Featured, ಇತರೆ, ಸ್ಥಳೀಯ

ಕಡಬ ಪಟ್ಟಣ ಪಂಚಾಯತ್ ಚುನಾವಣೆ : 10 ವಾರ್ಡ್ ಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ ಬಿಜೆಪಿ.!

ಪನ್ಯ ವಾಡ್೯ ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕಿದ ಬಿಜೆಪಿ !?

ಕಡಬ : ಆಗಸ್ಟ್ 17 ರಂದು ನಡೆಯುವ ಪಟ್ಟಣ ಪಂಚಾಯತ್ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಯಲ್ಲಿ ತೊಡಗಿಸಿಕೊಂಡಿದ್ದು ಇದೀಗ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಗೊಳಿಸಿದೆ. ಇಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ 10 ವಾಡ್೯ಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ

10 ವಾಡ್೯ಗಳ ಅಭ್ಯರ್ಥಿಗಳ ವಿವರ

ವಾರ್ಡ್ 2 ಕೋಡಿಬೈಲು ಇಲ್ಲಿಗೆ ಮಿಸಲಾದ ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ ಕುಸುಮ ಅಂಗಡಿಮನೆ, ವಾರ್ಡ್ 3, ಪನ್ಯ ಸಾಮಾನ್ಯ ಸ್ಥಾನಕ್ಕೆ ಆದಂ ಕುಂಡೋಳಿ,ವಾರ್ಡ್ 4 ಬೆದ್ರಾಜೆ ಸಾಮಾನ್ಯ ಸ್ಥಾನಕ್ಕೆ ಅಶೋಕ್ ಪಿ, ಮಾಲೇಶ್ವರ 5. ವಾರ್ಡಿಗೆ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಪ್ರಕಾಶ್ ಎನ್.ಕೆ, ಕಡಬ 6ನೇ ವಾರ್ಡಿನ ಮಹಿಳೆ ಸ್ಥಾನಕ್ಕೆ ಪ್ರೇಮ, ಪಿಜಕಳ 8ನೇ ವಾರ್ಡಿನ ಸಾಮಾನ್ಯ ಸ್ಥಾನಕ್ಕೆ ದಯಾನಂದ ಪಿ. ಮೂರಾಜೆ 9ನೇ ವಾರ್ಡಿನ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕುಂಞಣ್ಣ ಕುದ್ರಡ್ಕ, ದೊಡ್ಡಕೊಪ್ಪ 10ನೇ ವಾರ್ಡಿನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಗುಣವತಿ ರಘುರಾಮ, ಕೋಡಿಂಬಾಳ 11ನೇ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಅಕ್ಷತಾ, ಪುಳಿಕುಕ್ಕು 13ನೇ ವಾರ್ಡ್ ನ ಪರಿಶಿಷ್ಠ ಪಂಗಡ ಸ್ಥಾನಕ್ಕೆ ಸದಾನಂದ ನಾಯ್ಕ ಅವರನ್ನು ಅಭ್ಯರ್ಥಿಗಳಾಗಿ ಪೋಷಣೆ ಮಾಡಲಾಗಿದೆ. ಇನ್ನು ಉಳಿದ 3 ವಾರ್ಡ ಗಳ ಅಭ್ಯರ್ಥಿಗಳ ಘೋಷಣೆ ಇನ್ನಷ್ಠೆ ಪ್ರಕಟವಾಗಬೇಕಿದೆ.

 

ಈ ಬಾರಿ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅಮ್ ಅದ್ಮಿ ಪಕ್ಷ ಸ್ಪರ್ಧಿಸುವುದು ಕಡಬ ರಾಜಕೀಯದಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ ಅದೇ ರೀತಿ ಇತ್ತ ಕಡಬ ಬಿಜೆಪಿಯ ನಡೆಯಲ್ಲೂ ಕೂಡಾ ಕುತೂಹಲಕಾರಿ ಬೆಳವಣಿಗೆಗೆ ನಡೆದಿದೆ. ರಾಜಕೀಯ ವಾಗಿ ಸದಾ ಮುಸ್ಲಿಂ ಸಮುದಾಯವನ್ನು ವಿರೋಧಿಸಿ ಕೊಂಡು ಬರುತ್ತಿರುವ ಬಿಜೆಪಿ. ಪನ್ಯ ವಾಡ್೯ ಗೆ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕಿದೆ.!?
ಕಡಬ ಪನ್ಯ ಮೂರನೇ ವಾಡ್೯ನ ಸಾಮಾನ್ಯ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಪಕ್ಷ ಕಣಕ್ಕೆ ಇಳಿಸಿದೆ ಆದಂ ಕುಂಡೋಳಿ ಈ ವಾಡ್೯ ನಲ್ಲಿ ಬಿಜೆಪಿಯಿಂದ  ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಇದಕ್ಕೆ ಕಾರಣವೂ ಇದೆ.! ಈ ವಾಡ್೯ ನಲ್ಲಿ ಮುಸ್ಲಿಂ ಮತದಾರರು ಅಧಿಕವಾಗಿದ್ದರೂ ಆದಂ ರವರು ಆ ವಾಡ್೯ನಲ್ಲಿ ವರ್ಚಸ್ಸು ಗಿಟ್ಟಿಸಿಕೊಂಡಿದ್ದಾರೆ. ಅವರು ಆ ಭಾಗದಲ್ಲಿ ರಾಜಕೀಯ ವಾಗಿ ಗುರುತಿಸಿ  ಕೊಳ್ಳುವುದಕ್ಕಿಂತ ಹೆಚ್ಚಾಗಿ ಸಮಾಜ ಸೇವೆಯಲ್ಲಿ ಗುರುತಿಸಿ ಹೆಚ್ಚು ಜನಪ್ರಿಯ ರಾಗಿದ್ದಾರೆ ಇವರು ಈ ಹಿಂದೆ 6 ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ ಮೂಲತಃ ಇವರು ಸಹ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿ ಕೊಂಡವರು ನಾಲ್ಕು ಸಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದರು. ಬಿಜೆಪಿ ಯಲ್ಲಿ ಎರಡು ಸಲ ಚುನಾಯಿತರಾಗಿದ್ದಾರೆ ಇನ್ನೂ ಮೂರನೇ ಬಾರಿಗೆ ಸ್ಪರ್ಧಿಸಲು ಮತ್ತೊಮ್ಮೆ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರಿಗೆ ಕಠಿಣ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೇ.. ಇದೆ ವಾಡ್೯ ನಿಂದ ಹೊಸದಾಗಿ ಎಸ್ ಡಿ ಪಿ ಐ, ಆಮ್ ಅದ್ಮಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿದುಬಂದಿದೆ, ಅದರೂ ತನ್ನ ಗೆಲುವು ನಿಶ್ಚಿತ ಎಂದು ತುಂಬು ಆತ್ಮ ವಿಶ್ವಾಸದಲ್ಲಿ ಪ್ರಚಾರ ಕಾರ್ಯಕ್ಕೆ ಅದಂ ತೊಡಗಿದ್ದಾರೆ. ಅಂತೂ ಈ ಸಲದ ಕಡಬ ಪಟ್ಟಣ ಪಂಚಾಯತ್ ಚುನಾವಣೆ ಹಲವಾರು ವಿಶೇಷತೆಗಳೊಂದಿಗೆ ಕುತೂಹಲಕಾರಿ ಫಲಿತಾಂಶ ಹೊರಬರಲಿದೆ

m

 

Related Posts