AVSS ಸುಳ್ಯ ಶಾಖೆ ಮತ್ತು ಮೊಗೇರ ಸಂಘ ಇದರ ಜಂಟಿ ಆಶ್ರಯದಲ್ಲಿ ICAR – Central Costal Agricultural Research Institute , Ela , Goa. ಸಹಕಾರದಿಂದ ತೋಟಗಾರಿಕಾ ಬೆಳೆಗಳ ಕುರಿತು ಅರಿವು , ತರಭೇತಿ ಮತ್ತು ಕೃಷಿ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಸುಳ್ಯ ತಾಲೂಕು ಪಂಚಾಯತ್ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ICAR ಗೋವಾ ಇದರ ಅಧ್ಯಕ್ಷರು ಮತ್ತು ಹಿರಿಯ ವಿಜ್ಞಾನಿಗಳಾದ ಅಕುಲ್ ರೆಡ್ಡಿ ವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಜಣ್ಣ ಇವರು ಡಾ. ಬಿ.ಆರ್. ಅಂಬೇಡ್ಕರ್ ರವರ ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿ ಮಾತನಾಡುತ್ತ ICAR & AVSS ಸುಳ್ಯ ಶಾಖೆ ಸರಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸಂಸ್ಥೆಗೆ ಶುಭಹಾರೈಸಿ ಇದರ ಹಿಂದೆ ಶ್ರಮವಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಮುಖಂಡರಾದ ನಂದರಾಜ್ ಸಂಕೇಶ , ತೋಟಗಾರಿಕೆ ಇಲಾಖೆ ಸುಳ್ಯ ಇದರ ಸಹಾಯಕ ನಿರ್ದೇಶಕರಾದ ಪ್ರಮೋದ್ , ICAR ಗೋವಾ ಇದರ ಸಹಾಯಕ ವಿಜ್ಞಾನಿ ಓಮರ್ ಡಿಸೋಜ , ICAR ಪುತ್ತೂರಿನ ನಿರ್ದೇಶಕರು ಮಂಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಸುಳ್ಯದ ತೋಟಗಾರಿಕೆ ಇಲಾಖೆಯ ಅರ್ಭಣ್ಣ ಉಪಸ್ಥಿತರಿದ್ದರು. ಸುಳ್ಯ ತಾಲೂಕಿನ ಪರಿಶಿಷ್ಟ ಜಾತಿಯ 25 ಫಲಾನುಭವಿಗಳು ಸವಲತ್ತುಗಳನ್ನು ಪಡೆದುಕೊಂಡರು. ಪ್ರಕಾಶ್ ಪಿ.ಎಸ್ ಪಾತೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಶ್ರೀಮತಿ , ಹರಿಣಾಕ್ಷಿ ಮಹಾಬಲಡ್ಕ ಪ್ರಾರ್ಥಿಸಿ ಎಲ್ಲರನ್ನೂ ಸ್ವಾಗತಿಸಿದರು ಮತ್ತು ಚಂದ್ರಶೇಖರ ಪಲ್ಲತಡ್ಕ ವಂದಿಸಿದರು. ಕಾರ್ಯಕ್ರಮವು ಸುಳ್ಯ ತಾಲೂಕು AVSS ಸುಳ್ಯ ಶಾಖೆಯ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ ಇವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಡೆಯಿತು.




m
