ಕಾಸರಗೋಡು : ಹೆರಿಗೆ ಸಂದರ್ಭದಲ್ಲಿ ಕಾಣಿಸಿಕೊಂಡ ಆರೋಗ್ಯ ಏರುಪೇರು ಸಮಸ್ಯೆಯಲ್ಲಿ ತುಂಬು ಗರ್ಭಿಣಿ ಯುವತಿ ಯೊಬ್ಬಳು ಮಗುವಿಗೆ ಜನ್ಮ ನೀಡಿ ಮೃತ್ಯು ಹೊಂದಿದ ಕರುಣಾಜನಕ ಘಟನೆ ವರದಿಯಾಗಿದೆ
ಮೂಲತ ಸುಳ್ಯ ಕನಕ ಮಜಲು ನಿವಾಸಿ ಮೂಸಾನ್ ಟಿ ಎಮ್ ಇವರ ಪುತ್ರಿ ಗಾಳಿಮುಖ ಕರ್ನೂರು ನಿವಾಸಿ ಬಶೀರ್ ಇವರ ಪತ್ನಿ ಸೌಜಾನ (26) ಇವರು ಹೆರಿಗೆ ಸಂಧರ್ಬದಲ್ಲಿ ಕಾಣಿಸಿಕೊಂಡ ಆರೋಗ್ಯ ಏರುಪೇರು ಸಮಸ್ಯೆಯಲ್ಲಿ ಮಗುವಿಗೆ ಜನ್ಮ ನೀಡಿ ಮೃತ್ಯು ಹೊಂದಿದ ಯುವತಿ
ಸೌಜಾನ (26) ಇವರನ್ನು ಹೆರಿಗೆಗಾಗಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಹೆರಿಗೆ ಸಂದರ್ಭದಲ್ಲಿ ಗಂಡು ಮಗುವಿಗೆ ಜನ್ಮ ವಿತ್ತ ಸೌಜಾನಳಿಗೆ ನಂತರ ಆರೋಗ್ಯದಲ್ಲಿ ಏರುಪೇರು ಸಂಭವಿಸಿ ಸಮಸ್ಯೆ ಉಲ್ಬಣಗೊಂಡಾಗ ಕೂಡಲೇ ಮಂಗಳೂರು ಆಸ್ಪತ್ರೆಗೆ ವರ್ಗಾವಣೆ ಮಾಡಿ ಚಿಕಿತ್ಸೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿ ಆಗದೆ ಸೌಜಾನ (26) ಮೃತ್ಯು ಹೊಂದಿದ್ದಾಳೆ ಎಂದು ತಿಳಿದು ಬಂದಿದೆ.
ಸೌಜಾನ ಇವರ ಅಕಾಲಿಕ ಮೃತ್ಯುವಿನಿಂದ ಎರಡು ಕುಟುಂಬ ಮತ್ತು ಊರಿಗೆ ಊರೇ ಶೋಕಸಾಗರದಲ್ಲಿ ಮುಳುಗಿದೆ ಸೌಜಾನ ಇವರು ಪತಿ ಬಶೀರ್ ಒಂದು ಹೆಣ್ಣು ಒಂದು ಗಂಡು ಮಗು ತಂದೆ ಮೂಸಾನ್, ತಾಯಿ ನೆಬಿಸಾ, ಸಹೋದರರಾದ ಅಶ್ರಫ್, ಶಿಹಾಬ್,ನವಾಸ್ ಮತ್ತು ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ




m
