ಸುಳ್ಯ : ಕಾಲ ಕಳೆದರೂ ಸಂಬಂಧಗಳ ಬಾಂಧವ್ಯ ವನ್ನು ಒಗ್ಗೂಡಿಸುತ್ತ ಹಿರಿಯರ ಮಾರ್ಗದರ್ಶನ ಕಿರಿಯರ ನವಚೇತನವನ್ನು ಒಳಗೊಂಡ ಕುಟುಂಬ ಶಕ್ತಿಯಾದ ಮಹಮ್ಮದ್ ಉಗ್ರಾಣಿ ಫ್ಯಾಮಿಲಿ ಅಡ್ಮಿನ್ ಗ್ರೂಪ್ ಬಳಗದ ಸಭೆ ಹಾಗೂ ಬಕ್ರೀದ್ ಹಬ್ಬದ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ರಹೀಮ್ ಜನತಾ ಇವರ ನಿವಾಸದಲ್ಲಿ ಜರಗಿತು
ಈ ಸಂದರ್ಭದಲ್ಲಿ ಕುಟುಂಬ ಬಳಗದ ಮುಂದಿನ ಕಾರ್ಯಾ ಚಟುವಟಿಕೆ ಬಗ್ಗೆ ಡಾ| ಉಮ್ಮರ್ ಬೀಜದಕಟ್ಟೆ, ಪ್ರಸ್ತಾಪಿಸಿದರು. ಮುಂಬರುವ ಪ್ರವಾದಿ ಮುಹಮ್ಮದ್ (ಸ ಅ) ಜನ್ಮದಿನಾಚರಣೆ ಅಂಗವಾಗಿ ಕುಟುಂಬ ಬಳಗದ ವತಿಯಿಂದ ಪ್ರವಾದಿ ಕಿರ್ತನೆ ಅಲಾಪನೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಮತ್ತು ಅದರೊಂದಿಗೆ ಮಕ್ಕಳಿಗೆ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು ಸಭೆಯಲ್ಲಿ ಕುಟುಂಬದ ಹಿರಿಯರು ಹಾಗೂ ಪ್ರಮುಖರಾದ ಉಮ್ಮರ್ ಕಟ್ಟೆಕ್ಕಾರ್, ಹಮೀದ್ ಹಾಜಿ ಜನತಾ, ಮಜೀದ್ ಹಾಜಿ ಜನತಾ, ಡಾ: ಉಮ್ಮರ್ ಬೀಜದಕಟ್ಟೆ, ಶುಕೂರ್ ಕೆ ಯಚ್, ಅಜಿಜ್ ಕೆ ಯಚ್, ಅಬ್ದುಲ್ ಕಲಾಂ ಬಿಜಕೊಚ್ಚಿ ಮಜೀದ್ ಕೆಬಿ, ರಿಯಾಜ್ ಕಟ್ಟೆಕ್ಕಾರ್, ನಝಿರ್ ಸುಪ್ರೀಂ ಜುನೈದ್ ಕಟ್ಟೆಕ್ಕಾರ್, ಅಲ್ಫಾಜ್ ಬೀಜಕೊಚ್ಚಿ, ಅಬ್ದುಲ್ ಗಫ್ಫಾರ್, ಹಾಗು ಮತ್ತಿತರರು ಉಪಸ್ಥಿತರಿದ್ದರು
ವರದಿ: ಕೆ ಅಬ್ದುಲ್ ಗಫ್ಫಾರ್




m

