Featured, ಅಂಕಣ, ಸ್ಥಳೀಯ

ತಬ್ಸೀರ್ ಹುದವಿ (23) ಬಜ್ಪೆ, ಮಂಗಳೂರು ನಿಧನ

ಬಜ್ಪೆ ಜುಮಾ ಮಸೀದಿಯ ಜಮಾಅತ್‍ಗೆ ಸೇರಿರುವ ಹಾಗೂ ಮೂಲತಃ ಮಿತ್ತೂರು ನಿವಾಸಿಯಾಗಿದ್ದ ಅಬ್ದುಲ್ ಹಮೀದ್ ಮಿತ್ತೂರ ರವರ ಪುತ್ರ ಬಹುಃ ತಬ್ಸೀರ್ ಹುದವಿ (ವಯಸ್ಸು 23) ಅವರು ಮೇದುಳಿಗೆ ತೀವ್ರ ಜ್ವರ ಬಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ, ಅವರು ಇಂದು (೨೦೨೫ ಜೂನ್ ೨ ) ನಿಧನರಾಗಿದ್ದಾರೆ.

ಅವರು ಕೇರಳದ ಚೆಮ್ಮಾಡ್ ದಾರುಲ್ ಹುದಾ ಪಿ.ಜಿ.ಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿ ಧಾರ್ಮಿಕ ಶಿಕ್ಷಣ ಪಡೆದುಕೊಳ್ಳುತ್ತಿದ್ದು, ಒಟ್ಟು ಹತ್ತು ವರ್ಷಗಳ ಉನ್ನತ ಮೌಲ್ಯಾಧಾರಿತ ಅಧ್ಯಯನವನ್ನು ಪೂರ್ಣಗೊಳಿಸಿದ್ದರು.

ಅವರ ಅಕಾಲಿಕ ನಿಧನದಿಂದ ಕುಟುಂಬ, ಬಂಧುಮಿತ್ರರು ಹಾಗೂ ಶಿಕ್ಷಣ ಸಂಸ್ಥೆಯು ಆಘಾತಕ್ಕೆ ಒಳಗಾಗಿದೆ.

m

Related Posts