ಅಮಂಗಲ್, ರಂಗಾರೆಡ್ಡಿ ಜಿಲ್ಲೆ (ತೆಲಂಗಾಣ), ಆಗಸ್ಟ್ 20
ಅಮಂಗಲ್ ಪುರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಹೊರೆ ಆಗುತ್ತಿರುವುದು ಎಂಬ ಆರೋಪದ ಮಧ್ಯೆ, ರಾಜಸ್ಥಾನದಿಂದ ಬಂದು ವ್ಯಾಪಾರ ನಡೆಸುತ್ತಿರುವ ಮಾರ್ವಾಡಿ ಸಮುದಾಯದ ವಿರುದ್ಧ ‘ಗೋ ಬ್ಯಾಕ್ ಮಾರ್ವಾಡೀಸ್’ ಎಂಬ ಆಂದೋಲನ ಭುಗಿಲೆದ್ದಿದೆ.
ಹೈದರಾಬಾದ್‌ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಮತ್ತು 19ಸಾವಿರ ಜನಸಂಖ್ಯೆ ಹೊಂದಿರುವ ಅಮಂಗಲ್ ಪುರಸಭೆಯಲ್ಲಿ ಅತಿ ಹೆಚ್ಚು ಮಾರ್ವಾಡಿಗಳು ವ್ಯಾಪಾರ ಆರಂಭಿಸಿದ್ದಾರೆ. ರಂಗಾರೆಡ್ಡಿ ಜಿಲ್ಲೆಯು ಆರ್ಥಿಕತೆಗೆ ಭಾರಿ ಕೊಡುಗೆ ನೀಡುತ್ತಿರುವ ಹಾಗೂ 9.47 ಲಕ್ಷ ರೂ.ತಲಾ ಆದಾಯ ಹೊಂದಿರುವ ಜಿಲ್ಲೆಯಾಗಿದೆ. ಅಲ್ಲದೇ ಹೈದರಾಬಾದ್‌ಗಿಂತ ಸುಮಾರು ಎರಡು ಪಟ್ಟು ಹೆಚ್ಚು ಆದಾಯ ತರುತ್ತಿದೆ. ಆದರೆ, ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲೆಯಲ್ಲಿ ಮಾರ್ವಾಡಿಗಳು ಎಲ್ಲಾ ರೀತಿಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಸ್ಥಳೀಯರ ವ್ಯಾಪಾರಕ್ಕೆ ತೊಂದರೆಯಾಗಿದೆ ಎಂದು ಅಮಂಗಲ್ ನಿವಾಸಿಗಳು ಆರೋಪಿಸಿದ್ದಾರೆ.
ಜವಳಿ, ವಜ್ರ, ಚಿನ್ನ, ಸಗಟು, ಚಿಲ್ಲರೆ ಮತ್ತು ಸ್ಥಳೀಯ ಕಿರಾಣಿ ಅಂಗಡಿಗಳಿಗೂ ಮಾರ್ವಾಡಿಗಳು ಪ್ರವೇಶ ಮಾಡಿದ್ದಾರೆ. ಇದರಿಂದ ಸ್ಥಳೀಯರು ಬವಣೆ ಅನುಭವಿಸಬೇಕಾಗಿದೆ. ಇದರ ವಿರುದ್ಧ ‘ಮಾರ್ವಾಡಿಸ್ ಗೋ ಬ್ಯಾಕ್’ ಎಂಬ ಘೋಷಣೆಯೊಂದಿಗೆ ಮುಷ್ಕರ ಆರಂಭಿಸಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.




m

