ಮತಗಳ್ಳತನ ವಿರೋಧಿಸಿ ಕ್ರಾಂತಿಕಾರಿ ಹೆಜ್ಜೆ
ಸುಳ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಚೇತನ್ ಕಜೆಗದ್ದೆ ಇವರ ನೇತೃತ್ವದಲ್ಲಿ ಬೃಹತ್ ಪಂಜಿನ ಮೆರವಣಿಗೆ

ಸುಳ್ಯ, ಸೆಪ್ಟೆಂಬರ್ 21: ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮತಗಳ್ಳತನದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿಯವರಿಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಸಂಜೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು

ಪ್ರಧಾನ ಭಾಷಣಗಾರರಾಗಿ ಆಗಮಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಎಂ ಜಿ ಹೆಗಡೆ ಮಾತನಾಡಿ ಮತಗಳ್ಳತನ ಬಿಜೆಪಿ ಪಕ್ಷದ ಅಜೆಂಡಾ ಎಂದು ಹೇಳಿದರು ಹೇಳಿದರು. ತಮ್ಮ ಅನುಭವದ ಮಾತಿನಲ್ಲಿ ತಾನೂ ಬಿಜೆಪಿಯಲ್ಲಿ ಇದ್ದಾಗ ಮಂಗಳೂರಿನಲ್ಲಿ ವಿ ಎಸ್ ಆಚಾರ್ಯ ಸರ್ಧೆ ಮಾಡಿದ ಸಂದರ್ಭದಲ್ಲಿ ನಮಗೆ ಕಳ್ಳ ಓಟು ಹಾಕಲು ಹೇರಲಾಗಿದೆ. ಬಿಜೆಪಿ ಓಟುಗಳನ್ನು ಕದ್ದು ಅಧಿಕಾರಕ್ಕೆ ಬರುತ್ತೆ ವಿನಃ ನ್ಯಾಯ ಸಮ್ಮತವಾಗಿ ಅಲ್ಲ ಎಂದು ಹೇಳಿದರು. ಬಿಜೆಪಿಯವರು ಧರ್ಮ ಮತ್ತು ಪಾಕಿಸ್ತಾನದ ಹೆಸರನ್ನು ಬಳಸಿ ರಾಜಕೀಯ ಮಾಡುತ್ತಾ ಗೆದ್ದು ಬರುವುದು ಅದನ್ನು ಬಿಟ್ಟರೆ ಒಂದು ಸ್ಥಾನವನ್ನು ಪಡೆಯುವುದು! ಪಡೆಯಲು ಅಸಾಧ್ಯ, ನಮ್ಮ ದೇಶದ ಪ್ರಜಾಪ್ರಭುತ್ವ, ಸಾಂವಿಧಾನಿಕ, ಸಂಸ್ಕೃತಿ ಸಾಮರಸ್ಯಕ್ಕೆ, ಕೊಳ್ಳಿ ಇಟ್ಟವರು ಎಂದು ಹೇಳಿದರು. ಬಡ ಮನೆಯ ಹಿಂದೂ ಯುವಕರನ್ನು ಭಾವನಾತ್ಮಕವಾಗಿ ಕೆರಳಿಸಿ ಕೋಮು ಪ್ರಚೋದನೆ ಮಾಡಿ ಅವರ ಮೇಲೆ ಜಾಮೀನು ಸಿಗದ ಕೇಸ್ ಮಾಡಿಸಿ ಬದಿಗೆ ಸರಿಯುವ ಕೆಲಸ ಮಾಡುತ್ತಿದೆ. ಬಿಜೆಪಿ,ಆರ್ ಎಸ್ ಎಸ್ ಸಾವಿರ ಕೋಟಿ ಖರ್ಚು ಮಾಡಿ ಕಛೇರಿ ಮಾಡುತ್ತಾರೆ, ಆದರೆ ಭಜರಂಗದಳಕ್ಕೆ ಕಾರ್ಯವೇ ಇಲ್ಲಾ ? ಯಾಕೆ ಎಂದು ಪ್ರಶ್ನಿಸಿದರು. ಭಜರಂಗದಳದ ಕಾರ್ಯಕರ್ತರ ತಲೆಯ ಮೇಲೆ ಕೇಸು,ಬಿಜೆಪಿ ನಾಯಕರ ಕಿಸೆಯಲ್ಲಿ ಕಾಸು, ಅದುವೇ ಬಿಜೆಪಿಯ ಹಿಂದುತ್ವ ಸಿದ್ದಾಂತ, ಎಂದು ಮಾರ್ಮಿಕವಾಗಿ ನುಡಿದರು. ಇನ್ನಾದರೂ ಹಿಂದೂ ಯುವಕರು ಬಿಜೆಪಿಯ ನೈಜ ಮುಖವನ್ನು ಅರಿಯಿರಿ, ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಪ್ರಮುಖ ಹಿಂದುತ್ವವಾದಿಗಳಾದ ವಿನಯ ಕಟಿಯಾರ್, ತೊಗಾಡಿಯ,ಉಮಾ ಭಾರಿತಿ, ಮನೋಜ್ ಉಪಾಧ್ಯಾಯ, ಅಡ್ವಾಣಿ, ಇವರೆಲ್ಲರನ್ನು ಯಾವ ರೀತಿಯಲ್ಲಿ ಮೂಲೆಗುಂಪು ಪಟ್ಟಿ ? ಎಂದು ಬಿಜೆಪಿಯ ಅಸಲಿ ರಾಜಕರಣದ ಬಗ್ಗೆ ವಿಸ್ತಾರವಾಗಿ ವಿವರಿಸಿದರು


ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಅವರು ಮಾತನಾಡಿ ಬಿಜೆಪಿ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ ಶುದ್ಧತೆಗಾಗಿ ರಾಹುಲ್ ಗಾಂಧಿಯವರ ಹೋರಾಟಕ್ಕೆ ದೇಶದ ಪ್ರಜೆಗಳು ಕೈಜೋಡಿಸಿ, ದೇಶದ ಪ್ರಜಾಪ್ರಭುತ್ವ,ಸಂವಿಧಾನ, ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿಮಾಡಿದರು


ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ, ಭರತ್ ಮುಡೋಡಿ, ಪಿ ಸಿ ಜಯರಾಮ್, ರಾಧಕೃಷ್ಣ ಬೊಳ್ಳೂರು, ಟಿ ಎಂ ಶಹೀದ್, ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಸರಸ್ವತಿ ಕಾಮತ್, ಸಲೀಮ್ ಪೆರಂಗೋಡಿ, ಸಿದ್ದೀಕ್ ಕುಕ್ಕೊ, ಹಮೀದ್ ಕುತ್ತಮೊಟ್ಟೆ, ಶಾಫಿ ಕುತ್ತಮೊಟ್ಟೆ,, ರಾಜು ಪಂಡಿತ್, ಕೆ ಎಮ್ ಮುಸ್ತಾಫ್, ವಿಜಯಕುಮಾರ್ ಮೊದಲಾದವರು, ಸುಳ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸ್ವಾಗತಿಸಿ, ಭವಾನಿ ಶಂಕರ ಕಲ್ಮಡ್ಕ ವಂದಿಸಿದರು. ಶಶಿಧರ್ ಮಾಸ್ಟರ್, ರಂಜೀತ್ ರೈ ಮೆನಾಲ. ಕಾರ್ಯಕ್ರಮ ನಿರೂಪಿಸಿದರು




m

