ನಿಂತಿಕ್ಕಲ್ ಎಣ್ಮೂರು ಹೈಸ್ಕೂಲ್ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳು ಕಸ ಕಡ್ಡಿಗಳಿಂದ ಮುಚ್ಚಿ ಹೋಗಿತ್ತು, ಇದರಿಂದ ಮಳೆ ನೀರು ರಸ್ತೆಯಲ್ಲಿಯೇ ಉಳಿದುಕೊಂಡು ಪಾದಚಾರಿಗಳಿಗೆ, ವಿಧ್ಯಾರ್ಥಿಗಳಿಗೆ ಇದೇ ರಸ್ತೆಯಲ್ಲಿ ಸಂಚರಿಸುವುದು ಅತ್ಯಂತ ಪ್ರಯಾಸಕರ ಮತ್ತು ಸಾಹಸಮಯವಾಗಿರುತ್ತಿತ್ತು, ಇದನ್ನು ಮನಗಂಡು ಮಳೆ ನೀರು ಸರಾಗವಾಗಿ ರಸ್ತೆಯಿಂದ ಚರಂಡಿಗೆ ಹರಿಯುವ ವ್ಯವಸ್ಥೆಯನ್ನು ಉಬೈಸ್ ಕರಿಂಬಿಲ, ರಝಾಕ್ ಗುತ್ತಿಗೆ ನಿಂತಿಕಲ್, ಹಾಗೂ ಅಶ್ರಫ್ ಗುತ್ತಿಗೆ ಇವರು ನಿರ್ವಹಿಸಿದ್ದಾರೆ.
ರಸ್ತೆಗಳ ಅಂಚಿನಲ್ಲಿರುವ ಕಸದ ರಾಶಿಗಳು, ತಡೆದು ನಿಂತ ನೀರು ಮತ್ತು ಕೊಳಕು ಪ್ರದೇಶಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಸ್ಥಳೀಯರು ಪ್ರಶಂಸಿದ್ದಾರೆ.




m
