ಉಚಿತ ಅಂಬುಲನ್ಸ್ ಸೇವೆ ಸಲ್ಲಿಸಿದ AIKMCC
ಧರ್ಮಸ್ಥಳದಿಂದ ಮೈಸೂರು ಸಂಚರಿಸುವ ವೇಳೆ ಮೈಸೂರು ಮೂಲದ ಚೇತನ 30 ವರ್ಷ ಎಂಬ ಯುವಕನಿಗೆ ತೀವ್ರ ಎದೆನೋವು ಬಂದು ಆಸ್ಪತ್ರೆಗೆ ದಾಖಲಾದ ಘಟನೆ ಕಲ್ಲುಗುಂಡಿಯಿಂದ ವರದಿಯಾಗಿದೆ,

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ ತೀವ್ರ ಅಸ್ವಸ್ಥಗೊಂಡು ಕಲ್ಲುಗುಂಡಿಯಲ್ಲಿ ಇಳಿದ ತಕ್ಷಣವೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರಾದ ರಫೀಕ್ ಕರಾವಳಿ, ರಫೀಕ್ ಪ್ರಗತಿ ಹಾಗೂ ಅಬೂಬಕ್ಕರ್ ತಕ್ಷಣ ನೆರವಿಗೆ ಧಾವಿಸಿ, ತಮ್ಮ ಜೀಪಿನಲ್ಲಿ ಸಂಪಾಜೆ ಆಸ್ಪತ್ರೆಗೆ ಕರೆದೊಯ್ದರು.
ಸಂಪಾಜೆ ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಇದರ ಮೇರೆಗೆ ಸುಳ್ಯ ಅಂಬುಲನ್ಸ್ ಚಾಲಕ-ಮಾಲಕರ ಸಂಘ ಹಾಗೂ AIKMCC ಅಂಬುಲನ್ಸ್ ಸೇವೆಯ ಸಹಕಾರದಿಂದ ಯುವಕನನ್ನು ಉಚಿತವಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಪ್ರಸ್ತುತ ಯುವಕ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ತಿಳಿದು ಬಂದಿದೆ. ಯುವಕ ಒಬ್ಬರೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಮಾನವೀಯತೆ ಮೆರೆದ ಕಲ್ಲುಗುಂಡಿ ಯುವಕರಿಗೆ ಸುಳ್ಯ ಅಂಬುಲನ್ಸ್ ಯೂನಿಯನ್ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಗಿದೆ.




m
