Featured, ಇತರೆ, ಸ್ಥಳೀಯ

ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್‌ ಇದರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

ಬೆಲೆ ಏರಿಕೆ ವಿರುದ್ಧ ರಸ್ತೆ ತಡೆಮಾಡಿ ಆಕ್ರೋಶ ವ್ಯಕ್ತಪಡಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು

ಪ್ರತಿಭಟನೆ ನೇತೃತ್ವ ವಹಿಸಿದ ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್‌ ಕಜೆಗದ್ದೆ,ಉಪಾಧ್ಯಕ್ಷರುಗಳಾದ ರಂಜಿತ್ ರೈ,, ಆಶೀಕ್ ಅರಂತೋಡು,

ಸುಳ್ಯ : ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್‌ ಇದರ ವತಿಯಿಂದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಚೇತನ್ ಕಜೆಗದ್ದೆ ಇವರ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ಧ ಬೆಲೆ ಏರಿಕೆ ಮತ್ತು ದಮನ ರಾಜಕೀಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು

ಯೂತ್ ಕಾಂಗ್ರೆಸ್ ಆರೋಪ ಎನು ?

ನಿರಂತರವಾಗಿ ಕೇಂದ್ರ ಸರಕಾರ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುತ್ತಾ ಬರುತ್ತಿದೆ. ಕಚ್ಚಾ ತೈಲ ಬೆಲೆ ಜಾಗತಿಕ ಮಾರುಕಟ್ಟೆ ಯಲ್ಲಿ ಗಣನೀಯ ವಾಗಿ ಕುಸಿದರು. ನಮ್ಮ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ವಾಗುತ್ತಿದೆ. ಇನ್ನೂ ಅಡುಗೆ ಇಂಧನ ಬೆಲೆಯನ್ನು ತಿಂಗಳಿಂದ ತಿಂಗಳಿಗೆ ಏರಿಕೆ ಮಾಡತ್ತಾ ಬಂದಿರುತ್ತದೆ. ಇಷ್ಟಾದರೂ ದೇಶದ ಅಭಿವೃದ್ಧಿ GDP ಕುಸಿತ, ದೇಶದ ಮೇಲೆ ಸಾಲದ ಹೊರೆ ಅಧಿಕ ವಾಗುತ್ತಿದ್ದು ಕಾರಣ ಏನು?.. ಒಂದು ಕಡೆ ಅವೈಜ್ಞಾನಿಕ GST. ಅದರಲ್ಲೂ ರಾಜ್ಯಗಳ ಪಾಲು ಸರಿಯಾಗಿ ಕೊಡದೆ.ಇನ್ನೊಂದು ಕಡೆ ಗಣನೀಯ ವಾಗಿ ಬೆಲೆ ಏರಿಕೆ ಮಾಡಿದರು.ಅಭಿವೃದ್ಧಿ ಶೂನ್ಯ. ಇಷ್ಟಾದರೂ! ನಿಶ್ಚಿತವಾದ ನಿವ್ವಳ ಎಲ್ಲಿದೆ ? ಎಲ್ಲಿ ಸೋರಿಕೆ ಯಾಗುತ್ತಿದೆ. ಎಂದು ಗಂಭೀರವಾಗಿ ಕೇಂದ್ರ ಸರಕಾರದ ಮೇಲೆ ಯೂತ್‌ ಕಾಂಗ್ರೆಸ್ ಆರೋಪ ಮಾಡಿದೇ….

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿಎಂ ಶಹೀದ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್, ಪ್ರಧಾನ ಕಾರ್ಯದರ್ಶಿ ಪಿ.ಎಸ್‌.ಗಂಗಾಧ‌ರ್, ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫಾ ಜನತಾ, ಸುಳ್ಯ ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಫೈಝಲ್ ಕಡಬ ಮೊದಲಾದವರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಗತ್ಯ ವಸ್ತುಗಳ ಮತ್ತು ಪೆಟ್ರೋಲ್, ಡೀಸೆಲ್,ಚಿನ್ನ, ಗ್ಯಾಸ್, ಈ ಎಲ್ಲಾ ಬೆಲೆಗಳನ್ನು ಹೆಚ್ಚಿಸಿರುವುದು ಬಿಜೆಪಿ ಬೆಂಬಲಿತ ಆಡಳಿತದ ಕೇಂದ್ರ ಸರಕಾರ. ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ಅಭಿವೃದ್ಧಿಯನ್ನು ಮಾಡುವುದು ಬಿಟ್ಟು ಅಗತ್ಯ ವಸ್ತುಗಳ ಪೆಟ್ರೋಲ್ ಬೆಲೆ ಗ್ಯಾಸ್ ಬೆಲೆಗಳನ್ನು ಹೆಚ್ಚಿಸುವ ಕೆಲಸವನ್ನು ಮಾತ್ರವೇ ಮಾಡುತ್ತಾ ಬಂದಿದೆ. ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ” ಎಂದು ಪ್ರಶ್ನಿಸಿದರು.

ಬಿಜೆಪಿಗರು ಮೊದಲು ಸುಳ್ಳು ಹೇಳುವುದು ನಿಲ್ಲಿಸಿ!!!..: ರಾಧಾಕೃಷ್ಣ ಬೊಳ್ಳೂರು

ಕೇಂದ್ರ ಸರಕಾರ ನಿರಂತರವಾಗಿ ಬೆಲೆ ಏರಿಕೆ ಮಾಡಿದರು. ನಮ್ಮ ರಾಜ್ಯದ ಮಹಿಳೆಯರಿಗೆ ನಮ್ಮ ಸರಕಾರ ಗೃಹಲಕ್ಷ್ಮಿ ಯೋಜನೆ ಜಾರಿಮಾಡಿ ಹಲವಾರು ರೀತಿಯಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ, ನಮ್ಮ ಸರಕಾರ ಜನರಿಗೆ ಸಹಾಯ ಕೊಟ್ಟರೇ ಬಿಜೆಪಿ ಸರಕಾರ ಬೆಲೆ ಏರಿಕೆ ಮಾಡಿ ಜನರಿಂದ ಕಸಿಯುತ್ತಿದೆ. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯನ್ನು ಪಡೆಯಲು ಮೊದಲ ಸಾಲಿನಲ್ಲಿ ಬಿಜೆಪಿ ಕಾರ್ಯಕರ್ತರೇ ಇರುತ್ತಾರೆ!. ಇರಲಿ ಸರಕಾರ ಎಲ್ಲರದ್ದೂ…ಆದರೆ…. ಸುಳ್ಳು ಹೇಳಬೇಡಿ ನಾವು ಗ್ಯಾರಂಟಿ ಯೋಜನೆ ಪಡೆಯುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು ಬಿಜೆಪಿಯನ್ನು ಛೇಡಿಸಿದರು

ಬಿಜೆಪಿ. ಅಲ್ಪಸಂಖ್ಯಾತ, ದಲಿತರ, ಮೇಲೆ ದಮನ ರಾಜಕೀಯ ಮಾಡುತ್ತಿದೆ!!. : ಬೆಲೆ ಏರಿಕೆ ಬಿಜೆಪಿ ಅಜೆಂಡಾ !! : ಕೆ ಎಮ್ ಮುಸ್ತಫಾ

ಬೆಲೆ ಏರಿಕೆ ಬಿಜೆಪಿಯ ಅಜೆಂಡಾ… ಇದರಲ್ಲಿ ಯಾವುದೇ ತಕರಾರು ಇಲ್ಲ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಸೌಜನ್ಯಕ್ಕಾದರೂ!? ಯಾವುದಾದರೂ ವಸ್ತುವಿನ ಬೆಲೆ ಇಳಿದಿದೆಯೇ!? ಆತ್ಮಾವಲೋಕನ ಮಾಡಿ ಅಲ್ಲದೇ ಬಿಜೆಪಿ ಅಲ್ಪಸಂಖ್ಯಾತರನ್ನು ದಲಿತರನ್ನು ದಮನಿಸುವ ಕಾರ್ಯಕ್ಕೆ ಮುಂದಾಗಿದೆ ಇದು ನಾನು ಹೇಳುತಿಲ್ಲ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟ ಸಂಘಟನೆಗಳು ಪರಾಮರ್ಶಿಸಿದೆ ಎಂದು ಕಾಂಗ್ರೆಸ್ ಮುಖಂಡ ಮುಸ್ತಫಾ ಕಿಡಿಕಾರಿದರು

ಬಿಜೆಪಿಯವರ ಆಕ್ರೋಶ ಯಾತ್ರೆ ಅಲ್ಲ!!?. ಅಧಿಕಾರ ಇಲ್ಲದೇ ಚಡಪಡಿಸುತ್ತಿರುವ ನಿರಾಸೆ ಯ.. ಡೋಂಗಿ ಯಾತ್ರೆ… ಇವರ ಆಕ್ರೋಶ ಯಾತ್ರೆ ಯತ್ನಾಳ್ ಮುಂದೆ ಪ್ರದರ್ಶಿಸಲಿ : ಕಾಂಗ್ರೆಸ್ ಯುವ ಮುಖಂಡ ಹಮೀದ್ ಕುತ್ತಮೊಟ್ಟೆ

ಕಾಂಗ್ರೆಸ್ ಯುವ ಮುಖಂಡ ಹಮೀದ್ ಕುತ್ತಮೊಟ್ಟೆ ಮಾತಾನಾಡುತ್ತ ಬಿಜೆಪಿಯವರು ರಾಜ್ಯ ಸರಕಾರದ ವಿರುದ್ಧ ಮಾಡುತ್ತಿರುವ ಆಕ್ರೋಶ ಯಾತ್ರೆ !! ಕುಂಬಳಕಾಯಿ ಕಳ್ಳ ಬೆನ್ನು ತಟ್ಟಿ ನೋಡಿದ ಹಾಗೆ ! ಎಂದರು ನಿಜವಾಗಿಯೂ ಇವರು ಪ್ರತಿಭಟನೆ ಮಾಡುವುದಾದರೆ ನಿರಂತರವಾಗಿ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಮಾಡಲಿ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಕೆಲಸಗಳ ಬಗ್ಗೆ ತಿಳುದು ಕೊಳ್ಳಿ….ಕಾಂಗ್ರೆಸ್ ಯುವ ಜನತೆಯನ್ನು ಸಬಲಿಕರಣ ಗೊಳಿಸುತ್ತದೆ  ಕೇವಲ ಸುಳ್ಯ ತಾಲೂಕಿನಲ್ಲಿ ನಿರೂಧ್ಯೋಗ ಯುವಕರಿಗೆ 56 ಲಕ್ಷಕ್ಕೂ ಹೆಚ್ಚು ರೂಪಾಯಿ ಯುವನಿಧಿ ಮೂಲಕ ನೀಡಿದೆ ….ಬಿಜೆಪಿ ಎನು ? ನೀಡಿದೆ ಎಂದು ನೀವೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದರು!! ಇನ್ನೂ ಬಿಜೆಪಿ ಯವರಿಗೆ ಆಕ್ರೋಶ ಯಾತ್ರೆ ಮಾಡಬೇಕು ಎಂದಿದ್ದರೆ ಯತ್ನಳ್ ವಿರುದ್ಧ ಮಾಡಲಿ ಬಿಜೆಪಿ ಯವರದ್ದು ಅಧಿಕಾರ ಇಲ್ಲದೇ ಚಡಪಡಿಸುತ್ತಿರುವ ನಿರಾಶೆ ಯಾತ್ರೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್‌ ಕಜೆಗದ್ದೆ, ಹಾಗೂ ಉಪಾಧ್ಯಕ್ಷರುಗಳಾದ ರಂಜಿತ್ ರೈ, ಆಶೀಕ್ ಅರಂತೋಡು, ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ಸತ್ಯ ಕುಮಾರ್ ಅಡಿಂಜ,ಎಸ್ ಸಂಶುದ್ದೀನ್ ಅರಂಬೂರು, ಇಕ್ಬಾಲ್ ಎಲಿಮಲೆ, ಸಿದ್ದೀಕ್ ಕೊಕ್ಕೋ, ಕೆ.ಗೋಕುಲ್ ದಾಸ್, ಡೇವಿಡ್ ಧೀರಾ ಕ್ರಾಸ್ತಾ, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ,ಭವಾನಿ ಶಂಕರ್ ಕಲ್ಮಡ್ಕ, ರಾಜು ಪಂಡಿತ್, ಧರ್ಮ ಪಾಲ ಕೊಯಿಂಗಾಜೆ, ಜಿ ಕೆ ಹಮೀದ್, ಸುಮತಿ ಶಕ್ತಿ ವೇಲು, ಎಸ್ ಕೆ ಹನೀಫ್, ಧಿನಕರ ಸಣ್ಣಮಲೆ, ವಿಮಲಾ ಪ್ರಸಾದ್‌,ಎ ಬಿ ಅಬ್ಬಾಸ್ ಅಡ್ಕ, ಮಂಜುನಾಥ ಮಡದತಿಲ, ಭವಾನಿಶಂಕರ ಕಲ್ಮಡ್ಕ, ಧನುಷ್ ಕುಕ್ಕೆಟ್ಟಿ, ಪರಮೇಶ್ವರ ಕೆಂಬಾರೆ, ಪ್ರವೀಣ ಮರುವಂಜ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು. ಕೆ ಗೋಕುಲ್ ದಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

🔥ನಿಮ್ಮೂರಿನ ಸುದ್ದಿಗಳನ್ನು ನಮಗೆ ಕಳುಹಿಸಿ🔥

🪀9353196771
🪀8971810855‬

m

🔥ನಿಮ್ಮೂರಿನ ಸುದ್ದಿಗಳನ್ನು ನಮಗೆ ಕಳುಹಿಸಿ🔥

🪀9353196771
🪀8971810855‬

Related Posts