Featured, ಅಂಕಣ, ಸ್ಥಳೀಯ

ಪವಿತ್ರ ಸ್ಥಳಗಳ ಸಂದರ್ಶನ ಯಾತ್ರೆ (ಝಿಯಾರತ್) ಕೈಗೊಳ್ಳುತ್ತಿರುವ ಸಂಶುದ್ದೀನ್ [KB] ಯವರಿಗೆ ಅನ್ಸಾರ್ ವತಿಯಿಂದ ಬೀಳ್ಕೊಡುಗೆ

ಸುಳ್ಯ : ಇಸ್ಲಾಮಿಕ್ ಪವಿತ್ರ ಯಾತ್ರಾ ಸ್ಥಳಗಳಿಗೆ ಸಂದರ್ಶನ (ಝಿಯಾರತ್) ಯಾತ್ರೆ ಕೈಗೊಳ್ಳುತ್ತಿರುವ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್[ರಿ] ಗಾಂಧಿನಗರ ಸಂಸ್ಥೆಯ ಕಾರ್ಯದರ್ಶಿ ಸಂಶುದ್ದೀನ್ [KB] ಯವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು ಅನ್ಸಾರ್ ಅಧ್ಯಕ್ಷ ಅಬ್ಬುಲ್ಲಾ ಕಟ್ಟೆಕ್ಕಾರ್,ಅನ್ಸಾರಿಯಾ ಅಧ್ಯಕ್ಷ ಮಜೀದ್ ಜನಾತ ಇವರು ) ಶಾಲು ಹೊದಿಸಿ ಸ್ಮರಣಿಕೆ ನೀಡಿ ಯಾತ್ರೆಗೆ ಶುಭ ಹಾರೈಸಿ ಬಿಳ್ಕೊಟ್ಟರು ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು. ಸಂಶುದ್ದೀನ್ ಇವರು ಪವಿತ್ರ ಸ್ಥಳವಾದ ಬಗ್ದಾದ್ ಹಾಗೂ ಓಮಾನ್ ದೇಶಗಳಿಗೆ ತೆರಳಿದ್ದಾರೆ.

m

Related Posts