ನಮ್ಮ ದೇಶದಲ್ಲಿ ಇವತ್ತು ದೊಡ್ಡ ದೊಡ್ಡ ಸಮಸ್ಯೆಗಳಿಗಿಂತ ಚಿಕ್ಕ ಚಿಕ್ಕ ಸಮಸ್ಯೆಯೇ ದೊಡ್ಡ ತಲೆನೋವು. ಈಗ ನಿಜವಾದ ವಿಷಯಕ್ಕೆ ಬರೋಣ.ಉದಾಹರಣೆಗೆ ಬಸ್ ನಿಲ್ದಾಣ.ಒಂದು ಬಸ್ ನಿಲ್ದಾಣ ಅಂದರೆ ಹೇಗಿರಬೇಕು?ಮುರಿದ ಶೀಟ್, ಶಿಥಿಲಾವಸ್ಥೆಯಲ್ಲಿರುವ ಬಣ್ಣ,ನೆಲದ ತುಂಬಾ ತ್ರಿದೇವ್, ಪಾನ್ ಪರಾಗ್ ಪ್ಯಾಕೇಟ್ಗಳು, ಗೋಡೆಯನ್ನು ಅಲಂಕರಿಸಿದ ಅಶ್ಲೀಲ ಬರಹಗಳು!? ಬಸ್ಸ್ ನಿಲ್ದಾಣಗಳು ಹೀಗಿರಬೇಕೇ?
ಬುದ್ಧ ಬಸವರು ಜನಿಸಿದ ಭಾರತದಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇ ಪುಣ್ಯವಂತರಲ್ಲವೇ? ನಿಜ ಇಂದು ನಮ್ಮ ಭಾರತ ಯಾವ ಕ್ಷೇತ್ರದಲ್ಲಿ ಕಮ್ಮಿ ಹೇಳಿ? ಭರದಿಂದ ಸಾಗುತ್ತಿರುವ ಆರ್ಥಿಕ ಮುಂದುವರಿಕೆ, ಉತ್ತಮ ನಾಯಕತ್ವ . ಹಾಗೆಂದ ಮಾತ್ರಕ್ಕೆ ಇಂದು ನಮ್ಮ ಭಾರತದಲ್ಲಿ ಎಲ್ಲವೂ ಸರಿಯಾಗಿ ಇದೆಯೇ? ಒಂದು ಬಾರಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋಣ ಪ್ರಶ್ನಿಸಿಕೊಂಡಾಗ ಇದಕ್ಕೆ ಉತ್ತರವಿಲ್ಲ.
ನಮ್ಮ ದೇಶದಲ್ಲಿ ಇವತ್ತು ದೊಡ್ಡ ದೊಡ್ಡ ಸಮಸ್ಯೆಗಳಿಗಿಂತ ಚಿಕ್ಕ ಚಿಕ್ಕ ಸಮಸ್ಯೆಯೇ ದೊಡ್ಡ ತಲೆನೋವು. ಈಗ ನಿಜವಾದ ವಿಷಯಕ್ಕೆ ಬರೋಣ.ಉದಾಹರಣೆಗೆ ಬಸ್ ನಿಲ್ದಾಣ.ಒಂದು ಬಸ್ ನಿಲ್ದಾಣ ಅಂದರೆ ಹೇಗಿರಬೇಕು?ಮುರಿದ ಶೀಟ್, ಶಿಥಿಲಾವಸ್ಥೆಯಲ್ಲಿರುವ ಬಣ್ಣ,ನೆಲದ ತುಂಬಾ ತ್ರಿದೇವ್, ಪಾನ್ ಪರಾಗ್ ಪ್ಯಾಕೇಟ್ಗಳು, ಗೋಡೆಯನ್ನು ಅಲಂಕರಿಸಿದ ಅಶ್ಲೀಲ ಬರಹಗಳು ಬಸ್ಸ್ ನಿಲ್ದಾಣಗಳು ಹೀಗಿರಬೇಕೇ?
ಇಂದು ಎಲ್ಲಾ ಭಾಗಗಳಲ್ಲಿ ಅಲ್ಲದಿದ್ದರೂ ಬಹುತೇಕ ಬಸ್ಸ್ ನಿಲ್ದಾಣಗಳ ಸ್ಥಿತಿ ಇದುವೇ ಆಗಿದೆ. ಯಾಕೆ ಹೀಗೆ? ಸಾರ್ವಜನಿಕ ಸ್ವತ್ತು ಅಂದರೆ ಅಷ್ಟು ಕೇವಲವೇ? ಇಂತಹ ಕೆಲಸಗಳನ್ನು ವಿದ್ಯಾವಂತರು ಮಾಡಲು ಸಾದ್ಯವೇ?ಈಗಿನ ಕಾಲದ ಪರಿಸ್ಥಿತಿ ಹೇಗಿದೆ ಎಂದರೆ ನಾವು ಹೆಚ್ಚು ಹೆಚ್ಚು ಕಲಿಯುತ್ತಾ ಹೋದಂತೆ ದಡ್ಡರಾಗುತ್ತಾ ಹೋಗುತ್ತಿದ್ದೇವೆ.ಬಸ್ಸ್ ನಿಲ್ದಾಣ ಗಳು ಇವತ್ತು ಜನರು ಕುಳಿತುಕೊಳ್ಳುವ ಸ್ಥಳವಾಗಿ ಉಳಿದಿಲ್ಲ ಬದಲಾಗಿ ಕಸ ಹಾಕಲು ಒಂದು ಸ್ಥಳ.ಎಷ್ಟು ಸ್ವಚ್ಛಗೊಳಿಸಿದರೂ ಮತ್ತೆ ಅದೇ ಸ್ಥಿತಿ.ಪ್ಲಾಸ್ಟಿಕ್ ಬಾಟಲಿಗಳು, ಬೀಡಿ ಸಿಗರೇಟು ಚೂರುಗಳು ಅಬ್ಬಬ್ಬಾ! ಒಂದೋ ಎರಡೋ ಹೇಳತೀರದು.
ಒಂದೊಂದು ಬಾರಿ ಅನಿಸುತ್ತದೆ ಈ ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ವಾಸಿ ಎಂದು ಯಾಕೆ ಗೊತ್ತೆ? ಉದಾಹರಣೆಗೆ ಬೆಕ್ಕನ್ನು ತೆಗೆದುಕೊಳ್ಳಿ,ಅದು ಶೌಚ ಮಾಡಿ ಅದನ್ನು ಯಾರಿಗೂ ಕಾಣಬಾರದೆಂದು ಮುಚ್ಚಿ ಬಿಡುತ್ತದೆ.ಮೆಚ್ಚಬೇಕು ಅದರ ಬುದ್ಧಿವಂತಿಕೆಗೆ.ಆದರೆ ನಾವು ಕಂಡ ಕಂಡಲ್ಲಿ ಕಸ ಎಸೆಯುತ್ತೇವೆ.
ಇದು ಬಸ್ ನಿಲ್ದಾಣಗಳ ಒಂದು ಮುಖವಾದರೆ ಇನ್ನೊಂದು ಬೇರೆಯೇ.ಕಾಲೇಜು ಮುಗಿಸಿ ಬಂದು ನೆಮ್ಮದಿ ಆಗಿ ಕುಳಿತುಕೊಳ್ಳೋಣ ಎಂದರೆ ಒಂದು ವಿಚಿತ್ರ ಭಯ. ಕಾರಣ ಇಷ್ಟೇ ಸುರಪಾನ ಮಾಡಿದವರ ಭಯ. ಒಮ್ಮೊಮ್ಮೆ ಇದು ಬಸ್ ನಿಲ್ದಾಣವೋ ಅಥವಾ ಸುರಪಾನದವರ ಅಡ್ಡವೋ ಅನಿಸುವುದುಂಟು. ಚಿತ್ರ ವಿಚಿತ್ರ ಮುಖ ಭಾವಗಳು,ಅವರ ವರ್ತನೆ, ತೊದಲು ನುಡಿ ಅಬ್ಬಬ್ಬಾ ಅವರು ಕೂಡ ಯಾವುದೇ ನಟರಿಗೂ ಕಮ್ಮಿ ಇಲ್ಲ ಎನಿಸಿ ಬಿಡುತ್ತಾರೆ.ಆದರೆ ಇದು ತಮಾಷೆಯಾಗಿ ಕಂಡರೂ ಇದರಿಂದ ಅಲ್ಲಿ ಕುಳಿತುಕೊಳ್ಳಲು ಭಯ ಪಡುವವರಿದ್ದಾರೆ, ಕುಳಿತುಕೊಳ್ಳಲು ಮುಜುಗರ ಪಡುತ್ತಾರೆ.ಒಮ್ಮೊಮ್ಮೆ ಅನಿಸಿ ಬಿಡುತ್ತದೆ ಇದು ಸಾರ್ವಜನಿಕ ಸ್ಥಳಗಳೋ ಅಥವಾ ಕುಡುಕರ ಅಡ್ಡವೋ ಎಂದು. ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ.
ಇದೆಲ್ಲಾ ನೋಡಲು ಸಣ್ಣ ಸಮಸ್ಯೆಯೇ ಆಗಿರಬಹುದು.ಆದರೆ ಇದೇ ಸಮಸ್ಯೆ ಮುಂದೊಂದು ದಿನ ದೊಡ್ಡದಾಗಿ ಇನ್ನೇನೋ ಆಗಬಾರದಲ್ಲವೇ?
ಸಾರ್ವಜನಿಕ ಸ್ಥಳಗಳನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಯಾವುದೋ ದೊಡ್ಡ ದೊಡ್ಡ ಸಮಸ್ಯೆಗಳನ್ನು ಪರಿಹರಿಸುವ ಸರ್ಕಾರಕ್ಕೆ ಇದು ಅಸಾಧ್ಯವೇ?
ಬರಹ:- ಪ್ರಾಪ್ತಿ ಗೌಡ





m
