ಅರಂತೋಡು, ಜೂ. 9: ಅರಂತೋಡಿನ ಬದ್ರಿಯಾ ಜುಮಾ ಮಸೀದಿಯ ಮೇಲಂತಸ್ತು ನಿರ್ಮಾಣ ಕಾಮಗಾರಿಗೆ ಹಾಗೂ ನುಸ್ರತುಲ್ ಇಸ್ಲಾಂ ಮದರಸದ ನೂತನ ಕಟ್ಟಡ ನಿರ್ಮಾಣಕ್ಕೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೊಯ ತಂಙಳ್ ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಸೀದಿ ಮತ್ತು ಮದರಸ ಅಭಿವೃದ್ಧಿಗೆ ವಸ್ತು ಹಾಗೂ ಧನಸಹಾಯ ನೀಡಿದ ದಾನಿಗಳು, ವಕ್ಫ್ ಇಲಾಖೆ ಹಾಗೂ ಅನುದಾನ ತರಿಸಲು ಶ್ರಮಿಸಿದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅವರನ್ನು ಅಭಿನಂದಿಸಿದರು. ಅಲ್ಲದೆ ಯೋಜನೆ ಯಶಸ್ವಿಯಾಗಲೆಂದು ವಿಶೇಷ ದುವಾ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಎಂ. ಶಹೀದ್ ತೆಕ್ಕಿಲ್ ವಹಿಸಿದ್ದರು. ಸ್ಥಳೀಯ ಖತೀಬ್ ಆಸಿಫ್ ಅಝ್ಹರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಸ್ವಾಗತಿಸಿದರು.

ಸಮಾರಂಭದಲ್ಲಿ ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ, ಹಾಜಿ ಇಬ್ರಾಹಿಂ ಕತ್ತರ್, ಹಮೀದ್ ಹಾಜಿ ಸುಳ್ಯ, ಹಾಜಿ ಹೆಚ್.ಎ. ಅಬ್ಬಾಸ್ ಕಲ್ಲುಗುಂಡಿ, ಮಹಮ್ಮದ್ ನವಾವಿ ಮುಂಡೋಳೆ, ತಾಜ್ ಮೊಹಮ್ಮದ್ ಸಂಪಾಜೆ, ಹಸೈನಾರ್ ಧರ್ಮತಣಿ, ನ್ಯಾಯವಾದಿ ಮೂಸಾ ಪೈಂಬಚ್ಚಾಲ್, ಅಹ್ಮದ್ ಸುಫ್ರಿಮ್, ಅಹಮ್ಮದ್ ಪಾರೆ, ಪೆರಾಜೆ ಜಮಾಅತ್ ಅಧ್ಯಕ್ಷ ನಾಸಿರ್ ಇಂಜಿನಿಯರ್, ಅರಂತೋಡು ಜಮಾಅತ್ ಕಾರ್ಯದರ್ಶಿ ಕೆ.ಎಂ. ಮೂಸಾನ್, ಮದರಸ ಉಸ್ತುವಾರಿ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕೋಶಾಧಿಕಾರಿ ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ಉಪಾಧ್ಯಕ್ಷ ಹಾಜಿ ಕೆ.ಎಂ. ಮಹಮ್ಮದ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್ ಎಸ್.ಇ., ಸ್ವಲಾತ್ ಕಮಿಟಿ ಅಧ್ಯಕ್ಷ ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ, ದುಬೈ ಸಮಿತಿ ಗೌರವಾಧ್ಯಕ್ಷ ಹಾಜಿ ಬದುರುದ್ದೀನ್ ಪಠೇಲ್, ಸೈಫುದ್ದೀನ್ ಪಠೇಲ್, ರಹೀಂ ಉದಯನಗರ, ಅನ್ವಾರ್, ಸೌದಿ ಸಮಿತಿಯ ಇಸಾಕುದ್ದೀನ್, ಸ್ವಲಾತ್ ಸಮಿತಿ ಕೋಶಾಧಿಕಾರಿ ಸಂಶುದ್ದೀನ್ ಪೆಲ್ತಡ್ಕ, ಎ.ಹೆಚ್.ವೈ.ಎ. ಉಪಾಧ್ಯಕ್ಷ ಅಝಾರುದ್ದೀನ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಮನ್ಸೂರ್ ಪಾರೆಕ್ಕಲ್, ಕೆ.ಎಂ. ಮೊಯಿದು ಕುಕ್ಕುಂಬಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಮಸೀದಿಗಳ ಖತೀಬರಾದ ರುಕ್ಮಾನುಲ್ ಹಕೀಮ್ ಸಂಪಾಜೆ, ನಾಸಿರ್ ದಾರಿಮಿ ಕಲ್ಲುಗುಂಡಿ, ಮೋಈನುದ್ದೀನ್ ಫೈಝಿ, ಅಬ್ದುಲ್ ಖಾದರ್ ಫೈಝಿ ಐವರ್ನಾಡು, ಮಹಮ್ಮದ್ ಶಮೀಮ್ ಅರ್ಷದಿ ಮಂಡೆಕೋಲು, ಟಿ.ಎಂ. ಜಾವೇದ್ ತೆಕ್ಕಿಲ್, ರವೂಫ್ ಅಝ್ಹರಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಮುಜೀಬ್ ಅರಂತೋಡು, ಎ.ಎ. ಹನೀಫ್, ಸಂಶುದ್ದೀನ್ ಕ್ಯೂರ್, ಎಸ್.ಕೆ. ಹನೀಫ್ ಸಂಪಾಜೆ, ಪಸೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.





m
