ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ–ﷺರವರ 1500ನೇ ಜನ್ಮ ದಿನಾಚರಣೆ ಅಂಗವಾಗಿ ಗೂನಡ್ಕ ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಬಿ ಜೆ ಎಂ ಗೂನಡ್ಕ ಇದರ ವತಿಯಿಂದ 3 ದಿನಗಳ ಕಾಲ ನಡೆದ ಬೃಹತ್ ಮಿಲಾದ್ ಸಮಾವೇಶವು ಸೆ 7 ರ, ಸರ್ವ ದರ್ಮೀಯರ ಸ್ನೇಹ ಸಮಿಲನ ಕಾರ್ಯಕ್ರಮದೊಂದಿಗೆ ಸಮಾಪನ ಗೊಂಡಿತ್ತು.

ಅಪರಾಹ್ನ 3 ಗಂಟೆಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸ್ಥಳೀಯ ಖತೀಬರಾದ ಬಹ ಅಬೂಬಕ್ಕರ್ ಸಿದ್ದೀಖ್ ಸಖಾಪಿ ಅಲ್ ಹರ್ಷದಿಯವರ ಪ್ರಾರ್ಥನೆ ಯೊಂದಿಗೆ ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು.

ಶ್ರೀ ಶಿರಾಡಿ ದೇವಸ್ತಾನದ ಆಡಳಿತ ಮಂಡಳಿ ಅದ್ಯಕ್ಷರಾದ ಶ್ರೀ ಸೋಮಶೇಖರ್ ಕೊಯಿಂಗಾಜೆ ಯವರು ಉದ್ಘಾಟಿಸಿದರು, ಮುಖ್ಯ ಪ್ರಭಾಷಕರಾಗಿ ಸಭಾಹ್ ಹಿಮಮಿ ಬೀಜ ಕೊಚ್ಚಿ, ಸುಳ್ಯ, ಮತ್ತು ಕೆ ಪಿ ಜಾನಿ ಯವರು ಮಾತನಾಡಿ ಪ್ರಸಕ್ತ ಸನ್ನಿವೇಶದಲ್ಲಿ ಮತೀಯ ಸಾಮರಸ್ಯಗಳಿಂದ, ಸೌಹಾರ್ದತೆಗಳಿಂದ ಪರಸ್ಪರ ಅರಿತು ಬಾಳಿದಲ್ಲಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲಸುತ್ತದೆ ಎಂದರು.

ಮುಖ್ಯ ಅಥಿತಿ ಗಳಾದ ಸಂತೋಷ್ ಕುತ್ತಮೊಟ್ಟೆ, ಡಾ: ಉಮ್ಮರ್ ಬೀಜದ ಕಟ್ಟೆ, ಡಿ ವಿ ಸತೀಶ,ಎಂ ವೆಂಕಪ್ಪ ಗೌಡ ಸುಳ್ಯ,ಹಮೀದ್ ಕುತ್ತಮೊಟ್ಟೆ ಉಮೇಶ್ ಚಂದ್ರ ಕೆ ವಿ,ಇಬ್ರಾಹಿಂ ಗೂನಡ್ಕ, ಅಶೋಕ್ ಎಡಮಲೆ,ಕೆ ಪಿ ಜಗದೀಶ್, ಹಾಜಿ ಇಬ್ರಾಹಿಂ ಗೂನಡ್ಕ.

ನವೀನ್ ಗೌಡ ಇರ್ನೆ ಬೈಲೆ, ಪೈಝಲ್ ಕಟ್ಟೆಕ್ಕಾರ್ಸ್ ಹಾಜಿ ಪಿ ಎ ಉಮ್ಮರ್ ಗೂನಡ್ಕ,ರವಿ ಪ್ರಕಾಶ್ ಸುಳ್ಯ, ರಾಮ ಚಂದ್ರ ಕಲ್ಲಗೆದ್ದೆ,ಗಣಪತಿ ಭಟ್ ,ಶಂಸುದ್ದೀನ್ ಸಾಲ್ಮರ,ಯು ಬಿ ಚಕ್ರಪಾಣಿ , ಕೆ ಎಸ್ ಉಮ್ಮರ್ ಸುಳ್ಯ ವಸಂತ ಪೆಲ್ತಡ್ಕ ಜ್ಞಾನಶೀಲನ್ ( ರಾಜು ನೆಲ್ಲಿಕುಮೇರಿ) ಸೇರಿದಂತೆ ಅನೇಕ ಸಾಮಾಜಿಕ ದಾರ್ಮಿಕ ಮುಖಂಡರುಗಳು ಮತ್ತು ಜಾತಿ ಮತ ಬೇಧವಿಲ್ಲದೆ ನಾಡಿನ ಬಹುತೇಕ ಸಹೋದರ ಸಹೋದರಿಯರು ಭಾಗವಹಿಸಿದರು

ಸವಾದ್ ಗೂನಡ್ಕ ರವರು ಸ್ವಾಗತಿಸಿ ಕಾರ್ಯ ಕ್ರಮವನ್ನು ನಿರುಪಿಸಿದರುಪಿ ಕೆ ಅಬೂಶಾಲಿಯವರು ವಂದಿಸಿದರು.




m
