ದಿನಾಂಕ (01/02/2024) ಗಾಂಧಿನಗರ ಅರಣ್ಯ ಇಲಾಖೆ ಕ್ವಾಟ್ರಸ್ ಬಳಿ ಈಶ್ವರಮಂಗಲದ ನಾರಾಯಣ ಎಂಬವರ ಮೃತದೇಹ ಪತ್ತೆಯಾಗಿತ್ತು ಸಾವು ಸಂಭವಿಸಿ ದಿನಗಳು ಕಳೆದ ಕಾರಣ ಮೃತದೇಹ ದಿಂದ ದುರ್ಗಂಧ ವ್ಯಾಪಿಸಿತು, ಇಂತಹ ಮೃತದೇಹವನ್ನು ಎತ್ತಲು ಸ್ವಲ್ಪ ಗುಂಡಿಗೆ ಇದ್ದವರಿಂದ ಮಾತ್ರ ಸಾಧ್ಯ ಈಗೆ ಅನಾಥ ವಾಗಿ ಬಿದ್ದ ಶವವನ್ನು ಸುಳ್ಯ ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಸದಸ್ಯರಾದ ರಫೀಕ್ ಬಾಳಮಕ್ಕಿ, ಶಮೀಮ್ ಸುಳ್ಯ, ಅಭಿಲಾಷ್ ಇವರು ಬಂದು ಶವವನ್ನು ಎತ್ತಿ ಆಸ್ಪತ್ರೆಗೆ ಸಾಗಿಸಿದರು ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ




m

