Featured, ಅಂಕಣ, ಇತರೆ, ಸ್ಥಳೀಯ

ಸುನ್ನೀ ಸಂಘಟನಾ ಸದಸ್ಯತನ ಪಡೆದ ಕಾರ್ಯಕರ್ತರು ಇಹಪರ ವಿಜಯಿಗಳು : ಜಿ ಎಂ ಎಂ ಕಾಮಿಲ್ ಸಖಾಫಿ

ಮಾಣಿ : ಸುನ್ನೀ ಸಂಘಟನೆಗಳ ಕಾರ್ಯಕರ್ತರಾಗಲು ಸದಸ್ಯತನ ಪಡೆದವರು ಸಾಧಾರಣ ವ್ಯಕ್ತಿಗಳಂತೆ ಅಲ್ಲ,ಸಯ್ಯಿದ್ ಸಾದಾತುಗಳ ಉಲಮಾಗಳ ಸದಾ ದುಆ ಪಡೆಯುವ ಭಾಗ್ಯವಂತರು ಎಂದು ಕರ್ನಾಟಕ ಮುಸ್ಲಿಂ ಜಮಾ‌ಅತ್ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಜಿಎಂಎಂ ಕಾಮಿಲ್ ಸಖಾಫಿ ಹೇಳಿದರು.ಅವರು ಕರ್ನಾಟಕ ಮುಸ್ಲಿಂ ಜಮಾ‌ಅತ್, ಎಸ್‌ವೈ‌ಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಅಬ್ದುಲ್ ಕರೀಂ ನೆಲ್ಲಿ ಯವರ ನಿವಾಸದಲ್ಲಿ ನಡೆದ ಮಹ್‌‌ಳರತುಲ್ ಬದ್ರಿಯಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿದರು,ಕೆಸಿಎಫ್ ರಿಯಾದ್ ಝೋನ್ ದಾಯಿ ಮುಸ್ತಫಾ ಸ‌ಅದಿ ಸೂರಿಕುಮೇರು ಕಾರ್ಯಕ್ರಮ ಉದ್ಘಾಟಿಸಿದರು, ಕರ್ನಾಟಕ ಮುಸ್ಲಿಂ ಜಮಾ‌ಅತ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ದಾವೂದ್ ಕಲ್ಲಡ್ಕ,ಅಝೀಂ ನೆಲ್ಲಿ,ನಿಝಾಂ ಸ‌ಅದಿ ಸೂರಿಕುಮೇರು, ಅಬ್ದುಲ್ ಲತೀಫ್ ಕಲ್ಲಡ್ಕ,ಅಬ್ದುಲ್ ರಝಾಕ್ ಫಲಾಹ್ ಕಲ್ಲಡ್ಕ, ನಝೀರ್ ಅಮ್ಜದಿ ಮಾಣಿ,ಯೂಸುಫ್ ಹಾಜಿ ಸೂರಿಕುಮೇರು, ಹಾರಿಸ್ ಯೂಸುಫ್, ಹಂಝ ಕಾಯರಡ್ಕ, ಇಬ್ರಾಹಿಂ ಮಾಣಿ,ಎಸ್ ಕೆ ಅಶ್ರಫ್ ಗಡಿಯಾರ, ಹಸೈನ್ ಟೈಲರ್ ಸೂರಿಕುಮೇರು,ಹಾಫಿಳ್ ಮುರ್ಶಿದ್,ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಸಲೀಂ ಮಾಣಿ ಸ್ವಾಗತಿಸಿ,ಧನ್ಯವಾದಗೈದರು.

m

Related Posts