Featured, ಅಂಕಣ, ಸ್ಥಳೀಯ

ನೆಟ್ಟಣ ಸಂತ ಮಾರಿಯಮ್ಮ ಚರ್ಚ್‌ನಲ್ಲಿ ಜೆ.ಎಂ.ಜೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ ಯಶಸ್ವಿ

ನೆಟ್ಟಣ:ನೆಟ್ಟಣದ ಸಂತ ಮಾರಿಯಮ್ಮನವರ ಚರ್ಚ್‌ನಲ್ಲಿ ಜೆ.ಎಂ.ಜೆ ಆಸ್ಪತ್ರೆ, ಕಡಬ ಇವರ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಸಂತ ಮಾರಿಯಮ್ಮನವರ ಚರ್ಚ್, ನೆಟ್ಟಣ ಹಾಗೂ ಎಸ್‌ಎಂವೈಎಂ ಮತ್ತು ಕೆಎಸ್‌ಎಂಸಿಎ, ಮಾತೃವೇದಿ ಸಂಘಟನೆಗಳ ಸಹಯೋಗದಲ್ಲಿ ನಡೆದ ಈ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಸಾಮಾನ್ಯ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು.

ಕಾರ್ಯಕ್ರಮವು ರೆ. ಫಾ. ಆದರ್ಶ್ ಪುದಿಯೇದತ್ತು, ಚರ್ಚ್ ವಿಕರ್ ಅವರ ನೇತೃತ್ವದಲ್ಲಿ ನಡೆಯಿತು. ಡಿಕೆಆರ್‌ಡಿಎಸ್‌ನ ರೆ. ಫಾ. ಬಿನೋಯ್ ಮಾಳಿಯೇಕಲ್ ಅವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುದೀರ್ ಶೆಟ್ಟಿ (ಪಂಚ ಗ್ಯಾರಂಟೀ ಅನುಷ್ಠಾನ ಅಧ್ಯಕ್ಷರು), ಶಾರದಾ ದಿನೇಶ್ (ಅಧ್ಯಕ್ಷರು, ಗ್ರಾಮ ಪಂಚಾಯತ್ ಬಿಳಿನೆಲೆ), ಬಿಂದು ರೆಜಿ (ಮಾತೃವೇದಿ ಅಧ್ಯಕ್ಷರು, ನೆಟ್ಟಣ ಚರ್ಚ್), ರಾಜೇಶ್ (ಕೆಎಸ್‌ಎಂಸಿಎ ಅಧ್ಯಕ್ಷರು), ಸಭಾಸ್ಟೀನ್ ಪಿ.ಪಿ (ಎಸ್‌ಎಂವೈಎಂ ನೆಟ್ಟಣ ಅಧ್ಯಕ್ಷರು) ಉಪಸ್ಥಿತರಿದ್ದರು.

ಜೆ.ಎಂ.ಜೆ ಆಸ್ಪತ್ರೆಯ ಆಡಳಿತ ಅಧಿಕಾರಿ ಸಿಸ್ಟರ್ ಶಿಜಿ ಜಾರ್ಜ್, ಜೆ.ಎಂ.ಜೆ ಕಾನ್ವೆಂಟ್ ಕಡಬದ ಸುಪೀರಿಯರ್ ಸಿಸ್ಟರ್ ರೋಸಾಕುಟ್ಟಿ, ವೈದ್ಯರಾದ ಡಾ. ಆದರ್ಶ ಸಂಗಾತಿ (ಎಂ.ಬಿ.ಬಿ.ಎಸ್ ಎಂ ಡಿ) ಹಾಗೂ ಡಾ. ಎಂಜೆಲ್, ಸಂಸ್ಥೆಯ ಪಿಆರ್‌ಒ ರಂಜಿತ್ ಅವರು ಶಿಬಿರದಲ್ಲಿ ಭಾಗವಹಿಸಿದ್ದರು. ಅಲ್ಲದೆ, ಸಂಸ್ಥೆಯ ದಾದಿಯರಾದ ಡೈಸಿ ಮತ್ತು ವಿಜಯ, ಲ್ಯಾಬ್ ತಂತ್ರಜ್ಞೆ ರೋಶಿನಿ ಹಾಗೂ ಫಾರ್ಮಸಿ ಸಿಬ್ಬಂದಿ ನಸೀಬಾ ಶಿಬಿರದಲ್ಲಿ ಸೇವೆ ಸಲ್ಲಿಸಿದರು. ಟ್ರಸ್ಟಿಗಳಾದ ಜಿಬಿನ್ ಹಾಗೂ ಬೇಬಿ ಅವರು ಸಹ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಅನುಜ ಅವರು ನೆರವೇರಿಸಿದರು. ಅನಿ ರಾಜೇಶ್ ಅವರು ಎಲ್ಲರಿಗೂ ಸ್ವಾಗತಿಸಿ, ತ್ರೆಸ್ಸ್ಯಾ ಅವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಆಕಾಶ್ ಹಾಗೂ ಜೆಸ್ಟಿನ್ ಅವರು ಉತ್ತಮ ಸಹಕಾರ ನೀಡಿದರು.

ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಇಂತಹ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಉಪಯುಕ್ತವಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಶಿಬಿರಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಜೆ.ಎಂ.ಜೆ ಆಸ್ಪತ್ರೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

Related Posts