ಗ್ರಾಮ ಪಂಚಾಯತ್ ಸವಣೂರು ವ್ಯಾಪ್ತಿಯ ವಾರ್ಡ್ ನಂ.2 ಮತ್ತು ವಾರ್ಡ್ ನಂ. 3 ರ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ 20 ಅರ್ಹ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ವಿತರಣೆ ಕಾರ್ಯಕ್ರಮವು ಗಣರಾಜ್ಯೋತ್ಸವ ದಿನದಂದು ಸವಣೂರಿನಲ್ಲಿ ನಡೆಯಿತು.

ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮಿರಾಝ್ ಸುಳ್ಯ, ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ, ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಜಾಕ್ ಕೆನರಾ, ಬಾಬು ಸವಣೂರು, ಶ್ರೀಮತಿ ಚೆನ್ನು, ರಫೀಕ್ ಎಂ.ಎ, ಎಸ್‌ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಕೆನರಾ, ಸುಹೈಲ್ ಸುಳ್ಯ, ಸಿದ್ದೀಕ್ ಸಿಎ, ಉಮರ್ ಹಾಜಿ ಕೆನರಾ, ಅಲ್ ಇಹ್ಸಾನ್ ಯೂತ್ ಕೌನ್ಸಿಲ್ ಅಧ್ಯಕ್ಷರಾದ ಬಶೀರ್ ಕೆನರಾ, ಕೇಶವ ಮಾಂತೂರು, ಉಗ್ಗಪ್ಪ ಮುಂಡತ್ತಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

