ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಇನ್ನೂ ಮುಂದುವರಿದಿದ್ದು, ಇದರ ವಿರುದ್ಧ ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿರುವುದರಿಂದ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಯುದ್ಧದ ಪರಿಣಾಮವಾಗಿ ಇಸ್ರೇಲ್ & ಇರಾನ್ ನ ಹಲವು ಪ್ರದೇಶಗಳು ನಾಶವಾಗಿ ಭೀಕರ ಸ್ಥಿತಿಗೆ ತಲುಪಿರುವುದಾಗಿ ವರದಿಗಳು ಸೂಚಿಸುತ್ತವೆ.

ಯುದ್ಧದಿಂದ ಸಂಕಷ್ಟಕ್ಕೊಳಗಾದ ಇರಾನ್‌ಗೆ ಭಾರತ ಮಾನವೀಯ ನೆರವು ನೀಡಿದ್ದು, ಅಗತ್ಯ ವೈದ್ಯಕೀಯ ಸಾಮಗ್ರಿಗಳ ಕಿಟ್‌ಗಳನ್ನು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ ಹಸ್ತಾಂತರಿಸಿದೆ. ಗಾಯಾಳುಗಳು ಮತ್ತು ಸಾಮಾನ್ಯ ನಾಗರಿಕರಿಗೆ ತುರ್ತು ಚಿಕಿತ್ಸೆ ಒದಗಿಸಲು ಈ ನೆರವು ಉಪಯುಕ್ತವಾಗಲಿದೆ ಎಂದು ತಿಳಿದುಬಂದಿದೆ.
ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಭಾರತ ಕೈಗೊಂಡಿರುವ ಈ ಕ್ರಮ ಮಾನವೀಯತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.




m
