Featured, ಇತರೆ, ಸ್ಥಳೀಯ

ಕಳಪೆ ಕಾಮಗಾರಿಗೆ ಸ್ಪಷ್ಟ ನಿದರ್ಶನ: ಒಂದೇ ಮಳೆಗೆ ಕೊಚ್ಚಿಹೋದ ಡಾಂಬರು ರಸ್ತೆ

ಕಳಪೆ ಕಾಮಗಾರಿ ತನಿಖೆಗೆ ಒತ್ತಾಯಿಸಿ ಉಸ್ತುವಾರಿ ಸಚಿವರಿಗೆ ಮನವಿ!

ಸುಳ್ಯ

ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ  ಇತ್ತೀಚೆಗೆ ನಿರ್ಮಿಸಲಾದ ಡಾಂಬರು ರಸ್ತೆ, ಒಂದೇ ಮಳೆಗೆ ತಡೆದು ನಿಲ್ಲಲಾರದೆ ಕೊಚ್ಚಿ ಹೋದ ಘಟನೆ ಸಂಭವಿಸಿದೆ.
ಈ ಒಂದು ಘಟನೆ ಕಾಮಗಾರಿಯ  ದುರ್ಬಲತೆ ಮತ್ತು ಅಸಮರ್ಪಕ ನಿರ್ವಹಣೆಯ ಕಳಪೆ ಗುಣಮಟ್ಟದ ನಿರ್ಮಾಣವನ್ನು ಬಹಿರಂಗಪಡಿಸಿದೆ.


ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ರಾಜ್ ಶೆಟ್ಟಿ ಅವರು ಇದನ್ನು “ತರಾತುರಿಯಲ್ಲಿ ಮಾಡಿದ ಕಳಪೆ ಕಾಮಗಾರಿ” ಎಂದು ತೀವ್ರವಾಗಿ ಖಂಡಿಸಿದ್ದಾರೆ.
ಇದರ ಜೊತೆಗೆ, ಮುಂಡಾಜೆ-ಮಠತ್ತಡ್ಕ ರಸ್ತೆಗೆ ಮಣ್ಣು ಕುಸಿತ, ಮಠತ್ತಡ್ಕದ ಶೇಷಪ್ಪ ಅವರ ಮನೆಗೆ ಆಗಿರುವ ಹಾನಿ, ಮುರ್ಕೆತ್ತಿಯಲ್ಲಿ ಮನೆಗಳ ಹಿಂಭಾಗದ ಮಣ್ಣು ಜಾರುವಿಕೆ ಮತ್ತು ಇತರ ಪ್ರಾಕೃತಿಕ ವಿಕೋಪಗಳಿಂದಾಗಿ ತೊಡಕುಗಳು ಉಂಟಾಗಿದೆ.

ಗ್ರಾಮದ ಮೂಲಸೌಕರ್ಯ ನಿರ್ವಹಣೆಯ ಗಂಭೀರ ವೈಫಲ್ಯತೆ ಯನ್ನು ಸೂಚಿಸುತ್ತವೆ, ಈಗಾಗಲೇ ಸಂಭವಿಸಿರುವ ಹಾನಿ ಮತ್ತು ಅಪಾರ ನಷ್ಟಗಳು ಸರ್ಕಾರಿ ಯೋಜನೆಗಳಲ್ಲಿ ಪೂರ್ವತಯಾರಿ, ಗುಣಮಟ್ಟದ ಮೇಲ್ವಿಚಾರಣೆ ಮತ್ತು ಸಮಯೋಚಿತ ಹಸ್ತಕ್ಷೇಪದ ಕೊರತೆ ಯನ್ನು ಎತ್ತಿ ತೋರಿಸುತ್ತವೆ.

ಸೂಕ್ತ ತನಿಖೆ ನಡೆಸಿ  ಕಳಪೆ ಕಾಮಗಾರಿ ನಡೆಸಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಚಿನ್ ರಾಜ್ ಶೆಟ್ಟಿ ಮನವಿ ಮಾಡಿರುವುದಾಗಿ  ತಿಳಿದುಬಂದಿದೆ.

m

 

Related Posts