ಶುಕ್ರವಾರದಿಂದ ಎರಡು ದಿನಗಳಲ್ಲಿ ತೆರವುಗೊಳಿಸುತ್ತೆವೆ ಎಂದು ಭರವಸೆ ನೀಡಿದ ಜಾಹೀರಾತು ಸಂಸ್ಥೆ

ಸುಳ್ಯ : ಮಾರ್ಚ್ 28ರಂದು ಬೀಸಿದ ಭಾರಿ ಗಾಳಿ ಮಳೆಗೆ ಸುಳ್ಯ ನಗರದ ಮಸೀದಿ ಸಮೀಪದ ಕಟ್ಟಡದ ಮೇಲಿದ್ದ ಬೃಹತ್ ಉಕ್ಕಿನ ಜಾಹೀರಾತು ಫಲಕವು ಕುಸಿದು ಅಪಾಯಕಾರಿ ಸ್ಥಿತಿಗೆ ತಲುಪಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇನ್ನೂ ಗಂಭೀರವಾಗಿಯೇ ಉಳಿದಿತ್ತು. ಈ ಕುರಿತು ನಗರ ಪಂಚಾಯತ್ ಮಾಜಿ ಸದಸ್ಯ ಶರೀಫ್ ಕಂಠಿ ಯವರು ಅಪಾಯಕಾರಿ ಸ್ಥಿತಿಯಲ್ಲಿದ್ದ ಜಾಹಿರಾತು ಫಲಕದ ಉಕ್ಕಿನ ಚೌಕಟ್ಟನ್ನು ತೆರವು ಗೊಳಿಸಲು ಆಡಳಿತಕ್ಕೆ ಮನವಿ ಸಲಿಸಿದ್ದರು ಈ ಕುರಿತು ನಿನ್ನೆ ರಾತ್ರಿ ಈವಾರ್ತೆ ಪ್ರತಿನಿಧಿಗಳು ಕಟ್ಟಡದ ಮಾಲಕರು ಮತ್ತು ಜಾಹೀರಾತು ಅಳವಡಿಸಿದ ಸಂಸ್ಥೆಯ ಮುಖ್ಯಸ್ಥರಾದ ಸೆಂಚುರಿ ಬೃಹತ್ ವಸ್ತ್ರ ಮಳಿಗೆಯ ಮಾಲಕರಾದ ಫರಾಝ್ ಮಹಮ್ಮದ್ ಅವರಲ್ಲಿ ವಿಚಾರಿಸಿದಾಗ ಶುಕ್ರವಾರದಿಂದ ಎರಡು ದಿನಗಳ ನಡುವೆ ಅದನ್ನು ತೆರವು ಗೊಳಿಸುತ್ತೆವೆ ಎಂದು ಭರವಸೆ ನೀಡಿದರು ಇಂದು ಬೆಳಿಗ್ಗೆ ನುರಿತ ತಂಡ ಬಂದು ಕಟ್ಟಡದ ಮೇಲಿದ್ದ ಅಪಾಯಕಾರಿ ಉಕ್ಕಿನ ಚೌಕಟ್ಟನ್ನು ತೆರವು ಗೊಳಿಸಿರುತ್ತಾರೆ ಎಂದು ತಿಳಿದುಬಂದಿದೆ




m
