Featured, ಇತರೆ, ಸ್ಥಳೀಯ

ಆರಂತೋಡಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಆರಂತೋಡು, ಮೇ 28: ತ್ಯಾಗ, ಬಲಿದಾನ ಹಾಗೂ ಸಹೋದರತ್ವದ ಸಂದೇಶ ಸಾರುವ ಪವಿತ್ರ ಬಕ್ರೀದ್ ಹಬ್ಬವನ್ನು ಆರಂತೋಡಿನಲ್ಲಿ ಮುಸ್ಲಿಂ ಬಾಂಧವರು ಸಂಭ್ರಮ ಹಾಗೂ ಭಕ್ತಿ ಭಾವದಿಂದ ಆಚರಿಸಿದರು.
ಈ ಪ್ರಯುಕ್ತ ಆರಂತೋಡು ಮಸೀದಿಯಲ್ಲಿ ವಿಶೇಷ ಈದ್ ನಮಾಜ್ ನಡೆಯಿತು. ಆಸೀಫ್ ಆಝಹರಿ ಕೊಡಗು ಅವರ ನೇತೃತ್ವದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು. ತಮ್ಮ ಸಂದೇಶದಲ್ಲಿ ಅವರು ತ್ಯಾಗ, ಮಾನವೀಯತೆ, ಪರಸ್ಪರ ಸಹಕಾರ ಮತ್ತು ಸಹೋದರತ್ವದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಪದಾಧಿಕಾರಿಗಳು, ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ನಮಾಜ್ ಬಳಿಕ ಪರಸ್ಪರ ಶುಭಾಶಯ ಕೋರಿ, ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಆರಂತೋಡಿನಲ್ಲಿ ಬಕ್ರೀದ್ ಹಬ್ಬವು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ವಾತಾವರಣದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.
m

Related Posts