ಗ್ರಾಮದ ನಡುಪದವು ಕಾಟುಕೋಡಿ ನಿವಾಸಿ ಮೊಯ್ದೀನ್ ಕುಂಞಿ ಬಾವು ಎಂಬವರ ಪುತ್ರ ಅಬೂಬಕರ್ ಸಿದ್ದೀಕ್ ರಝ್ವಿ(22) ಎಂದು ಗುರುತಿಸಲಾಗಿದೆ. ದೇರಳಕಟ್ಟೆ ಕಡೆಯಿಂದ ತೆರಳುತ್ತಿದ್ದ ಸ್ಕೂಟರ್ ಮತ್ತು ಮುಡಿಪು ಕಡೆಯಿಂದ ತೊಕ್ಕೊಟ್ಟಿನತ್ತ ಬರುತ್ತಿದ್ದ ಏಸ್ ಟೆಂಪೊ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಭಾಗಶಃ ಟೆಂಪೊದೊಳಗೆ ನುಗ್ಗಿದ್ದು, ನಜ್ಜುಗುಜ್ಜಾಗಿದೆ. ಈ ವೇಳೆ ಟೆಂಪೋದ ಮೇಲೆ ಎಸೆಯಲ್ಪಟ್ಟ ಅಬೂಬಕರ್ ಸಿದ್ದೀಕ್ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಟೆಂಪೋ ಚಾಲಕ ಕೂಡಾ ಗಾಯಗೊಂಡಿದ್ದಾರೆ.ಅಬೂಬಕರ್ ಸಿದ್ದೀಕ್ ಕಾಸರಗೋಡಿನಲ್ಲಿ ಅರಬಿಕ್ ಶರೀಅತ್ ಕಾಲೇಜಿನಲ್ಲಿ ಕಲಿಯುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

1. ಊರಿಗೆ ಬಂದ ಕಾಡು ಹಂದಿ ಮೂವರ ಮೇಲೆ ದಾಳಿ; ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ!

2. ಆಂಬ್ಯುಲೆನ್ಸ್ ಗೆ ದಾರಿ ಬಿಡದ ಕಾರು ಚಾಲಕ! ಸಮಯಕ್ಕೆ ಆಸ್ಪತ್ರೆಗೆ ತಲುಪದೆ ರೋಗಿ ಮೃತ್ಯು;

3. ಸ್ಕೂಟರ್ ಮತ್ತು ಟೆಂಪೋ ಮಧ್ಯೆ ಭೀಕರ ಅಪಘಾತ:- ಸ್ಕೂಟರ್ ಸವಾರ ಮೃತ್ಯು

4. ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನೀಡುವ 2025ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಕಟ

5. ಹರಿಯಾಣ ಎಂಬಿಬಿಎಸ್ ಸೆಮಿಸ್ಟರ್ ಪರೀಕ್ಷೆಯ ಅವ್ಯವಹಾರ: ಒಂದು ವಿಷಯದಲ್ಲಿ ಉತ್ತೀರ್ಣರಾಗಲು 5 ಲಕ್ಷ ರೂ!?

6. ಪೂಜಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು ಬೆಂಬಲಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ!!

7. 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ- ದೆಹಲಿಯಲ್ಲಿ ಕಾಂಗ್ರೆಸ್ ಭರವಸೆ!!

8. ಇಂಟರ್ನೆಟ್ ಬಳಸುವ ಭಾರತೀಯರ ಸಂಖ್ಯೆ 90 ಕೋಟಿ ದಾಟಿದೆ: IAMAI ವರದಿ:

8. ಎಟಿಎಂ ತುಂಬಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ: 93 ಲಕ್ಷ ಲೂಟಿ; ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ

9. ಇಬ್ರಾಹಿಂ ರೆಂಗೇಲ್‌ ರಿಯಾದ್ ನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್

10. ಮೈ ಬಣ್ಣದ ತಾರತಮ್ಯ ಹಾಗೂ ಇಂಗ್ಲೀಷ್ ಮಾತನಾಡಲು ಬರಲ್ಲ ಎಂಬ ಕಾರಣಕ್ಕೆ ಕಿರುಕುಳ – ವಿಚ್ಚೇದನಕ್ಕೆ ಒತ್ತಾಯ!; ನೇಣಿಗೆ ಕೊರಳೊಡ್ಡಿದ ಶಹನಾ ಮಮ್ತಾಜ್!

m

Related Posts