Featured, ಇತರೆ, ಸ್ಥಳೀಯ

ಸುಳ್ಯ : ಮಂಗಳೂರು ಮೂಲದ ಉದ್ಯಮಿ ಕಮಾಲುದ್ದೀನ್ ಜನತಾ ನಿಧನ

ಸುಳ್ಯ

ಸುಳ್ಯದ ಪ್ರತಿಷ್ಠಿತ ದಿನಸಿ ಮಳಿಗೆ ಜನತಾ ಸ್ಟೋರ್ಸ್ ನಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರತರಾಗಿದ್ದ ಮಂಗಳೂರು ಮೂಲದ ಉದ್ಯಮಿ ಕಮಾಲುದ್ದೀನ್ (54) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನ ಹೊಂದಿದರು.
ಮೃತರು ಕೊಡುಗೈದಾನಿ, ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ನಿರ್ಮಾತೃ ಹಾಗೂ ಸುಳ್ಯ ಅನ್ಸಾರಿಯ ಅನಾಥಾಲಯದ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಹಾಜಿ ಮಹಮ್ಮದ್ ಜನತಾ ಅವರ ಪತ್ನಿಯ ಸಹೋದರರಾಗಿದ್ದರು.
ಮೃತರು ಪತ್ನಿ ಸೌದ ಬಾನು, ಮಕ್ಕಳಾದ ಮಹಮ್ಮದ್ ಸಿಜಾಲ್, ಮರ್ಯಂ ಸಿಮನ್, ಮೈಮೂನಾ ಸನಾ, ಫಾತಿಮಾ ಸಬಾ ಸೇರಿದಂತೆ ಅಪಾರ ಕುಟುಂಬಸ್ಥರು ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.
ಇವರ ಜನಾಝಾ ಕ್ರಿಯೆಗಳು ಮಂಗಳೂರು ಕುದ್ರೋಳಿಯಲ್ಲಿರುವ ಅವರ ತಾಯಿ ಮನೆಯಲ್ಲಿ ಜರುಗಲಿದ್ದು, ಅಸರ್ ನಮಾಜ್ ನಂತರ ಮಂಗಳೂರು ಕುದ್ರೋಳಿ ಕಂಡತ್ ಪಳ್ಳಿ ಖಬರ್ ಸ್ಥಾನದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ನಿಧನಕ್ಕೆ ಸುಳ್ಯದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ವ್ಯಾಪಾರ ವಲಯದಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ.

Related Posts