ಇತರೆ

(KUWS) ಅವೈಜ್ಞಾನಿಕ ಜೆ ಜೆ ಎಮ್ ಪೈಪ್ ಲೈನ್ ಕಾಮಗಾರಿ, ಶಿಥಿಲಗೊಂಡ ಕಾಂಕ್ರೀಟ್ ರಸ್ತೆ : ಶೀಘ್ರವಾಗಿ ದುರಸ್ತಿ ಪಡಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ

ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸುಳ್ಯ ನಗರ ಪಂಚಯಾತ್ ಸದಸ್ಯ ಶರಿಫ್ ಕಂಠಿ!

ಸುಳ್ಯ : ಸಮಸ್ಯೆಗಳ ಮೇಲೆ ಸಮಸ್ಯೆ ಯಲ್ಲಿ ಮುಳುಗಿಹೋಗಿರುವ ಸುಳ್ಯ ನಗರದಲ್ಲಿ ಯಾವುದೇ ಕಾಮಗಾರಿ ವ್ಯವಸ್ಥಿತವಾಗಿ ನಡೆಯುವುದಿಲ್ಲ, ಆರಂಭಿಸಿದ ಕಾಮಗಾರಿ ಮುಗಿಯುವುದಿಲ್ಲ!, ಹೇಳಿ ಕೇಳಿ ಜನಸಾಮಾನ್ಯರು ದೂರು ನೀಡಿ ಸಾಕು ಸಾಕಗಿ ಹೋಗಿ ಇದೀಗ ಜನಪ್ರತಿನಿಧಿಯೇ ಖುದ್ದು ಅವ್ಯವಸ್ಥೆಯ ಬಗ್ಗೆ ರೊಚ್ಚಿಗೆದ್ದ ಘಟನೆ ಇಂದು ಜ.27ರಂದು ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಯಾಕೆ ಅಧಿಕಾರಿಗಳ ಮೇಲೆ ಹರಿಹಾಯ್ದರು? ಅದಕ್ಕೂ ಕಾರಣವಿದೆ! ಕ್ಷಮೆಗೂ ಒಂದು ಮಿತಿ ಇದೆ ಅಲ್ಲವೇ? ಅಭಿವೃದ್ಧಿ ಮತ್ತು ವ್ಯವಸ್ಥೆಯ ಹೆಸರು ಹೇಳಿ ಕಾಮಗಾರಿ ಕೈಗೆತ್ತಿಕೊಂಡರು ಅದನ್ನು ವೈಜ್ಞಾನಿಕವಾಗಿ, ವ್ಯವಸ್ಥಿತವಾಗಿ ಪೂರ್ಣ ಗೊಳಿಸುತ್ತಿಲ್ಲ! ಎಲ್ಲವೂ ಅರ್ಧಂಬರ್ಧ
ನಗರ ಆಡಳಿತ ಸಬೂಬು ಕೊಡುವುದನ್ನು ನಿಲ್ಲಿಸಿ ಪ್ರಾಮಾಣಿಕವಾಗಿ ಸ್ಥಗಿತಗೊಂಡ ಕಾಮಗಾರಿ ಬಗ್ಗೆ ಅವಲೋಕನ ಮಾಡಿ ಕಾಮಗಾರಿ ವ್ಯವಸ್ಥಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ ಎಂದು ಶರೀಫ್ ಕಂಠಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡದ್ದು ನ್ಯಾಯಯುತ ವಾಗಿದೆ.

ಸುಳ್ಯದ ರಥಬೀದಿಯಿಂದ ಆಲೆಟ್ಟಿ ಗುರುಂಪು ರಸ್ತೆಯವರಗೆ (KUWS) ಜೆ ಜೆ ಎಮ್ ಪೈಪ್ ಲೈನ್ ಕಾಮಗಾರಿ ಗಾಗಿ ಸುಮಾರು 500 ಮೀಟರ್ ಕಾಂಕ್ರೀಟ್ ರಸ್ತೆಯನ್ನು 2 ಮೀಟರ್ ಅಗಲದಲ್ಲಿ ಅಗೆದು ಸರಿಯಾಗಿ ಮುಚ್ಚದೆ ಹೊಂಡ ಗುಂಡಿಗಳಾಗಿ ದೂಳು ಎದ್ದು ಒಂದು ಬದಿಯ ಅಂಗಡಿ ವ್ಯಾಪಾರಸ್ಥರಿಗೆ, ವಾಹನ ಸವಾರಿಗೆ, ಸಾರ್ವಜನಿಕರಿಗೆ ಬಾರಿ ತೊಂದರೆ ಆಗುತ್ತಿದ್ದು, ಇದು ಸಹಿಸಲು ಅಸಾಧ್ಯ ಎರಡು ದಿನಗಳ ಒಳಗಡೆ ವೈಜ್ಞಾನಿಕ ರೀತಿಯಲ್ಲಿ ರಸ್ತೆ ದುರಸ್ತಿ ಮಾಡಲು ಪ್ರಾರಂಭಿಸದಿದ್ದಲಿ ರಸ್ತೆಯಲ್ಲಿ ಸಮಾನ ಮನಸ್ಕರ ಸಹಕಾರದಿಂದ ಧರಣಿ , ಪ್ರತಿಭಟನೆ, ಹಮ್ಮಿಕೊಳ್ಳುತ್ತೆವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

m

Related Posts