ಅಯಲ್ ವಾಸಿ ಬಂಧಂ ಬೋರುಗುಡ್ಡೆ, ಸುಳ್ಯ ವತಿಯಿಂದ, ಬೋರುಗುಡ್ಡೆಯಲ್ಲಿ 79ನೇ ಸ್ವಾತಂತ್ರ್ಯವನ್ನು ತಿರಂಗ ಧ್ವಜಾರೋಹಣ ಮೂಲಕ ಆಚರಿಸಲಾಯಿತು.
ಧ್ವಜಾರೋಹಣ ವನ್ನು ಸಂಸ್ಥೆಯ ಅಧ್ಯಕ್ಷ ಸನ್ಮಾನ್ಯ ಲತೀಫ್ ಹರ್ಲಡ್ಕರವರು ನೆರವೇರಿಸಿದರು.
“ಬ್ರಿಟಿಷರ ಧಾರ್ಷ್ಟ್ಯದಿಂದ ದೇಶವನ್ನು ವಿಮೋಚಿಸಲು ಅದೆಷ್ಟೋ ಜನರು ಪ್ರಾಣ ತ್ಯಾಗ ಮಾಡಿದ್ದಾರೆ, ಇವರಲ್ಲಿ ಮುಸ್ಲಿಮರ ಅತ್ಯಧಿಕವಾಗಿದೆ ಎಂಬುದನ್ನು ಈ ದೇಶ ಮರೆಯುವಂತಿಲ್ಲ, ದೇಶದಲ್ಲಿ ಕ್ಷೋಭೆಯುಂಟು ಮಾಡಲು ಪ್ರಯತ್ನಿಸುವವರ ಬಗ್ಗೆ ಇಂದಿನ ಪೀಳಿಗೆ ಜಾಗ್ರತರಾಗಬೇಕು, ಜಾತಿ ಧರ್ಮಗಳನ್ನು ಮೀರಿದ ಒಗ್ಗಟ್ಟಿನ ಸೌಹಾರ್ಧ ಜೀವನಕ್ಕಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ತಗೋಬೇಕು” ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಬೋರುಗುಡ್ಡೆ ವಾರ್ಡ್ ಸದಸ್ಯ ಕೆ ಎಸ್ ಉಮ್ಮರ್ ಸಂದೇಶ ಭಾಷಣದಲ್ಲಿ ಹೇಳಿದರು.

ಈ ಸಂಧರ್ಭದಲ್ಲಿ ಅಯಲ್ ವಾಸಿ ಬಂಧಂ ಇಕ್ಬಾಲ್ ಗುಜರಿ, ಅಬ್ದುಲ್ ಖಾದರ್ ಉಂಬು, ಅಬೂಬಕ್ಕರ್ ಪಿಕ್ & ಪೇ, ಅಝೀಝ್ ಮಸೂದ್ ಕುಂಬ್ಳೆ ಇಜಾಸ್ ಮೊಹಮ್ಮದ್ ಸಿ ಎ, ಬಶೀರ್ ವೆಜ್, ಉಬೈಸ್, ಅಹಮದ್ ಶಿಲ್ಪ, ಅಬೂಬಕ್ಕರ್ ಎಸ್ ಫಿ, ಅಶ್ರಫ್ ಸ್ಟೈಲ್ ಪಾರ್ಕ್, ಶಾಮಿಲ್ ಕಜಾಖಿಸ್ತಾನ್, ಬಷೀರ್ ಬೋರುಗುಡ್ಡೆ ಮುಂತಾದವರು ಉಪಸ್ಥಿತರಿದ್ದರು
ಆರಂಭದಲ್ಲಿ ದೇಶದ ಒಳಿತಿಗಾಗಿ ದುಃಆ ವನ್ನು ಮಾಡಿದರು, ಕೊನೇಯಲ್ಲಿ ಸಿಹಿ ವಿತರಿಸಲಾಯಿತು.ಎನ್. ಎ. ಅಬ್ದುಲ್ಲಾ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಆರಿಸ್ ಸಿ. ಎ. ವಂಧಿಸಿದರು.





m
