Featured, ಇತರೆ, ಸ್ಥಳೀಯ

ಮಡಿಕೇರಿ : ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಮಜೀದ್ ಕೊಡ್ಲಿಪೇಟೆ ಸಂಚರಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ

ಕುಶಲನಗರ ರಸ್ತೆಯಲ್ಲಿ ಎಂಜಿನ್ ಭಾಗದಿಂದ ಹೊಗೆ – ಸಮಯಕ್ಕೆ ಕಾರಿನಿಂದ ಹೊರಬಂದ ಮಜೀದ್ ಕೊಡ್ಲಿಪೇಟೆ,ಚಾಲಕ ಸುರಕ್ಷಿತ

ಮಡಿಕೇರಿ/ಕುಶಲನಗರ:
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜೀದ್ ಕೊಡ್ಲಿಪೇಟೆ ಅವರು ಸಂಚರಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಮಡಿಕೇರಿ ಜಿಲ್ಲೆಯ ಕುಶಲನಗರ ಸಮೀಪ ಶನಿವಾರ ರಾತ್ರಿ  ಸಂಭವಿಸಿದೆ. ಉಡುಪಿಯಲ್ಲಿ ನಡೆದ ಸಭೆಯನ್ನು ಮುಗಿಸಿ ಹಿಂದಿರುಗುವ ಸಂದರ್ಭ ಮಡಿಕೇರಿ–ಕುಶಲನಗರ ರಸ್ತೆಯಲ್ಲಿ ಕಾರು ಸಾಗುತ್ತಿದ್ದ ವೇಳೆ, ಎಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.

ತಕ್ಷಣ ಪರಿಸ್ಥಿತಿಯನ್ನು ಗಮನಿಸಿದ ಚಾಲಕ ಸಮೀರ್ ಹಾಗೂ ಮಜೀದ್ ಕೊಡ್ಲಿಪೇಟೆ ಅವರು ಕಾರಿನಿಂದ ಹೊರಬಂದು ತಮ್ಮನ್ನು ತಾವು ರಕ್ಷಿಸಿಕೊಂಡಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಆದರೆ, ಈ ಅವಘಡದಲ್ಲಿ ಕಾರು ಭಾಗಶಃ ಸುಟ್ಟುಹೋಗಿದೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರಿಗೆ ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Related Posts