ಈ ಮೊದಲು ರಾಜ್ಯ ವಕ್ಫ್ ಬೋರ್ಡ್ ಸಮಿತಿಯ ಸದಸ್ಯರಾಗಿದ್ದ ಸಂದರ್ಭದಲ್ಲಿ ಎಸ್ ಸಂಶುದ್ದೀನ್ ಇವರು ಸುಳ್ಯ ತಾಲೂಕಿನ ಹಲವಾರು ಮಸೀದಿ, ಮದರಸ ಗಳಿಗೆ ವಕ್ಫ್ ಬೋರ್ಡ್ ನಿಂದ ಅತ್ಯಂತ ಹೆಚ್ಚು ಅನುದಾನ ತರಿಸುವಲ್ಲಿ, ಯಶಸ್ವಿಯಾಗಿದ್ದಾರೆ ಮಾತ್ರವಲ್ಲ ಅರಂಬೂರು ಸರಕಾರಿ ಶಾಲೆಯ ರಂಗ ಮಂದಿರಕ್ಕೆ ಸರಕಾರದಿಂದ 10 ಲಕ್ಷ ರೂಪಾಯಿ ಅನುದಾನ ತರಿಸಿದ್ದು ಸ್ಮರಿಸಬಹುದು

ಸುಳ್ಯ : ಕರ್ನಾಟಕ ಸರ್ಕಾರದ ವಕ್ಫ್ ಬೋರ್ಡ್ ನಿಂದ ಸುಳ್ಯ ಅಂಬಟೆಡ್ಕ ಇಕ್ರಾ ಮಸೀದಿಗೆ ಮಸೀದಿ ನವೀಕರಣ ಭಾಗವಾಗಿ ರೂ 5 ಲಕ್ಷ ರೂಪಾಯಿ ಮಂಜೂರು ಆಗಿ ಬಂದಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಸಮಿತಿಯ ಮಾಜಿ ಸದಸ್ಯರಾದ ಎಸ್ ಸಂಶುದ್ದೀನ್ ಇವಾರ್ತೆ ಗೆ ತಿಳಿಸಿರುತ್ತಾರೆ. ಸುಳ್ಯಕ್ಕೆ ರಾಜ್ಯ ವಕ್ಫ್ ಬೋರ್ಡ್ ನಿಂದ 2025 ಸಾಲಿನ ಮೊದಲ ಅನುದಾನ ಎಂದು ಅವರು ಹೇಳಿದ್ದಾರೆ




m

