ದಕ್ಷಿಣಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಗಳ ನಿಗದಿತ ಓವರ್ ಗೌಡ ಮನೆತನಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ
ಸುಳ್ಯ
IPL ಆರಂಭದ ನಂತರ ಚುಟುಕು ಕ್ರಿಕೆಟ್ ಮನ್ನಣೆಗೆ ಬಂತು, ಊರು ಗ್ರಾಮ ಗ್ರಾಮಗಳಲ್ಲಿ ಚುಟುಕು ಕ್ರಿಕೆಟ್ ಹಬ್ಬ ಆರಂಬವಾದರೂ ಚುಟುಕು ಕ್ರಿಕೆಟ್ ಗೆ ಸ್ಥಳೀಯ ವಾಗಿ ಹೊಸ ಆಯಾಮ ಮಾಡಿಕೊಟ್ಟದೇ ಕ್ರಿಕೆಟ್ ರಸಿಕರ ಮನಗೆದ್ದ ಗೌಡಕಪ್ ಇದು ಜಾತಿ ಸಮುದಾಯ ದ ಯುವ ಕ್ರಿಕೆಟಿಗರನ್ನು ಬೆಳೆಸುವ ಉದ್ದೇಶ ದಿಂದ ಆರಂಭ ಗೊಂಡ ಗೌಡಕಪ್ ಪಂದ್ಯಾಕೂಟ ಅದರ ಯಶಸ್ವಿಯ ಗರಿಯನ್ನು ಗೌರವಯುತವಾಗಿ ಉಳಿಸಿ ಕೊಂಡಿದೆ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕೂಟಕ್ಕಾಗಿ ಕಾಯುತ್ತಾ ಎದುರು ನೊಡುತ್ತಾರೆ ಈ ಪಂದ್ಯಕೂಟ ವನ್ನು ಆಯೋಜಕರು ಬಹಳ ಮುತುವರ್ಜಿಯಿಂದ ಆಯೋಜಿಸುತ್ತಾರೆ ಬಹಳ ಸಿಸ್ತು, ಅಚ್ಚುಕಟ್ಟಾಗಿ ತಿಂಗಳ ಹಿಂದೆಯೇ ಸಂಘಟಿತರಾಗಿ ಪಂದ್ಯಕೂಟ ವನ್ನು ವರ್ಣರಂಜಿತ ವಾಗಿ ನಡೆಸಿ ಯಶಸ್ವಿಯಾಗುತ್ತಾರೆ ಗೌಡ ಕಪ್ ತನ್ನದೇಯಾದ ಛಾಪು ಮೂಡಿಸುತ್ತದೆ ಆದೇ ರೀತಿ ಮಾರ್ಚ್ 1 ಹಾಗೂ ಮಾರ್ಚ್ 2 ರಂದು ಗುತ್ತಿಗಾರಿನಲ್ಲಿ ದೇವಶ್ಯ ಗೌಡ ಕಪ್-2025 ಕ್ರಿಕೆಟ್ ಪಂದ್ಯಕೂಟ ಅದ್ದೂರಿ ಯಾಗಿ ಜರುಗಲಿದೆ ಮಾತ್ರವಲ್ಲ ಮಹಿಳೆಯರು ಸಹ ಕ್ರಿಕೆಟ್ ಪಂದ್ಯದಲ್ಲಿ ಬಾಗಿಗಳಾಗಿ ತಾಲೂಕಿನಲ್ಲಿ ಪ್ರಪ್ರಥಮವಾಗಿ ಮಹಿಳಾ ಕ್ರಿಕೇಟ್ ತಂಡವನ್ನು ಹುಟ್ಟು ಹಾಕಬೇಕು ಅನ್ನುವ ದೃಷ್ಟಿಯಿಂದ ಈ ಪಂದ್ಯಕೂಟದಲ್ಲಿ ಮಹಿಳೆಯರಿಗೆ ಕ್ರಿಕೆಟ್ ಆಡಲು ಅವಕಾಶ ನೀಡಲಾಗುತ್ತಿದೆ ಎಂದು ದೇವಶ್ಯ ಗೌಡ ಕಪ್-2025 ಕ್ರಿಕೆಟ್ ಪಂದ್ಯಕೂಟದ ಆಯೋಜಕರು ಇ ಇವಾರ್ತೆ ಗೆ ತಿಳಿಸಿದ್ದಾರೆ

ಪಂದ್ಯಕೂಟದ ವಿವರಗಳು
ಸುಳ್ಯ ಗುತ್ತಿಗಾರು : ದಕ್ಷಿಣಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಗಳ ನಿಗದಿತ ಓವರ್ ಗೌಡ ಮನೆತನಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾರ್ಚ್ 1 ಶನಿವಾರ ಹಾಗೂ ಮಾರ್ಚ್ 2 ಆದಿತ್ಯವಾರ ಗುತ್ತಿಗಾರಿನ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ…. ಪ್ರಥಮ ಬಹುಮಾನವಾಗಿ 22222 ನಗದು ಮತ್ತು ದೇವಶ್ಯ ಕಪ್, ದ್ವಿತೀಯ ಬಹುಮಾನ 11111 ನಗದು ಮತ್ತು ದೇವಶ್ಯ ಕಪ್, ಸೆಮಿಫೈನಲ್ ನಿರ್ಗಮಿತ ತಂಡಗಳಿಗೆ ತಲಾ 2222 ನಗದು ಮತ್ತು ದೇವಶ್ಯ ಕಪ್ ನೀಡಲಾಗುವುದು

ಶಿಸ್ತುಬದ್ದ ತಂಡಕ್ಕೆ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನವಾಗಿ ಉತ್ತಮ ದಾಂಡಿಗ ನಗದು ಮತ್ತು ಟ್ರೋಫಿ , ಉತ್ತಮ ಎಸೆತಗಾರ ನಗದು ಮತ್ತು ಟ್ರೋಫಿ, ಉತ್ತಮ ಗೂಟರಕ್ಷಕ ನಗದು ಮತ್ತು ಟ್ರೋಫಿ, ಉತ್ತಮ ಮಹಿಳಾ ಆಟಗಾರ್ತಿ ನಗದು ಮತ್ತು ಟ್ರೋಫಿ, ಫೈನಲ್ ಪಂದ್ಯಶ್ರೇಷ್ಠ ನಗದು ಮತ್ತು ಟ್ರೋಫಿ, ಸರ್ವಾಂಗೀಣ ಆಟಗಾರ ನಗದು ಮತ್ತು ಟ್ರೋಫಿ, ಭಾಗವಹಿಸುವ ಎಲ್ಲಾ ತಂಡಗಳಿಗೆ ಸ್ಮರಣಿಕೆ ಮತ್ತು ಆಕರ್ಷಕ ಬಹುಮಾನ, ಪ್ರತೀ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿ ಮತ್ತು ಎಲ್ಲರಿಗೂ ಎರಡು ದಿನ ಉಚಿತ ಭೋಜನದ ವ್ಯವಸ್ಥೆ ಇರಲಿದೆ ಹಾಗೂ ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಕ್ರಷಿಕರು, ದೇವಿಸಿಟಿ ಕಾಂಪ್ಲೆಕ್ಸ್ ಮಾಲಕರು ಆಗಿರುವ ಶ್ರೀಯುತ ದೊಡ್ಡಣ್ಣ ಗೌಡ ಚಿಕ್ಮುಳಿ ಮತ್ತು ರಾಷ್ಟ್ರೀಯ ಯೋಗಪಟು ಆಗಿರುವ ಶ್ರೀ ಮಣಿಪ್ರಕಾಶ್ ಕಡೋಡಿ ಇವರಿಗೆ ಸನ್ಮಾನ ಕಾರ್ಯಕ್ರಮವಿದೆ ಎಂದು ದೇವಶ್ಯ ಕ್ರಿಕೆಟ್ ಸಮಿತಿಯವರು ತಿಳಿಸಿದ್ದಾರೆ






m

