ಸುಳ್ಯ: ಮೈಸೂರಿನಿಂದ ಪ್ರವಾಸ ಮುಗಿಸಿ ತುಮಕೂರಿಗೆ ಹಿಂದಿರುಗುತ್ತಿದ್ದ ಮಿನಿ ಬಸ್ ಇಂದು ಮುಂಜಾನೆ ಸುಳ್ಯ ತಾಲೂಕಿನ ಪರಿವಾರಕಾನ ಗಾಡ್ ಶೆಡ್ ಬಳಿ ಅಪಘಾತಕ್ಕೀಡಾಯಿತು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆ ಪಕ್ಕದ ಹಳ್ಳಕ್ಕೆ ಪಲ್ಟಿಯಾದ ಘಟನೆ ವರದಿಯಾಗಿದೆ.
ಅಪಘಾತದ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ನೆರವಾಗಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

